Categories
ತೀರ್ಥಹಳ್ಳಿ

ತೀರ್ಥಹಳ್ಳಿ ಬ್ರಾಹ್ಮಣ ಸಂಘ ರಾಜ್ಯಕ್ಕೆ ಮಾದರಿ

ತೀರ್ಥಹಳ್ಳಿ ಬ್ರಾಹ್ಮಣ ಸಂಘ ರಾಜ್ಯಕ್ಕೆ ಮಾದರಿ
– ಬ್ರಾಹ್ಮಣ ಕೂಡು ಕುಟುಂಬ ಮಾಯ: ತೀರ್ಥಹಳ್ಳಿಯಲ್ಲಿ ಬ್ರಾಹ್ಮಣ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಶೋಕ್ ಹಾರನಹಳ್ಳಿ ಅತಂಕ
– ವಿಪ್ರ ಭಾರತೀ ತ್ರೈಮಾಸಿಕ ಪತ್ರಿಕೆಯ 25ನೇ ವರ್ಷದ 100ನೇ ಸಂಚಿಕೆ ಬಿಡುಗಡೆ

NAMMUR EXPRESS NEWS
ತೀರ್ಥಹಳ್ಳಿ: ಸಂಸ್ಕಾರ, ಸ್ವಾವಲಂಬನೆ,ಸಂಘಟನೆಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಬ್ರಾಹ್ಮಣ ಸಮುದಾಯ ಇನ್ನಷ್ಟು ಗಟ್ಟಿಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ‘ಸಭಾ ಅಧ್ಯಕ್ಷ ಅಶೋಕ ಹಾರನ ಹಳ್ಳಿ ಕರೆ ನೀಡಿದ್ದಾರೆ.
ಇತ್ತೀಚಿಗೆ ತೀರ್ಥಹಳ್ಳಿಯ ಗಾಯಿತ್ರಿ ಮಂದಿರದಲ್ಲಿ ತಾಲೂಕು ಬ್ರಾಹ್ಮಣ ಸಂಘವು ಆಯೋಜಿಸಿದ್ದ ವಿಪ್ರ ಭಾರತೀ ತ್ರೈಮಾಸಿಕ ಪತ್ರಿಕೆಯ 25ನೇ ವರ್ಷದ 100ನೇ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಬೆಂಗಳೂರನ್ನು ಹೊರತುಪಡಿಸಿದರೆ ಬ್ರಾಹ್ಮಣ ಸಂಘಟನೆಯಲ್ಲಿ ನಂತರದ ಸ್ಥಾನದಲ್ಲಿ ಮೈಸೂರು, ಶಿವಮೊಗ್ಗ ಇವೆ. ಇವುಗಳ ಸಾಲಿಗೆ ಈಗ ತೀರ್ಥಹಳ್ಳಿ ತಾಲೂಕು ಬ್ರಾಹ್ಮಣ ಸಂಘ ಸೇರಿದೆ ಎಂದು ಪ್ರಶಂಸಿಸಿದರು. ಇತ್ತೀಚಿನ ವರ್ಷಗಳಲ್ಲಿ ಬ್ರಾಹ್ಮಣ ಸಮುದಾಯದ ಮಕ್ಕಳು ಒಳ್ಳೆಯ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಉತ್ತಮ ಸಂಬಳ ವನ್ನೂ ಪಡೆಯುತ್ತಿದ್ದಾರೆ. ಆದರೆ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಎಂದರು.
ಬ್ರಾಹ್ಮಣರಲ್ಲಿ ಈಗ ಒಟ್ಟು ಕುಟುಂಬ ಕಣ್ಮರೆಯಾಗುತ್ತಿದೆ. ಗಂಡ -ಹೆಂಡತಿ, ಮಕ್ಕಳು ಅಷ್ಟೇ ತಮ್ಮ ಕುಟುಂಬ ಅಂತ ತಿಳಿದಿದ್ದಾರೆ. ಕೌಟುಂಬಿಕ ಸಮಸ್ಯೆಗೆ ಪ್ರತಿಯೊಂದಕ್ಕೂ ಕೋರ್ಟು, ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಒಂದೇ ಮಗು ಸಾಕು ಎಂಬ ಭಾವನೆ ಅನೇಕರಲ್ಲಿದೆ. ಇದರಿಂದ ಬ್ರಾಹ್ಮಣ ಜನಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಇವುಗಳಿಗೆ ಕಡಿವಾಣ ಹಾಕಲು ಅವರಿಗೆ ಆಪ್ತ ಸಮಾಲೋಚನೆಯ ಅಗತ್ಯವಿದ್ದು ಅ.ಕ.ಬ್ರಾ.ಮ.ಸಭಾ ನೆರವು ನೀಡಲು ಮುಂದಾಗಿದೆ ಎಂದರು.
