ಲಕ್ಕಿ ಹಾರ್ಡ್ವೇರ್ ಸಂಸ್ಥಾಪಕ ಹಬೀಬ್ ಸಾಹೇಬ್ ಅವರಿಗೆ ಎಕ್ಸ್ಟ್ರಾ ಸ್ಟ್ರಾಂಗ್ ಅವಾರ್ಡ್
– ಶಿವಮೊಗ್ಗ ಜಿಲ್ಲೆಗೆ ಮಾರಾಟದಲ್ಲಿ ಪ್ರಥಮ ಸ್ಥಾನ
– ಸಹಕಾರಿ ಸಚಿವರ ಭೇಟಿ ಮಾಡಿದ ಅರ್. ಎಂ. ಎಂ!
– ಒಕ್ಕಲಿಗ ನಾಯಕರ ಮೇಲೆ ಇಡಿ ದಾಳಿ ಏಕೆ..?
NAMMUR EXPRESS NEWS
ತೀರ್ಥಹಳ್ಳಿ: ಭಾರತದ ಮೊದಲ ಸಿಮೆಂಟ್ ಕಂಪನಿ ಆಗಿರುವ ಎಸಿಸಿ ಸಿಮೆಂಟ್ ಕಂಪನಿಯು ಶಿವಮೊಗ್ಗದ ಕಿಮ್ಮನೆ ರೆಸಾರ್ಟ್ ನಲ್ಲಿ ಅಂಮೋಲ್ ಪರಿವಾರ್ ಮಹೋತ್ಸವ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಕೈಮರದ ಲಕ್ಕಿ ಹಾರ್ಡ್ವೇರ್ ಸಂಸ್ಥಾಪಕರಾದ ಹಬೀಬ್ ಸಾಬ್ ಇವರಿಗೆ ಅಂದಾನಿ ಎ ಸಿ ಸಿ, ಸಿಮೆಂಟ್ ಎಕ್ಸ್ಟ್ರಾ ಸ್ಟ್ರಾಂಗ್ ಅವಾರ್ಡ್ ಲಭಿಸಿದೆ. ಎಸಿಸಿ ಸಿಮೆಂಟ್ ಅನ್ನು ಮಾಡುವಲ್ಲಿ ಶಿವಮೊಗ್ಗ ಜಿಲ್ಲೆಯಲ್ಲೇ ಅತೀ ಹೆಚ್ಚು ಮಾರಾಟ ಮಾಡಿದ ಸಾಧನೆಗಾಗಿ ಲಕ್ಕಿ ಹಾರ್ಡ್ವೇರ್ ಸಂಸ್ಥಾಪಕರಾದ ಹಬೀಬ್ ಸಾಹೇಬ್ ಕಲ್ಮನೆ ಬಹುಮಾನ ಪಡೆದಿದ್ದಾರೆ.
ಸತತವಾಗಿ ಮೂರು ವರ್ಷಗಳಿಂದ ನಿರಂತರ ಕಾರ್ಯ ವೈಖರಿಯಲ್ಲಿರುವ ಹಬೀಬ್ ಇವರು ಉತ್ತಮ ಗುಣಮಟ್ಟದ ಸ್ಟೀಲ್ ಅಂಡ್ ಸಿಮೆಂಟ್ ಹಾಗೂ ಪಿವಿಸಿ ಪೈಪ್, ಪೇಯಿಂಟ್, ವಾಟರ್ ಟ್ಯಾಂಕ್ ಸೇರಿದಂತೆ ನಿರ್ಮಾಣ ಮತ್ತು ಗೃಹ ಉಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು ಗ್ರಾಹಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಇವರ ಕಾರ್ಯ ಸಾಧನೆ ಪರಿಶ್ರಮದ ಜೊತೆಗೆ ಉತ್ತಮ ಶ್ರೇಯಸ್ಸಿನತ್ತ ಕೊಂಡೊಯ್ಯಲಿ ಎಂದು ಗ್ರಾಹಕರು ಶುಭ ಹಾರೈಸಿದ್ದಾರೆ.
ಸಹಕಾರಿ ಸಚಿವರ ಭೇಟಿ ಮಾಡಿದ ಅರ್. ಎಂ. ಎಂ!
