Categories
ತೀರ್ಥಹಳ್ಳಿ

ರಾಜ್ಯದಲ್ಲೇ ಹೆಸರು ಮಾಡಿದ ತೀರ್ಥಹಳ್ಳಿ ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯ!

ರಾಜ್ಯದಲ್ಲೇ ಹೆಸರು ಮಾಡಿದ ತೀರ್ಥಹಳ್ಳಿ ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯ!
– ಬೆಂಗಳೂರಿನ ಚಿನ್ಮಯ್ ಯೂತ್ ಕ್ಲಬ್‌ ಗೆ ಮೊದಲ ಸ್ಥಾನ
– ತೀರ್ಥಹಳ್ಳಿಯ ಆತಿಥ್ಯಕ್ಕೆ ಆಟಗಾರರ ಮೆಚ್ಚುಗೆ
– ಎರಡು ದಿನ ತೀರ್ಥಹಳ್ಳಿಯಲ್ಲಿ ಕ್ರೀಡಾಕೂಟ ಯಶಸ್ವಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಬಾಲ್‌ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ತೀರ್ಥಹಳ್ಳಿಯ ಹಿರಿಯ ಬಾಲ್ ಬ್ಯಾಡ್ಮಿಂಟನ್ ಆಟಗಾರರಾಗಿದ್ದ ದಿ ಜೆ. ಟಿ.ಸುಂದರೇಶ್ ಅವರ ಸ್ಮರಣಾರ್ಥ ಮೇ 11 ಮತ್ತು 12ರಂದು ಪಟ್ಟಣದ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಅತ್ಯಂತ ಯಶಸ್ವಿಯಾಗಿದೆ. ಜೊತೆಗೆ ರಾಜ್ಯದ ಬಾಲ್ ಬ್ಯಾಡ್ಮಿಂಟನ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ.

ಬೆಂಗಳೂರಿನ ಚಿನ್ಮಯ್ ತಂಡಕ್ಕೆ ಮೊದಲ ಸ್ಥಾನ

ಬೆಂಗಳೂರಿನ ಚಿನ್ಮಯ್ ಯೂಥ್‌ ಕ್ಲಬ್ ಪ್ರಥಮ ಸ್ಥಾನ ಪಡೆದು 40 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಗೆದ್ದರೆ, ರನ್ನರ್ ಆಗಿ ಬೆಂಗಳೂರಿನ ವಿಜಯನಗರ ಬಿ.ಬಿ.ಕ್ಲಬ್ 30 ಸಾವಿರ ನಗದು ಹಾಗೂ ಟ್ರೋಫಿ ಪಡೆದುಕೊಂಡಿತು. 3ನೇ ಸ್ಥಾನ ಮೂಡಬಿದರೆಯ ಆಳ್ವಾಸ್ ಪಾಲಾಯಿತು. 20 ಸಾವಿರ ನಗದು ಹಾಗೂ ಟ್ರೋಫಿ ಪಡೆಡಿದೆ. 4 ನೇ ಸ್ಥಾನ ಪಡೆದ ಬೆಂಗಳೂರಿನ ಐಕ್ಯ ಕಾಮಧೇನುಗೆ 10 ಸಾವಿರ ನಗದು ಟ್ರೋಫಿ ಲಭಿಸಿತು. ಬೆಂಗಳೂರಿನ ಶಶಿ ಬೆಸ್ಟ್‌ ಸೆಂಟರ್ ಟ್ರೋಫಿ ಪಡೆದರು. ಬೆಂಗಳೂರಿನ ರಂಜು ಬೆಸ್ಟ್ ಬ್ಯಾಕ್, ಮೂಡಬಿದರೆ ಆಳ್ವಾಸ್ ತಂಡದ ಆಟಗಾರ ಬೆಸ್ಟ್ ಫ್ರೆಂಟ್ ಟ್ರೋಫಿ ತಮ್ಮದಾಗಿಸಿಕೊಂಡರು.

ಕ್ರೀಡಾಕೂಟದ ಯಶಸ್ವಿಗೆ ಸಹಕಾರ ನೀಡಿದ ಎಲ್ಲಾ ಕ್ರೀಡಾ ಪ್ರೋತ್ಸಾಹಕರಿಗೆ ಜನಪ್ರತಿನಿಧಿಗಳಿಗೆ, ವಿವಿಧ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳಿಗೆ ಪ್ರತ್ಯಕ್ಷ-ಪರೋಕ್ಷ ಸಹಕರಿಸಿದ ಎಲ್ಲಾ ಮಹನೀಯರನ್ನೂ ತೀರ್ಥಹಳ್ಳಿ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್‌ ಪರವಾಗಿ ಅಧ್ಯಕ್ಷ ವಾಟಗಾರು ಶಿವಾನಂದ್ ಹಾಗೂ ಪ್ರಧಾನ ಕಾರ್ಯದರ್ಶಿ ಪಿ.ಸುಧೀರ್‌ರಾವ್ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

ತೀರ್ಥಹಳ್ಳಿಯ ಆತಿಥ್ಯಕ್ಕೆ ಮನಸೋತ ಆಟಗಾರರು.!

