ಕಮ್ಮರಡಿ ಸುತ್ತಮುತ್ತ ಮಾ. 23ಕ್ಕೆ ಕರೆಂಟ್ ಇರಲ್ಲ!
– ತ್ರೈಮಾಸಿಕ ನಿರ್ವಹಣೆ ಕಾಮಗಾರಿ
– ಬೆಳಗ್ಗೆ 10-00 ಗಂಟೆಯಿಂದ ಸಂಜೆ 6-00 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ
NAMMUR EXPRESS NEWS
ದಿನಾಂಕ:23-03-2025 ಭಾನುವಾರದಂದು 110/11 ಕೆವಿ ಕಮ್ಮರಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ನಿರ್ವಹಿಸಲು ಉದ್ದೇಶಿಸಿರುವುದರಿಂದ ಕೆಳಕಂಡ ಪ್ರದೇಶಗಳ ವ್ಯಾಪ್ತಿಯಲ್ಲಿ ಬೆಳಗ್ಗೆ 10-00 ಗಂಟೆಯಿಂದ ಸಂಜೆ 6-00 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಕಮ್ಮರಡಿ, ಆಗುಂಬೆ, ನಾಲೂರು, ಗುಡ್ಡಕೇರಿ, ತೀರ್ಥಮತ್ತೂರು, ಕೆಂದಾಳಬೈಲು, ಬಿದರಗೋಡು, ಮೇಗರವಳ್ಳಿ, ಕಲ್ಮನೆ. ಉಂಟೂರುಕಟ್ಟೆ ಕೈಮರ, ಹೊನ್ನೇತಾಳು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕರೆಂಟ್ ಇರುವುದಿಲ್ಲ. ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ. ಮವಿಸಕಂನಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಕೋರಿದ್ದಾರೆ.
