ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಕ್ಲೈಮಾಕ್ಸ್!?
– ಅಸಾದಿ ವಿರುದ್ಧ ಅವಿಶ್ವಾಸಕ್ಕೆ ಕಾಂಗ್ರೆಸ್ ಸದಸ್ಯರು ಸಜ್ಜು
– ಅ. 18ಕ್ಕೆಹೈ ವೋಲ್ಟೇಜ್ ಸಭೆ: ಯಾರಿಗೆ ಅಧಿಕಾರ?
– ಬಿಜೆಪಿ ಕೊನೆ ಕ್ಷಣದಲ್ಲಿ ಗೇಮ್ ಆಡುತ್ತಾ…?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯತ್ ರಾಜಕೀಯ ಇದೀಗ ಇನ್ನೊಂದು ಹಂತಕ್ಕೆ ಹೊರಳಿದೆ. ಕಾಂಗ್ರೆಸ್ ಪಕ್ಷದ ವಿಪ್ ಸ್ವೀಕರಿಸಲು ನಿರಾಕರಿಸಿದ ಹಾಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತುಲ್ಲಾ ಅಸಾದಿ, ಸದಸ್ಯರಾದ ಸುಶೀಲಾ ಶೆಟ್ಟಿ, ನಮ್ರತ್ ಅವರ ಮನೆಯ ಗೋಡೆಗೆ ವಿಪ್ ನೋಟಿಸ್ ಅನ್ನು ಜಿಲ್ಲಾ ಕಾಂಗ್ರೆಸ್ ಕಾಂಗ್ರೆಸ್ ಅಂಟಿಸಿದೆ.
ಅ.18ಕ್ಕೆ ಅಧ್ಯಕ್ಷರ ವಿರುದ್ಧ ಆವಿಶ್ವಾಸ ಇದ್ದು, ಇದೀಗ ನಡೆದ ಬೆಳವಣಿಗೆ ಭಾರೀ ಚರ್ಚೆಗೆ ಕಾರಣವಾಗಿದೆ. ಇನ್ನು ಆವಿಶ್ವಾಸ ವಿರುದ್ಧ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತುಲ್ಲಾ ಅಸಾದಿ ತಡೆಯಾಜ್ಞೆಯನ್ನು ಕೋರ್ಟ್ ನಿರಾಕರಿಸಿದೆ. ಇದೀಗ ಎಲ್ಲರ ಕಣ್ಣು ಮುಂದಿನ ನಡೆ ಕಡೆ ನೆಟ್ಟಿದೆ.
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ನಲ್ಲಿ ಅ. 18ರಂದು ಸಭೆ ನಡೆಯಲಿದೆ. ಪಟ್ಟಣ ಪಂಚಾಯತ್ ಅಧ್ಯಕ್ಷ ಅಸಾದಿ ವಿರುದ್ಧ ಸ್ವಪಕ್ಷ ಸದಸ್ಯರೇ ಅವಿಶ್ವಾಸ ನಿರ್ಣಯ ಮಾಡಿದ್ದು ಮೂವರು ವಿಪ್ಪಡೆದಿಲ್ಲ. ಅವಿಶ್ವಾಸ ನಿರ್ಣಯ ಆಗುತ್ತಾ? ಅಥವಾ ಅಧಿಕಾರ ಬಿಜೆಪಿ ಪಕ್ಷದ ಪಾಲಾಗುತ್ತಾ ಎಂಬ ಕುತೂಹಲ ಇದೆ. ಬಿಜೆಪಿ ಅಧಿಕಾರಕ್ಕೆ ಹಿಡಿಯುವ ಸಾಧ್ಯತೆ ಬಗ್ಗೆ ಇನ್ನು ಯಾವುದೇ ಮಾಹಿತಿ ಲಭ್ಯ ಆಗಿಲ್ಲ.
