Categories
ತೀರ್ಥಹಳ್ಳಿ

ಮೈಸೂರು ದಸರಾದಲ್ಲಿ ತೀರ್ಥಹಳ್ಳಿ ಗಾಯಕಿ ಹಾಡು!

ಮೈಸೂರು ದಸರಾದಲ್ಲಿ ತೀರ್ಥಹಳ್ಳಿ ಗಾಯಕಿ ಹಾಡು!
– ಪ್ರಸಿದ್ಧ ಗಾಯಕಿ ಬಾಳೆಬೈಲು ಉಷಾ ಅವರಿಗೆ ಅವಕಾಶ
– ಅ.23ರಂದು ಮೈಸೂರು ದಸರಾ ಕಾರ್ಯಕ್ರಮದಲ್ಲಿ ಗಾಯನ

NAMMUR EXPRESS NEWS
ತೀರ್ಥಹಳ್ಳಿ: ಪ್ರಸಿದ್ಧ ಗಾಯಕಿ ಉಷಾ ತೀರ್ಥಹಳ್ಳಿ ಅವರಿಗೆ ಮೈಸೂರು ದಸರಾದಲ್ಲಿ ಅವಕಾಶ ಸಿಕ್ಕಿದೆ. ಈ ಮೂಲಕ ನಾಡ ಹಬ್ಬದಲ್ಲಿ ತಮ್ಮ ಗಾನ ಸುಧೆ ಹರಿಸಲಿದ್ದಾರೆ. ಈಗಾಗಲೇ ಮಲೆನಾಡಿನ ಹಲವು ವೇದಿಕೆಗಳಲ್ಲಿ ಹಾಡಿರುವ ಉಷಾ ಅವರಿಗೆ ಮೈಸೂರು ದಸರಾ ವೇದಿಕೆಯಲ್ಲಿ ಹಾಡಲು ಅವಕಾಶ ಸಿಕ್ಕಿರುವುದು ತೀರ್ಥಹಳ್ಳಿಗರಿಗೆ ಹೊಸ ಭರವಸೆ ತಂದಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ 2023ರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಬಾಳೆಬೈಲಿನ ಹೆಮ್ಮೆಯ ಗಾಯಕಿ ಉಷಾ.ಹೆಚ್.ಎಸ್ ಅವರನ್ನು ಸಂಗೀತ ಕಾರ್ಯಕ್ರಮ ನೀಡುವಂತೆ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಹ್ವಾನಿಸಿದೆ.

ಇದೇ ಅಕ್ಟೋಬರ್ 23ರಂದು ಮೈಸೂರಿನ ಕಲಾ ವೇದಿಕೆಯಲ್ಲಿ ಉಷಾ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಸುಮಧುರ ಕಂಠದ ಗಾಯಕಿ ತೀರ್ಥಹಳ್ಳಿ ಉಷಾ ಅವರು ರಾಜ್ಯದ ಹಲವಾರು ಕಡೆಯಲ್ಲಿ ತಮ್ಮ ಸಂಗೀತ ಕಾರ್ಯಕ್ರಮವನ್ನು ನೀಡಿದ್ದು, ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿದೆ. ಉಷಾ ಅವರು ತೀರ್ಥಹಳ್ಳಿಯವರಾಗಿದ್ದು, ಇವರು ಮೈಸೂರಿನಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.