ರಾಜ್ಯದ ವಿವಿಧ ಜಿಲ್ಲೆಗಳ 25ಕ್ಕೂ ಅಧಿಕ ತಂಡಗಳು ಟೂರ್ನಮೆಂಟ್‌ನಲ್ಲಿ ಪಾಲ್ಗೊಂಡಿದ್ದವು. ಪಂದ್ಯಾವಳಿಯ ಸಂಘಟಕರು ಆಟಗಾರರ ಊಟ-ವಾಸ್ತವ್ಯಕ್ಕೆ ಉತ್ತಮ ವ್ಯವಸ್ಥೆ ಕಲ್ಪಿಸಿದ್ದರು. 2 ದಿನ ರಥಬೀದಿಯ ಓಣಿ ದೀಪು ಅಡಿಗೆ ರುಚಿ ಸವಿದ ಆಟಗಾರರು ಅತಿಧ್ಯಕ್ಕೆ ಮನ ಸೋತರು. ಇನ್ನು ಚಾಮುಂಡೇಶ್ವರಿ ಸೌಂಡ್ಸ್ ತಪಸ್ವಿ ಬೆಳಕು, ವೇದಿಕೆ, ಸೌಂಡ್ಸ್ ನೀಡಿದ್ದರು. ಎರಡು ದಿನ ವಿವಿಧ ಸಂಘ ಸಂಸ್ಥೆಗಳು, ತೀರ್ಥಹಳ್ಳಿ ದಾನಿಗಳು ಕ್ರೀಡಾ ಪ್ರೇಮಿಗಳು ಹಾಜರಿದ್ದರು.

ಅತಿಥಿ ಗಣ್ಯರ ಆಗಮನ: ಮೆಚ್ಚುಗೆ

11-05-2024 ರ ಶನಿವಾರ ಸಂಜೆ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರಾದ ವಿ ಎಮ್ ಶಿವಾನಂದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಕೆ ಆರ್ ದಯಾನಂದ ಕಡಿದಾಳ್ ರವರು ಸಮಾರಂಭದ ಕುರಿತು ಪ್ರಾಸ್ತವಿಕ ಮಾತನಾಡಿದರು.. ಮುಖ್ಯ ಅತಿಥಿಗಳಾಗಿ ಸಹಕಾರಿ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡ, ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲರು ವೈ ಎಂ ಸುಧಾ, ಟೌನ್ ಕ್ಲಬ್ ಅಧ್ಯಕ್ಷರು ಬಿ.ಎನ್ ಕೃಷ್ಣಮೂರ್ತಿ ಭಟ್, ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರು ಅನಿಲ್ ಕುಮಾರ್ ಜಿ, ಜಿಲ್ಲಾ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರು ಶಶಿ ಕೆಎಸ್, ಪ್ರಶಾಂತ್ ಹೆಗ್ಗಾರ್, ನಾಗರಾಜ್, ಮಲ್ನಾಡ್ ಕ್ಲಬ್ ಕಾರ್ಯದರ್ಶಿ ರಾಘವೇಂದ್ರ ಪ್ರಮುಖರಾದ ಶ್ರೀಧರ್ ಸೇರಿದಂತೆ ಅನೇಕರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಮೇ 25ರ ಭಾನುವಾರ ರಾತ್ರಿ ನಡೆದ ಸಮಾರೋಪ ಕಾರ್ಯಕ್ರಮಕ್ಕೆ ಶಾಸಕ ಆರಗ ಜ್ಞಾನೇಂದ್ರ, ಮುಖ್ಯ ಅತಿಥಿಗಳಾಗಿ ಅನು ಸುಂದರೇಶ್, ಸಿರಿಬೈಲ್ ಧರ್ಮೇಶ್, ದೊರಗಲ್ ನಂದೀಶ್, ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆ ಉಪ ಪ್ರಾಂಶುಪಾಲರು ದೇವೇಂದ್ರ ನಾಯ್ಕ್, ಹಿರಿಯ ಬಾಲ್ ಬ್ಯಾಡ್ಮಿಂಟನ್ ಆಟಗಾರ ನಂದೀಶ್ ಎ ಜಿ, ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರು ರಾಘವೇಂದ್ರ ರವೀಂದ್ರ ಶೆಟ್ಟಿ, ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಾಜು ಎಸ್ , ಸಂಸ್ಥೆಯ ಧನಂಜಯ್ ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.