Categories
ತೀರ್ಥಹಳ್ಳಿ

ತೀರ್ಥಹಳ್ಳಿ ಜೆಸಿ ಶುದ್ಧ ಕುಡಿಯುವ ನೀರಿನ ಘಟಕ

ತೀರ್ಥಹಳ್ಳಿ ಜೆಸಿ ಶುದ್ಧ ಕುಡಿಯುವ ನೀರಿನ ಘಟಕ
– ತೀರ್ಥಹಳ್ಳಿಯ ಟಿ. ಎಸ್. ಟಿ ಹೈಪರ್ ಮಾರ್ಟ್ ಬಳಿ ಉದ್ಘಾಟನೆ
– ಮಹಾಬಲೇಶ್ವರ ಹೆಗಡೆ, ಉದ್ಯಮಿ ಪ್ರಸನ್ನ ಪೇಟೆ ಸಾಥ್

NAMMUR EXPRESS NEWS
ತೀರ್ಥಹಳ್ಳಿ: ಜೆಸಿ ಸಪ್ತಾಹದ ಎರಡನೇ ದಿನದ ಅಂಗವಾಗಿ ಸೋಮವಾರ ಶುದ್ಧ ನೀರಿನ ಘಟಕವನ್ನು ಸ್ಥಾಪಿಸಿದ್ದು ಇದರ ಉದ್ಘಾಟನಾ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಕರ್ನಾಟಕ ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಹಾಬಲೇಶ್ವರ ಹೆಗಡೆಯವರು ವಿದ್ಯುಕ್ತವಾಗಿ ನೆರವೇರಿಸಿದರು. ಈ ಶುದ್ಧ ನೀರಿನ ಘಟಕ ವನ್ನು Inno Pro Sol Pvt Ltd ಮಾಲೀಕರಾದ ಪ್ರಸನ್ನ ಪೇಟೆ ಅವರು ಕೊಡುಗೆಯಾಗಿ ನೀಡಿರುತ್ತಾರೆ.

ಜೆ ಸಿ ತೀರ್ಥಹಳ್ಳಿ ಸಂಸ್ಥೆಯ ಅಧ್ಯಕ್ಷರಾದ ಅಭಿಜಿತ್ ಹಿರಿಯರವರು ಶುದ್ಧ ನೀರಿನ ಘಟಕವು ಸಾರ್ವಜನಿಕ ಉಪಯೋಗಕ್ಕೆ ಹೆಚ್ಚಿನ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಈ ಘಟಕವು ಸ್ಥಾಪಿಸಿದ್ದು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಸನ್ನ ಪೇಟೆ, ಮಹಾಬಲೇಶ್ವರ ಹೆಗಡೆ, ಜೆ ಸಿ ಅಧ್ಯಕ್ಷರಾದ ಅಭಿಜಿತ್ ಹಿರಿಯ, ಜೆಸಿ ರೇಣುಕಾ ಹೆಗಡೆ, ಜೆಸಿ ವಿನಂತಿ ಪೈ ಉಪಾಧ್ಯಕ್ಷರಾದ ರವಿ ಆಚಾರ್ಯ, ಜೆ ಸಿ ಅರುಣ್ ಕುಮಾರ್, ಜೆಸಿ ಕಿರಣ್ ಕುಮಾರ್, ಟಿ ಎಸ್ ಟಿ ಹೈಪರ್ ಮಾರ್ಟ್ ಕಿರಣ್ ಹಾಗೂ ಸಿಬ್ಬಂದಿ ವರ್ಗ, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ : ನದಿಯಲ್ಲಿ ಒಬ್ಬರ ಮೃತದೇಹ ಸಿಕ್ತು, ಮತ್ತೊಬ್ಬನಿಗಾಗಿ ಶೋಧ!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.