Categories
ತೀರ್ಥಹಳ್ಳಿ

ಹರಿವು ನಿಲ್ಲಿಸಿದ ತೀರ್ಥಹಳ್ಳಿ ತುಂಗಾ ನದಿ!

ಹರಿವು ನಿಲ್ಲಿಸಿದ ತೀರ್ಥಹಳ್ಳಿ ತುಂಗಾ ನದಿ!
– ಮಲೆನಾಡಿಗೆ ಎದುರಾಗಿದೆ ಜಲಾಘಾತದ ಆತಂಕ
– ತುಂಗಾ ನದಿ ಕಳೆದ ವರ್ಷದಿಂದ ನೀರಿನ ಹರಿವು ನಿಲ್ಲಿಸಿದೆ!
– ನೀರು ನಿಂತರೂ ಮರಳು ಅಗೆಯೋದು ಬಿಡುತ್ತಿಲ್ಲ!

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನಲ್ಲಿ ಬರದ ಬೇಗೆಗೆ ಜಲಮೂಲಗಳು ಬತ್ತಲು ಆರಂಭಿಸಿದೆ. ಮಲೆನಾಡಿನ ನದಿಗಳು, ಹಳ್ಳಗಳು ಬತ್ತಿವೆ. ಶತಮಾನದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ತೀರ್ಥಹಳ್ಳಿ ತುಂಗಾ ನದಿ ಬತ್ತಿ ಹೋಗಿದ್ದು, ಹರಿವು ನಿಲ್ಲಿಸಿದೆ.
ಈ ವರ್ಷ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಬತ್ತಿ ಹೋಗಿದೆ. ಶತಮಾನಗಳ ಅವಧಿಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಈ ನದಿ ತನ್ನ ಹರಿವನ್ನು ನಿಲ್ಲಿಸಿದೆ. ಕಳೆದ ವರ್ಷ ಹಲವೆಡೆ ಹರಿವು ನಿಲ್ಲಿಸಿತ್ತು. ಆದರೆ ಈ ವರ್ಷ ಈಗಾಗಲೇ ಅನೇಕ ಭಾಗದಲ್ಲಿ ನದಿ ಹರಿವು ಕಡಿತಗೊಂಡಿದೆ. ಪರಿಣಾಮವಾಗಿ ನದಿಯ ನೀರನ್ನೇ ನೆಚ್ಚಿಕೊಂಡಿದ್ದ ಜನ ಸಾಮಾನ್ಯರು ಹೈರಾಣಾಗಿದ್ದಾರೆ.

ಮಂಡಗದ್ದೆ ಹೋಬಳಿ, ಹೆದ್ದೂರು, ಹೊಸಹಳ್ಳಿ, ದಬ್ಬಣಗದ್ದೆ ಭಾಗಗಳಲ್ಲಿ ತುಂಗಾ ನದಿ ನೀರು ಹರಿಯುವುದನ್ನು ನಿಲ್ಲಿಸಿದೆ. ಬೇಸಿಗೆ ಆರಂಭದಲ್ಲಿ ನದಿ ನೀರು ಬತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಪ್ರತಿ ವರ್ಷ ಮೇ ತಿಂಗಳಿನಲ್ಲಿ ತುಂಗಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿತ್ತು. ಎಪ್ರಿಲ್ ಹಾಗೂ ಮೇ ತಿಂಗಳಿನ ಬಿರು ಬೇಸಿಗೆಗೆ ನದಿಯಲ್ಲಿ ನೀರು ಕಡಿಮೆಯಾದರೂ ಕೂಡ ಕೃಷಿಗೆ, ಕೃಷಿಪೂರಕ ಚಟುವಟಿಕೆಗಳಿಗೆ ಅಭಾವ ಉಂಟಾಗುತ್ತಿರಲಿಲ್ಲ. ಆದರೆ ಈ ಸಾರಿ ಮಾತ್ರ ಮಾರ್ಚ್ ತಿಂಗಳಿನಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು, ಮಾರ್ಚ್ ತಿಂಗಳ ಕೊನೆಯಲ್ಲಿಯೇ ನೀರು ಹರಿಯುವುದು ನಿಂತಿದೆ. ಕುಡಿಯಲು ಕೂಡ ನೀರು ಸಿಗುತ್ತಿಲ್ಲ, ಅಡಿಕೆ ಗಿಡಗಳು ಸುಟ್ಟು ಹೋಗುತ್ತಿವೆ. ರೈತರು ತಲೆ ಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

ನೀರು ನಿಂತರೂ ಮರಳು ಮಾಫಿಯಾ ನಿಂತಿಲ್ಲ!

ತುಂಗಾ, ಮಾಲತಿ, ಶರಾವತಿ ಸೇರಿ ನೂರಾರು ಹಳ್ಳಗಳಲ್ಲಿ ನೀರು ನಿಂತರೂ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಲೇ ಇದೆ. ನದಿಯು ಬರಿದಾದ ಮೇಲು ಕೂಡ ರಾಜಾರೋಷವಾಗಿ ಅಕ್ರಮ ಮರಳನ್ನು ಸಾಗಾಟ ಮಾಡಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಎಲ್ಲಾ ಸೌಲಭ್ಯಗಳು ಇದ್ದು ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಿಸಿ ಅಕ್ರಮ ಮರಳು ಗಣಿಗಾರಿಕೆಗೆ ತಡೆ ಹಾಕದಿದ್ದರೆ ಮುಂದೊಂದು ದಿನ ಮಲೆನಾಡಿನ ಜನರು ಕುಡಿಯಲು ನೀರಿಲ್ಲದೆ ಸಾಯುವ ದುಸ್ಥಿತಿ ಎದುರಾಗಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.