ಮಹಾಸಭಾವು ವಿಪ್ರ ನುಡಿಯನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ರಾಜ್ಯ, ರಾಜ್ಯ, ದೇಶ ಹಾಗೂ ವಿದೇಶದಲ್ಲಿರುವರಿಗೂ ಅನುಕೂಲವಾಗಲೆಂದು ಪ್ರಕಟಿಸುತ್ತಿದೆ. ಬ್ರಾಹ್ಮಣರ ಎಲ್ಲ ಸಂಗತಿ ಗಳನ್ನು ಕೋಡಿಕರಿಸಿ ವಿಶ್ವಕೋಶದ ರೀತಿಯಲ್ಲಿ ಹೊರತರುವ ಅಭಿಲಾಷೆ ಇತ್ತು ಆದರೆ ಅದು ಆಗಲಿಲ್ಲ ಎಂಬ ಬೇಸರ ವ್ಯಕ್ತಪಡಿಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಬರುವ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಡಾ.ಭಾನುಪ್ರಕಾಶ್ ಶರ್ಮಾ ಅವರನ್ನು ಬೆಂಬಲಿಸಿ ಗೆಲ್ಲಿಸಬೇಕು ಎಂದು ವಿನಂತಿಸಿದರು.
ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಭೀಮೇಶ್ವರ ಜೋಷಿ ಮಾತನಾಡಿ, ಬ್ರಾಹ್ಮಣ ಸಮಾಜ ಎಲ್ಲ ಸಮಾಜ ದವರನ್ನು ಜೋಡಿಸುವುದರ ಮೂಲಕ ವಿಸ್ತರಿಸಿಕೊಳ್ಳಬೇಕು. ನಮ್ಮ ಸಂಸ್ಕಾರ ಸಮಾಜಕ್ಕೆ ದಿಕ್ಕೂಚಿಯಾಗಬೇಕು. ಮಾನವೀಯ ಮೌಲ್ಯಗಳಿಂದ ಕೆಲಸವಾಗಬೇಕು ಎಂದು ಕಿವಿ ಮಾತು ಹೇಳಿದ ಅವರು ತಮ್ಮ ದೇವಸ್ಥಾನದ ವತಿಯಿಂದ 60 ಸಾವಿರ ರೂಪಾಯಿ ದತ್ತಿ ನಿಧಿ , ಯನ್ನು ಘೋಷಿಸಿ, ಇದರ ಬಡ್ಡಿ ಯಿಂದ ಬರುವ ಹಣವನ್ನು ಕಡು ಬಡವ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ನೀಡಬೇಕು ಎಂದು ಸೂಚಿಸಿದರು. ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ. ಸಿ.ನಟರಾಜ ಭಾಗವತ್ ಅವರು, ಪತ್ರಿಕೆ ನಡೆಸುವುದು ಸಾಹಸದ ಕೆಲಸ ಉತ್ತಮ ಲೇಖಕರು,ವರ್ಣಮಯ ಮುಖಪುಟ, ಆಕರ್ಷಕ ಹೆಡ್ಡಿಂಗಳು, ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ಬರವಣಿಗೆ, ವಸ್ತುನಿಷ್ಠ ವರದಿಗೆ ಒತ್ತು ನೀಡುವುದು ಇತ್ಯಾದಿಗಳ ಮೂಲಕ ಪ್ರಸರಣ ಹೆಚ್ಚಿಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ 20 ವಿದ್ಯಾರ್ಥಿಗಳಿಗೆ ಹತ್ತಿ ನಿಧಿ ಪ್ರೋತ್ಸಾಹವನ್ನು ವಿತರಿಸಲಾಯಿತು.
ತೀರ್ಥಹಳ್ಳಿ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ತುಂಬರ ಮನೆ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸತೀಶ್ ವಿ.ಕೋಶಾಧಿಕಾರಿ ಕೆ.ವಿ. ವೆಂಕಟೇಶ, ವಿಪ್ರಭಾರತೀ ಸಂಪಾದಕ ಪ್ರೊ.ವಿ.ಆರ್.ಹೆಗಡೆ, ಕಿಶೋರ್ ಶಿರ್ನಾಳಿ, ಡಾ.ಭಾನುಪ್ರಕಾಶ್ ಶರ್ಮಾ, ಎಲ್. ಟಿ ತಿಮ್ಮಪ್ಪ ಹೆಗಡೆ, ಬ್ರಾಹ್ಮಣ ಸಂಘದ ನಿಕಟಪೂರ್ವ ಅಧ್ಯಕ್ಷರೂ, ಎನ್ ಇ ಎಸ್ ಅಧ್ಯಕ್ಷರಾದ ಗುಡ್ಡೇಕೊಪ್ಪ ಜಿ.ಎಸ್.ನಾರಾಯಣ ರಾವ್ ಮೊದಲಾದವರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.