ತೀರ್ಥಹಳ್ಳಿ ಫ್ಲೈ ಓವರ್ ಶೀಘ್ರದಲ್ಲಿ ಸೇವೆಗೆ ಮುಕ್ತ!?
– ಕಾಮಗಾರಿ ವೀಕ್ಷಣೆ ಮಾಡಿದ ಶಾಸಕ ಆರಗ ಜ್ಞಾನೇಂದ್ರ
– ಭೋಜೆಗೌಡ ಜತೆ ಜೆಡಿಎಸ್ ನಾಯಕರ ಚರ್ಚೆ: ಗೌರವ
NAMMUR EXPRESS NEWS
ತೀರ್ಥಹಳ್ಳಿ: ಭಾರತಿಪುರ ಪ್ಲ್ಯೆ ಓವರ್ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, 56 ಕೋಟಿ ರೂಪಾಯಿಗಳ ಈ ಕಾಮಗಾರಿಯನ್ನು ಮಂಜೂರು ಮಾಡಿಸಿದ್ದ ಶಾಸಕರಾದ ಆರಗ ಜ್ಞಾನೇಂದ್ರ ಮಂಗಳವಾರ ಕಾಮಗಾರಿಯನ್ನು ವೀಕ್ಷಿಸಿದರು , ಶಾಸಕರೊಂದಿಗೆ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ನವಿನ್ ರಾಜ್, ಸೈಟ್ ಇಂಜಿನಿಯರ್ ವೇಣು ಗೋಪಾಲ್ ಇದ್ದರು.
ಬೋಜೇಗೌಡರ ಭೇಟಿ: ಜೆಡಿಎಸ್ ನಾಯಕರಿಂದ ಗೌರವ.!
– ತೀರ್ಥಹಳ್ಳಿಗೆ ಆಗಮಿಸಿದ ನೂತನ ವಿಧಾನ ಪರಿಷತ್ ಸದಸ್ಯ ಬೋಜೆಗೌಡ: ಕಾರ್ಯಕರ್ತರ ಸಂತಸ, ಚರ್ಚೆ
ತೀರ್ಥಹಳ್ಳಿಯಲ್ಲಿ ಬಿಜೆಪಿ ಜೆಡಿಎಸ್ ಅಭಿನಂದನೆ ಸ್ವೀಕರಿಸಲು ಆಗಮಿಸಿದ ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಅವರನ್ನು ಜೆಡಿಎಸ್ ನಾಯಕರು, ಕಾರ್ಯಕರ್ತರು ಅಭಿನಂದಿಸಿದರು. ತೀರ್ಥಹಳ್ಳಿಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಬಿಜೆಪಿ ಜೊತೆಯಾಗಿ ಅಭಿನಂದಿಸಿದ ನಂತರ ಮಯೂರ ಹೋಟೆಲ್ ನಲ್ಲಿ ವಿಶೇಷವಾಗಿ ಸಭೆ ನಡೆಸಿ ಜೆಡಿಎಸ್ ನಾಯಕರುಗಳಾದ ಯಡೂರು ರಾಜಾರಾಮ್, ಕುಣಜೆ ಪ್ರಭಾಕರ್ ಗೌಡ, ಪಟ್ಟಣದ ಅಧ್ಯಕ್ಷ ರವಿ ಎಡನಾಲ, ಜೆಡಿಎಸ್ ಪ್ರಮುಖರಾದ ಶರತ್ ಶೆಟ್ಟಿ, ಪ್ರೇಮರಾಜ್ ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು, ಅಪ್ಪಯ್ಯ ಹೆಗ್ಡೆ ಅನೇಕರು ಹಾಜರಿದ್ದರು. ಈ ಸಂದರ್ಭದಲ್ಲಿ ಭೋಜೇಗೌಡರ ಜೊತೆ ಜೆಡಿಎಸ್ ಸಂಘಟನೆ ಹಾಗೂ ಮಲೆನಾಡಿನಲ್ಲಿ ಜೆಡಿಎಸ್ ಪಕ್ಷದ ಬಲವರ್ಧನೆಗೆ ಸಂಬಂಧಪಟ್ಟ ಹಾಗೆ ಜೆಡಿಎಸ್ ನಾಯಕರು, ಮುಖಂಡರು, ಕಾರ್ಯಕರ್ತರು ಚರ್ಚೆ ನಡೆಸಿದರು.
