Categories
ತೀರ್ಥಹಳ್ಳಿ

ತೀರ್ಥಹಳ್ಳಿ ನೂತನ ಬಿಜೆಪಿ ಚುನಾವಣೆ ಕಚೇರಿ ಶುರು!

ತೀರ್ಥಹಳ್ಳಿ ನೂತನ ಬಿಜೆಪಿ ಚುನಾವಣೆ ಕಚೇರಿ ಶುರು!
– ಶಾಸಕ ಆರಗ ಜ್ಞಾನೇಂದ್ರರಿಂದ ಉದ್ಘಾಟನೆ
– ಈಶ್ವರಪ್ಪನವರ ಸ್ಪರ್ಧೆ ನಾಮಕವಾಸ್ತೆ ಅಷ್ಟೇ: ಆರಗ ಜ್ಞಾನೇಂದ್ರ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಬಂಟರ ಭವನದಲ್ಲಿ ಲೋಕಸಭಾ ಚುನಾವಣಾಯ ಬಿಜೆಪಿಯ ಕಾರ್ಯಾಲಯವನ್ನು ಶಾಸಕ ಆರಗ ಜ್ಞಾನೇಂದ್ರ ಅವರು ಸೋಮವಾರ ಬೆಳಗ್ಗೆ ಉದ್ಘಾಟಿಸಿದರು. ಇನ್ಮುಂದೆ ಲೋಕಸಭಾ ಚುನಾವಣೆ ಕುರಿತಾದ ಚುಟುವಟಿಕೆ ಇಲ್ಲಿಯೇ ನಡೆಯಲಿದೆ. ಚುನಾವಣೆ ಕಛೇರಿ ಉದ್ಘಾಟನೆ ಬಳಿಕ ಮಾತನಾಡಿದ ಆರಗ ಜ್ಞಾನೇಂದ್ರ, ಬಿಜೆಪಿ ಅಭ್ಯರ್ಥಿಯಾದ ಬಿ,ವೈ, ರಾಘವೇಂದ್ರರ ಎದುರು ಯಾವ ಪಕ್ಷ ನಿಂತರೂ ಮತ್ತು ಯಾರೇ ನಿಂತರೂ ಬಿ,ವೈ, ರಾಘವೇಂದ್ರ ಅವರದ್ದೇ ಗೆಲುವು. ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿಯನ್ನು ಶಿವಮೊಗ್ಗ ಜಿಲ್ಲೆ ಮತ್ತು ತಾಲೂಕುಗಳು ಹೊಂದಿದ್ದು, ಮತ್ತು ಎಲ್ಲಾ ವರ್ಗದವರ ಸಮುದಾಯ ಭವನಕ್ಕೆ ಮತ್ತು ಜನಪರ ಕೆಲಸಕ್ಕೆ ಸಾಕಷ್ಟು ಹಣವನ್ನು ಮಂಜೂರು ಮಾಡಿಸಿದ್ದಾರೆ, ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ಜನರ ವಿಶ್ವಾಸವನ್ನು ಗಳಿಸಿದ್ದಾರೆ.

ಇದನ್ನ ಮನಗಂಡು ಈ ಲೋಕಸಭಾ ಚುನಾವಣೆಯಲ್ಲಿ ಖಂಡಿತವಾಗಿಯೂ ಬಿ ವೈ ರಾಘವೇಂದ್ರ ಅವರಿಗೆ ಮತದಾರರು ಆಶೀರ್ವಾದ ಮಾಡುತ್ತಾರೆ ಎಂದರು. ಈ ಸಂದರ್ಭದಲ್ಲಿ ನವೀನ್ ಹೆದ್ದೂರು, ಬಾಳೆಬೈಲು ರಾಘವೇಂದ್ರ, ಸೊಪ್ಪುಗುಡ್ಡೆ ರಾಘವೇಂದ್ರ, ನಾಗರಾಜ್ ಶೆಟ್ಟಿ, ಕುಕ್ಕೆ ಪ್ರಶಾಂತ್‌ ಸೇರಿ ಪ್ರಮುಖರು ಉಪಸ್ಥಿತರಿದ್ದರು.

ಈಶ್ವರಪ್ಪನವರ ಸ್ಪರ್ಧೆ ನಾಮಕವಾಸ್ತೆ ಅಷ್ಟೇ!

ಈಶ್ವರಪ್ಪನವರ ಸ್ಪರ್ಧೆ ನಾಮಕವಸ್ಥೆ ಅಷ್ಟೇ. ಅವರು ಚುನಾವಣೆಗೆ ನಿಲ್ಲುವುದಿಲ್ಲ ಎಂಬ ನಂಬಿಕೆ ಇದೆ. ಕಾಂತೇಶ್ ಅವರಿಗೆ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಹಿಂದುತ್ವದ ನಾಯಕರನ್ನು ನಾವು ಕಡೆಗಣಿಸಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.