ತೀರ್ಥಹಳ್ಳಿ : ಶಾಂತವೇರಿಯಲ್ಲಿ ಗೋಪಾಲಗೌಡರ ಜನ್ಮದಿನಾಚರಣೆ
– 102ನೇ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ತಾಲೂಕು ರೈತ ಸಂಘದ ವತಿಯಿಂದ ಆಚರಣೆ
– ತೀರ್ಥಹಳ್ಳಿ ಕುಶಾವತಿ ಪಾರ್ಕ್ ನಿಂದ ಶಾಂತವೇರಿ ತನಕ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು
NAMMUR EXPRESS NEWS
ತೀರ್ಥಹಳ್ಳಿ : ತಾಲೂಕಿನ ಆರಗ ಸಮೀಪದ ಶಾಂತವೇರಿಯಲ್ಲಿ ಹೆಸರಾಂತ ಸಮಾಜವಾದಿ, ಮಾಜಿ ಶಾಸಕ ಗೋಪಾಲಗೌಡ ರ 102ನೇ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ತಾಲೂಕು ರೈತಸಂಘದ ವತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಂತವೇರಿ ಗೋಪಾಲಗೌಡರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ ಗಣ್ಯರು ಗೋಪಾಲಗೌಡರ ಸಮಾಜವಾದದ ಚಿಂತನೆ, ಬದುಕು, ಹೋರಾಟದ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಹೆಸರಾಂತ ವೈದ್ಯ ಬೆಂಗಳೂರಿನ ಜಿ.ಕೆ.ವೆಂಕಟೇಶ್, ನಿವೃತ್ತ ಪ್ರಾಂಶುಪಾಲ ಜೆ.ಎಲ್.ಪದ್ಮನಾಭ, ಚಿಂತಕ ಡಾ.ಗಣಪತಿ ಉತ್ತುಂಗ, ರೈತ ಮುಖಂಡ ಕಂಬಳಿಗೆರೆ ರಾಜೇಂದ್ರ, ತಾಲೂಕು ರೈತ ಸಂಘದ ಅಧ್ಯಕ್ಷ ಕೊಡ್ಲು ವೆಂಕಟೇಶ್, ರೈತ ಸಂಘದ ಪದಾಧಿಕಾರಿಗಳು, ಶಾಂತವೇರಿಯ ಗ್ರಾಮಸ್ಥರು ಹಾಗೂ ಕೋಣಂದೂರು ಶರಾವತಿ ಕಾಲೇಜಿನ ಎನ್.ಎಸ್.ಎಸ್.ಶಿಬಿರಾರ್ಥಿಗಳು ಭಾಗವಹಿಸಿದ್ದರು. ಇದಕ್ಕೂ ಮುನ್ನ ತಾ.ರೈತ ಸಂಘದ ವತಿಯಿಂದ ತೀರ್ಥಹಳ್ಳಿ ಕುಶಾವತಿ ಪಾರ್ಕ್ ನಿಂದ ಶಾಂತವೇರಿ ತನಕ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು.
