ಮುಂದುವರೆದಿದೆ ತೀರ್ಥಹಳ್ಳಿ ಜಾತ್ರೆ!
– ಆರನೇ ದಿನವೂ ಜೈಂಟ್ ವೀಲ್ ಆಟೋಟಗಳು!
– ಜಾತ್ರೆ ಬೀದಿಯಲ್ಲಿ ಕಡಿಮೆಯಾಗದ ಜನಜಾತ್ರೆ!
– ಅಂಗಡಿಗಳಲ್ಲಿ ಜೋರು ಖರೀದಿ!
NAMMUR EXPRESS NEWS
ತೀರ್ಥಹಳ್ಳಿ ಜಾತ್ರೆ ವಿಶೇಷ: ತೀರ್ಥಹಳ್ಳಿಯ ರಾಮೇಶ್ವರ ದೇವರ ಜಾತ್ರೆ ಶುರುವಾಗಿ ಇಂದಿಗೆ ಆರು ದಿನಗಳಾದರೂ ಜಾತ್ರೆಯ ಕಳೆ ಮಾತ್ರ ಹಾಗೆಯೇ ಇದೆ. ವಾರಾಂತ್ಯದ ರಜೆ, ಸಂಕ್ರಾಂತಿಯ ರಜೆ ಮುಗಿದು ಪರ ಊರಿನವರು ಜಾತ್ರೆ ಮುಗಿಸಿ ವಾಪಸ್ಸಾದ ಹಿನ್ನೆಲೆಯಲ್ಲಿ, ಸ್ವಲ್ಪ ರಶ್ ಕಡಿಮೆಯಾಗಿ ಸ್ಥಳೀಯರು ಮತ್ತು ತಾಲ್ಲೂಕಿನ ಹತ್ತಿರದ ಊರುಗಳ ಜನ ಖರೀದಿ ಜೋರು ಮಾಡಿದ್ದಾರೆ. ಮಕ್ಕಳು, ಫ್ಯಾಮಿಲಿಯೊಂದಿಗೆ ಆಟಗಳು, ಮಿಠಾಯಿ ಖರೀದಿ ಜೋರಾಗಿದೆ. ಜಾತ್ರೆಯಲ್ಲಿ ಹಾಕಲಾದ ಅಂಗಡಿ ಮುಂಗಟ್ಟುಗಳು ಇನ್ನೂ ಹಾಗೆಯೇ ಇವೆ. ಜಾತ್ರೆಯನ್ನು ನೋಡಲು, ಓಡಾಡಲು ಮತ್ತು ವಸ್ತುಗಳ ಖರೀದಿಗೆ ಇದು ಒಳ್ಳೆಯ ಸಂದರ್ಭವಾಗಿರುವುದರಿಂದ ಜಾತ್ರೆಯ ಕಳೆ ಕೊಂಚವೂ ಕಡಿಮೆಯಾಗಿಲ್ಲ.