– ಮಲೆನಾಡು, ಮಧ್ಯ ಕರ್ನಾಟಕಕ್ಕೆ ಬರ ಪ್ಯಾಕೇಜ್ ನೀಡಲು ಮನವಿ
ಬೆಂಗಳೂರು: ಬೆಂಗಳೂರುನಲ್ಲಿ ರಾಜ್ಯ ಸಹಕಾರ ಮಂತ್ರಿಗಳಾದ ತುಮಕೂರು ಜಿಲ್ಲೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಮಾಜಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರನ್ನು ಭೇಟಿ ಮಾಡಿ ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ರಾಜ್ಯ ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕರಾದ ಡಾ.ಆರ್ ಆರ್ ಮಂಜುನಾಥ್ ಗೌಡ ಭೇಟಿ ಮಾಡಿ ಮಾತುಕತೆ ನಡೆಸಿದರು. ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ, ರಾಜ್ಯ ಕೆಎಂಎಫ್ ಅಧ್ಯಕ್ಷರಾದ ಭೀಮ ನಾಯಕ್ ಮತ್ತು ಹೊನ್ನಾಳಿ ಕ್ಷೇತ್ರದ ಶಾಸಕರಾದ ಶಾಂತಣ್ಣಗೌಡರು ಮತ್ತು ಪ್ರಮುಖರು ಜೊತೆಯಲ್ಲಿದ್ದು ಶಿವಮೊಗ್ಗ ಕ್ಷೇತ್ರ ಹಾಗೂ ಹಾಗೂ ದಾವಣಗೆರೆ ಚಿತ್ರದುರ್ಗ ಮತ್ತು ಚಿಕ್ಕಮಗಳೂರು ರೈತರಿಗೆ ಈ ಭೀಕರ ಬರಗಾಲದ ಸಂದರ್ಭದಲ್ಲಿ ಸರ್ಕಾರ ಅನುಕೂಲ ಮಾಡಿಕೊಡಬೇಕಾಗಿ ಮನವಿ ಮಾಡಿದರು. ರಾಜಕೀಯ ಸೇರಿದ ಉದ್ದೇಶದಿಂದ ಕೇಂದ್ರದ ತನಿಖಾ ಸಂಸ್ಥೆಗಳಿಂದ ತೊಂದರೆಯಾದರ ಪಕ್ಷದ ಮುಖಂಡರುಗಳು ಹೆದರುವ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದರು.
ಒಕ್ಕಲಿಗ ನಾಯಕರ ಮೇಲೆ ಇಡಿ ದಾಳಿ ಏಕೆ..?
– ಒಕ್ಕಲಿಗರ ಯುವ ನಾಯಕರಾದ ವಿಶು ಕೌರಿ, ಪವನ್ ಪ್ರಶ್ನೆ
ಒಕ್ಕಲಿಗ ನಾಯಕರ ಮೇಲೆ ಪದೇ ಪದೇ ಇಡಿ ದಾಳಿ ಮಾಡುತ್ತಿದ್ದು, ತೀರ್ಥಹಳ್ಳಿ, ಹೊಸನಗರ ತಾಲೂಕಿನ ಯುವ ಒಕ್ಕಲಿಗರು ಇದನ್ನು ಖಂಡಿಸುತ್ತೇವೆ. ಮುಂದೆ ಇದರ ಬಗ್ಗೆ ಪಕ್ಷಾತೀತವಾಗಿ ಉಗ್ರ ಪ್ರತಿಭಟನೆಯನ್ನು ತಾಲೂಕಿನ ಯುವ ಒಕ್ಕಲಿಗರು ಮಾಡಲಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.ಹೊಸನಗರ ತಾಲೂಕು ಒಕ್ಕಲಿಗರ ಯುವ ಮುಖಂಡ ವಿಶು ಕೌರಿ ಹಾಗೂ ಪವನ್ ಡಿಜಿ ಒಕ್ಕಲಿಗರ ಯುವ ಮುಖಂಡರು ತೀರ್ಥಹಳ್ಳಿ ಆಕ್ರೋಶ ವ್ಯಕ್ತಪಡಿಸಿ ಒಂದು ವರ್ಷದ ಹಿಂದೆ ನಮ್ಮ ರಾಜ್ಯ ಒಕ್ಕಲಿಗರ ಮುಖಂಡರಾದ ಡಿಕೆ ಶಿವಕುಮಾರ್ ಇವರ ಮೇಲೆ ಇಡೀ ದಾಳಿ ಆಗಿತ್ತು. ಈಗ ನಮ್ಮ ಒಕ್ಕಲಿಗರ ನಾಯಕರು ಆದಂತ ಆರ್ ಎಂ ಮಂಜುನಾಥಗೌಡರ ಮನೆ ಮೇಲು ಇಡಿ ದಾಳಿ ಆಗಿದೆ. ಪ್ರತಿ ಸಂದರ್ಭದಲ್ಲಿ ಕೂಡ ಒಕ್ಕಲಿಗರ ಮೇಲೆ ದಾಳಿ ಮಾಡಲಾಗುತ್ತಿದೆ. ರಾಜ್ಯದಲ್ಲಿ ಒಕ್ಕಲಿಗ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ತೀರ್ಥಹಳ್ಳಿ, ಹೊಸನಗರ ತಾಲೂಕಿನ ಯುವ ಒಕ್ಕಲಿಗರು ಖಂಡಿಸುತ್ತೇವೆ. ಮುಂದೆ ಇದರ ಬಗ್ಗೆ ಪಕ್ಷಾತೀತವಾಗಿ ಉಗ್ರ ಪ್ರತಿಭಟನೆಯನ್ನು ತಾಲೂಕಿನ ಯುವ ಒಕ್ಕಲಿಗರು ಮಾಡಲಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.