ರಾಷ್ಟ್ರ ಮಟ್ಟಕ್ಕೆ ತೀರ್ಥಹಳ್ಳಿ ಹಳ್ಳಿ ಹುಡುಗಿಯರು!
– ಕಬಡ್ಡಿಯಲ್ಲಿ ಶ್ರೀ ತಿಪ್ಪೇಸ್ವಾಮಿ ಪ್ರಾಢಶಾಲೆ ಅರನಲ್ಲಿ ಮಕ್ಕಳು ರಾಷ್ಟ್ರ ಮಟ್ಟಕ್ಕೆ
– ವಿದ್ಯಾರ್ಥಿನಿಯರಿಗೆ ಸನ್ಮಾನ ಮಾಡಿದ ಶಿಕ್ಷಣ ಇಲಾಖೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಶ್ರೀ ತಿಪ್ಪೇಸ್ವಾಮಿ ಪ್ರಾಢಶಾಲೆ, ಅರನಲ್ಲಿ ಶಾಲೆಯ ವಿದ್ಯಾರ್ಥಿನಿಯರು ಕಬಡ್ಡಿ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು, ಗ್ರಾಮಸ್ತರು, ತೀರ್ಥಹಳ್ಳಿ ಶಿಕ್ಷಣ ಅಧಿಕಾರಿಗಳಾದ ಗಣೇಶ್, ಶಾಲಾ ಶಿಕ್ಷಕರು ಸೇರಿ ಸಾಧಕ ವಿದ್ಯಾರ್ಥಿನಿಯರನ್ನು ಸನ್ಮಾನಿಸಿದ್ದಾರೆ. ಜನವರಿ 5ರಂದು ರಾಜಸ್ತಾನದ ಜಯಪುರದಲ್ಲಿ ಈ ಸ್ಪರ್ಧೆ ನಡೆಯಲಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಇಸಿಓ ಗಣೇಶ್,ಟಿಪಿಒ ಚಂದ್ರಪ್ಪ ಹಾಗೂ ದೈಹಿಕ. ಶಿ. ಸಂಘದ ಅಧ್ಯಕ್ಷರಾದ ರಮೇಶ್ ಮಳಲಿಮಕ್ಕಿ ಶಾಲೆಗೆ ಭೇಟಿ ನೀಡಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರು ವಿಭಾಗದಿಂದ ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳಿಗೆ,ತರಬೇತುದಾರರಿಗೆ ಸನ್ಮಾನಿಸಿ ರಾಷ್ಟ್ರ ಮಟ್ಟಕ್ಕೆ ಶುಭಾಶಯ ಕೋರಿದರು.
ಕಳೆದ ತಿಂಗಳು ಬೆಂಗಳೂರು ವಿಭಾಗ ಮಟ್ಟದ 17 ವರ್ಷ ವಯೋಮಿತಿಯೊಳಗಿನ ಪ್ರೌಢಶಾಲಾ ವಿಭಾಗದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ಕುಮಾರಿ ಸಿಂಚನ ಹೆಚ್ ಪಡೆದಿದ್ದರು. ಸಾಧನ,ನಾಗಶ್ರೀ ದೀಕ್ಷಿತಾ ,ಸಪ್ನ , ಉಷಾ, ನಮಿತಾ, ಜ್ಞಾನ, ಶ್ರಾವ್ಯ, ಐಶ್ವರ್ಯ, ದೀಕ್ಷಾ ಮತ್ತು ಸಂಜನಾ ಭಾಗವಹಿಸಿದ್ದು, ವ್ಯವಸ್ಥಾಪಕರಾಗಿ ಗೀತಾ ಮತ್ತು ಕೋಚ್ ರೇವಣಪ್ಪ ದೈಹಿಕ ಶಿಕ್ಷಣ ಶಿಕ್ಷಕರು ಭಾಗವಹಿಸಿದ್ದರು. ರಾಷ್ಟ್ರ ಮಟ್ಟದ ತಂಡದಲ್ಲಿ ಸಿಂಚನಾ ,ಸಾಧನ, ದೀಕ್ಷೀತಾ, ನಾಗಶ್ರೀ, ಸ್ವಪ್ನಾ ಇಟ್ಟಿಗೆಹಳ್ಳಿ ಆಡಲಿದ್ದಾರೆ.