ತೀರ್ಥಹಳ್ಳಿ ನ್ಯೂಸ್: ಎಲ್ಲೆಲ್ಲಿ ಏನೇನು?
ಮೇಲಿನ ಕುರುವಳ್ಳಿಯಲ್ಲಿ ಕಾಂಗ್ರೆಸ್ ಪ್ರಚಾರ
– ಬಂಡೆ ವೆಂಕಟೇಶ್, ನಾಗರಾಜ್ ನೇತೃತ್ವದಲ್ಲಿ ಮನೆ ಮನೆಗೆ
NAMMUR EXPRESS NEWS
ತೀರ್ಥಹಳ್ಳಿ: ಮೇಲಿನಕುರುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರವಾಗಿ ಮತ ನೀಡುವಂತೆ ಮನೆ ಮನೆಗೆ ಕಾಂಗ್ರೆಸ್ಪಕ್ಷದ ಗ್ಯಾರಂಟಿ ಕಾರ್ಡ್ ಗಳನ್ನು ನೀಡಿ ಮತಯಾಚನೆ ಮಾಡಲಾಯಿತು ಕಾರ್ತಿಕ್ ಗೌಡ ಹೆಗ್ಗೆಬೈಲ್, ಮೇಲಿನಕುರುವಳ್ಳಿ ರಾಜ ಇತರರು ಇದ್ದರು.
ತೀರ್ಥಹಳ್ಳಿ ಪೋಸ್ಟ್ ಮಾಸ್ಟರ್ ಕೃಷ್ಣಮೂರ್ತಿ ನಿವೃತ್ತಿ
– 40 ವರ್ಷಗಳ ಸುದೀರ್ಘ ಸೇವೆಗೆ ಎಲ್ಲೆಡೆ ಮೆಚ್ಚುಗೆ
ತೀರ್ಥಹಳ್ಳಿ: ತೀರ್ಥಹಳ್ಳಿ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೃಷ್ಣಮೂರ್ತಿ ಕೆ.ಎಸ್ ಅವರು ನಿವೃತ್ತಿಯಾಗಿದ್ದು ಅವರನ್ನು ಆತ್ಮೀಯವಾಗಿ ಬೀಳ್ಕೊಡುಗೆ ಮಾಡಲಾಯಿತು. ತಂದೆ ಶಾಂತಪ್ಪ ಗೌಡ, ತಾಯಿ ರತ್ನಮ್ಮ, ಪತ್ನಿ ಪವಿತ್ರ ಮಕ್ಕಳಾದ ಶರತ್, ಭರತ್ ಅವರ ಸುಖಿ ಕುಟುಂಬದೊಂದಿಗೆ ನಿವೃತ್ತ ಜೀವನ ಕಳೆಯಲಿದ್ದಾರೆ. ತೀರ್ಥಹಳ್ಳಿ ತಾಲೂಕು ಕಾವೇರಿ ಮೂಲದ ಕೃಷ್ಣಮೂರ್ತಿ ಅವರ ಕೊಪ್ಪ ಅಂಚೆ ಇಲಾಖೆಯಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭ ಮಾಡಿ ಬಳಿಕ ಆಗುಂಬೆ, ಮೇಗರವಳ್ಳಿ, ಬೆಜ್ಜವಳ್ಳಿ, ತೂದೂರು,ಮಂಡಗದ್ದೆ, ದೇವಂಗಿಇನ್ನಿತರ ಸ್ಥಳಗಳಲ್ಲಿ ಸುದೀರ್ಘ 40 ವರ್ಷಕಾಲ ಕಾರ್ಯ ನಿರ್ವಹಿಸಿದ್ದಾರೆ.ತುಂಬಾ ಸರಳ ಸಜ್ಜನಿಕೆ ವ್ಯಕ್ತಿ ನಿವೃತ್ತಿ ಜೀವನ ವನ್ನು ತೀರ್ಥಹಳ್ಳಿ ಪೋಸ್ಟ್ ಮಾಸ್ಟರ್ ನಿವೃತ್ತಿಯಾಗಿದ್ದಾರೆ..ಅಂಚೆ ಇಲಾಖೆ ಸಿಬ್ಬಂದಿ ವರ್ಗದವರು ಅವರ ನಿವೃತ್ತಿ ಜೀವನಕ್ಕೆ ಶುಭಾಶಯ ಕೋರಿದ್ದಾರೆ.
ಡಾ.ಆನಂದ್ಗೆ ಉತ್ತಮ ಪಶು ವೈದ್ಯ ಪ್ರಶಸ್ತಿ
– ಪಶುವೈದ್ಯಕೀಯ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ
ಕೋಣಂದೂರು: ಹಿರಿಯ ಪಶುವೈದ್ಯಾಧಿಕಾರಿ ಡಾ. ಆನಂದ್ ಅವರಿಗೆ 2024ನೇ ಸಾಲಿನ ಉತ್ತಮ ಪಶುವೈದ್ಯ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನ ಸಭಾಂಗಣ ಹೆಬ್ಬಾಳದಲ್ಲಿ ಕರ್ನಾಟಕ ಪಶುವೈದ್ಯಕೀಯ ಪರಿಷತ್, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಶನಿವಾರ ಏರ್ಪಡಿಸಿದ್ದ ವಿಶ್ವ ಪಶುವೈದ್ಯಕೀಯ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪರಿಷತ್ತಿನ ಅಧ್ಯಕ್ಷರಾದ ಡಾ.ಹೆಚ್.ಸಿ.ಇಂದ್ರೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಕೆ.ಸಿ.ವೀರಣ್ಣ, ನವೀನ್ ಪಶುಪತಿ, ಪ್ರೊ.ಎಂ. ನಾರಾಯಣಸ್ವಾಮಿ, ಡಾ.ಟಿ.ತಿಪ್ಪೇಸ್ವಾಮಿ, ಡಾ.ಟಿ.ಚಂದ್ರಶೇಖರ್ ಇದ್ದರು.
