Categories
ತೀರ್ಥಹಳ್ಳಿ

ತೀರ್ಥಹಳ್ಳಿ ಕಸ…ಅಲಬಳ್ಳಿ ಸುತ್ತಲಿನ ಜನತೆಗೆ ವಿಷ!

ತೀರ್ಥಹಳ್ಳಿ ಕಸ…ಅಲಬಳ್ಳಿ ಸುತ್ತಲಿನ ಜನತೆಗೆ ವಿಷ!
– ರಸ್ತೆಯಲ್ಲೇ ಬೀದಿ ನಾಯಿಗಳ ಓಡಾಟ: ಜನರಿಗೆ ಸಂಕಟ
– ಸ್ಥಳೀಯರ ದೂರಿಗೂ ಕಿವಿಗೊಡದ ಆಡಳಿತ!

NAMMUR EXPRESS NEWS
ತೀರ್ಥಹಳ್ಳಿ: ( Thirthahalli ) ತೀರ್ಥಹಳ್ಳಿ ಪಟ್ಟಣ ಹಾಗೂ ಇತರೆ ಪ್ರದೇಶದ ಕಸ ಇದೀಗ ಹುಣಸವಳ್ಳಿ, ಅಲಬಳ್ಳಿ ಜನತೆಗೆ ವಿಷವಾಗಿ ಪರಿಣಮಿಸಿದೆ. ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲಬಳ್ಳಿ ಬಳಿ ಕಸ ವಿಲೇವಾರಿ ಘಟಕದಲ್ಲಿ ಇದೀಗ ಅವ್ಯವಸ್ಥೆಗಳ ಆಗರವಾಗಿದೆ. ಕಸದ ಕಾರಣಕ್ಕಾಗಿ ಕಸ ವಿಲೇವಾರಿ ಘಟಕದ ಬಳಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಜನ ಓಡಾಡಲು ಸಮಸ್ಯೆ ಎದುರಾಗಿದೆ. ನೂರಕ್ಕೂ ಹೆಚ್ಚು ಬೀದಿ ನಾಯಿಗಳು ಜಾನುವಾರುಗಳನ್ನು ಕಚ್ಚಿ ಸಾಯಿಸಿರುವ ಘಟನೆಗಳು ನಡೆದಿದೆ. ಇನ್ನು ಚಿಕ್ಕ ಮಕ್ಕಳು ಮತ್ತು ಶಾಲೆಗೆ ಹೋಗುವ ಮಕ್ಕಳು, ಪಾದಚಾರಿಗಳು ಓಡಾಡದಂತ ಪರಿಸ್ಥಿತಿಗಳು ಎದುರಾಗಿದೆ.
ಮೇಲಿನ ಕುರುವಳ್ಳಿಯಿಂದ ಆಲಬಳ್ಳಿ ಮಾರ್ಗವಾಗಿ ಹೋಗುವ ಮಾರ್ಗದಲ್ಲಿ ಆಲಬಳ್ಳಿ ಸಮೀಪ ಕಸ ವಿಲೇವಾರಿ ಘಟಕ ಇದೆ. ತೀರ್ಥಹಳ್ಳಿ ಪಟ್ಟಣ ಹಾಗೂ ಅನೇಕ ಗ್ರಾಮ ಪಂಚಾಯಿತಿಗಳ ಕಸವನ್ನು ವಿಲೇವಾರಿ ಮಾಡಲಾಗುತ್ತದೆ. ಕಳೆದ ಐದಾರು ವರ್ಷಗಳಿಂದ ಇಲ್ಲಿ ಕಸ ವಿಲೇವಾರಿ ಘಟಕ ಕಾರ್ಯ ನಿರ್ವಹಿಸುತ್ತಿದೆ. ಆದರೆ ಇಲ್ಲಿ ಸಮಪರ್ಕವಾದ ನಿರ್ವಹಣೆ ಇಲ್ಲ, ಕಾಯುವವರು ಇಲ್ಲ. ಇಲ್ಲಿ ಕಸ ವಿಲೇವಾರಿ ಘಟಕದ ದ್ವಾರವನ್ನು ಯಾವಾಗಲೂ ತೆರೆದೆ ಇಡುತ್ತಾರೆ. ಇಲ್ಲಿ ಬೀದಿ ನಾಯಿಗಳು ಗುಂಪು ಕಟ್ಟಿಕೊಂಡು ಕಸವನ್ನು ಕಂಡ ಕಂಡಲ್ಲಿ ತಿಂದು ಎಸೆಯುತ್ತಾ ಇವೆ. ಆದರೂ ಸಂಬಂಧಪಟ್ಟವರು ಗಮನ ವಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಶಾಲೆ ಮಕ್ಕಳಿಗೆ ಜೀವ ಭಯ!

ದಾರಿಯಲ್ಲಿ ಓಡಾಡುವ ಶಾಲಾ ಮಕ್ಕಳಿಗೆ ನಾಯಿ ಕಚ್ಚುವ ಭೀತಿ ಎದುರಾಗಿದೆ. ಕಸ ವಿಲೇವಾರಿ ಘಟಕದ ಅವ್ಯವಸ್ಥೆಯ ಬಗ್ಗೆ ಈಗಾಗಲೇ ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಆಡಳಿತಕ್ಕೆ ಸ್ಥಳೀಯರು ಹತ್ತಾರು ಬಾರಿ ಮನವಿ ಮಾಡಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಕಸ ವಿಲೇವಾರಿ ಕೇಂದ್ರದಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಕೂಡ ಮದ್ಯಪಾನ ಮಾಡಿ ಕೆಲಸವನ್ನು ನಿರ್ವಹಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಇನ್ನು ಕಸವನ್ನ ಎಲ್ಲೆಂದಿರಲ್ಲಿ ಎಸೆಯುತ್ತಿರುವ ಘಟನೆ ಹೆಚ್ಚಾಗಿದ್ದು ಅನಾರೋಗ್ಯಕ್ಕೆ ಕಾರಣವಾಗಿದೆ. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದ್ದು, ಕೋಳಿಗಳ ತ್ಯಾಜ್ಯ, ಗಲೀಜು ಕಂಡ ಕಂಡಲ್ಲಿ ಎಸೆಯಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅಗ್ರಹ ಸ್ಥಳೀಯರಿಂದ ವ್ಯಕ್ತವಾಗಿದೆ.

ಬಾವಿಯಲ್ಲಿ ಬರುತ್ತಿದೆ ರಾಸಾಯನಿಕ ಎಣ್ಣೆ!

ಕಸ ವಿಲೇವಾರಿ ಘಟಕದಲ್ಲಿ ಸಮರ್ಪಕವಾದ ನಿರ್ವಹಣೆ ಮಾಡದ ಕಾರಣ ಕಸ ವಿಲೇವಾರಿ ಘಟಕದ ಸುತ್ತಮುತ್ತ ತೆಗೆದಿರುವ ಬಾವಿಯಲ್ಲಿ ಎಣ್ಣೆ ರೀತಿಯ ರಾಸಾಯನಿಕ ವಸ್ತುಗಳು ಬರುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. ತಕ್ಷಣ ಸಂಬಂಧಪಟ್ಟ ಆಡಳಿತ ಹಾಗೂ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಮುಂದೊಂದು ದಿನ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ.

[embedyt] https://www.youtube.com/watch?v=EN-0HHnkSKE%5B/embedyt%5D

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.