ತೀರ್ಥಹಳ್ಳಿ: ಮನೆ ಬಾಡಿಗೆ ಕೊಡಬೇಕಾದರೆ ಹುಷಾರ್..!
– ಬಸ್, ಆಟೋದಲ್ಲಿ ವಿದ್ಯಾರ್ಥಿಗಳನ್ನು ಮಿತಿಮೀರಿ ತುಂಬಿಸುವಂತಿಲ್ಲ!
– ಆನ್ಲೈನ್ ವಂಚನೆ, ಗಾಂಜಾ, ಕ್ರೈಂ ಬಗ್ಗೆ ಡಿವೈಎಸ್ಪಿ ಹೇಳಿದ್ದೇನು?
NAMMUR EXPRESS NEWS
ತೀರ್ಥಹಳ್ಳಿ: ಹೊರ ಭಾಗದ ಜನರು ಕೆಲಸವನ್ನು ಅರಸಿಕೊಂಡು ತೀರ್ಥಹಳ್ಳಿಯಲ್ಲಿ ನೆಲೆ ಉರುತ್ತಿದ್ದಾರೆ, ಯಾರಾದರೂ ಹೊರಗಿನ ಊರಿನಿಂದ ಬಂದವರಿಗೆ ಬಾಡಿಗೆ ಕೊಡಬೇಕಾದರೆ, ಅಥವಾ ಹೊರ ಭಾಗದ ಜನರಿಗೆ ಕೆಲಸ ಕೊಡಬೇಕಾದರೆ, ಅವರಿಗೆ ಮನೆ, ಲೇ ಔಟ್ ನೀಡಬೇಕಾದರೆ, ಲೀಸ್ ಮಾಡಬೇಕಾದರೆ ಕೆಲವೊಂದು ಪೊಲೀಸ್ ನಿಯಮ ಪಾಲನೆ ಮಾಡಬೇಕು.
ಹೌದು. ಈ ಬಗ್ಗೆ ತೀರ್ಥಹಳ್ಳಿಯಲ್ಲಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಮಾತನಾಡಿ, ಹೊರ ಊರಿನವರಿಗೆ ಮನೆ ಕೊಡುವಾಗ ಆಧಾರ್ ಕಾರ್ಡ್, ರೇಷನ್ ಕಾರ್ಡ್, ರೆಸಿಡೆನ್ಸಿಯಲ್ ಪ್ರೂಫ್ ಅನ್ನು ತೆಗೆದುಕೊಳ್ಳಬೇಕು, ಒಂದು ವೇಳೆ ವ್ಯಕ್ತಿಯ ಬಗ್ಗೆ ನಿಮಗೆ ಏನಾದರೂ ಸಂದೇಹ ಕಂಡುಬಂದಲ್ಲಿ ತಕ್ಷಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು ಎಂದು ನಾಗರೀಕರಲ್ಲಿ ವಿನಂತಿ ಮಾಡಿದ್ದಾರೆ.
ಒಂದು ವೇಳೆ ಈ ನಿಯಮ ಪಾಲಿಸದೆ ಹೋದರೆ, ಹೊರಭಾಗದ ವ್ಯಕ್ತಿ ಯಾರಾದರೂ ಅಪರಾಧ ಅಥವಾ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗವಹಿಸಿದರೆ ಮನೆ ಮಾಲೀಕ ಯಾರು ಇರುತ್ತಾರೋ ಅವರನ್ನು ಜವಾಬ್ದಾರಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಒಂದು ವೇಳೆ ಹೊರಭಾಗದ ವ್ಯಕ್ತಿಯು ನಿಮ್ಮಲ್ಲಿ ಕೆಲಸ ಅರಿಸಿಕೊಂಡು ಅಥವಾ ಮನೆ ಬಾಡಿಗೆ ಅರಸಿಕೊಂಡು ಬಂದಲ್ಲಿ ನಿಮಗೆ ಅವರ ಬಗ್ಗೆ ತಿಳಿದುಕೊಳ್ಳಲು ಹತ್ತಿರದ ಠಾಣೆ ಸಂಪರ್ಕಿಸಿ ಅವರ ಬಗ್ಗೆ ತಿಳಿದುಕೊಳ್ಳಿ ಎಂದರು.
ಮಿತಿ ಮೀರಿ ವಿದ್ಯಾರ್ಥಿಗಳನ್ನು ಹಾಕುವ ಹಾಗಿಲ್ಲ!
ಸ್ಕೂಲ್ ಹಾಗೂ ಕಾಲೇಜುಗಳೆಲ್ಲಾ ಪುನಃ ಪ್ರಾರಂಭವಾಗಿದ್ದು, ಎಲ್ಲ ಮಕ್ಕಳು ಪ್ರೈವೇಟ್ ಬಸ್ ಹಾಗೂ ಸ್ಕೂಲ್ ನಲ್ಲಿ ಕೊಡುವಂತಹ ಬಸ್, ಆಟೋ, ಓಮಿನಿ, ಟಿಟಿನಲ್ಲಿ ಸಂಚರಿಸುತ್ತಿದ್ದಾರೆ. ಈ ವಾಹನಗಳಲ್ಲಿ ಮಿತಿಮೀರಿದ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದಾರೆ. ನಾನು ಬಹಳ ಸಲ ನೋಡಿದ್ದೇನೆ ಫೈನ್ ಕೂಡ ಹಾಕಿದ್ದೇನೆ. ಪ್ರಾಣಕ್ಕಿಂತ ದೊಡ್ಡದು ಯಾವುದು ಅಲ್ಲ, ಬಸ್ ನ ಕೆಪ್ಯಾಸಿಟಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಬಸ್ ನಲ್ಲಿ ತುಂಬಿಸುವಂತಿಲ್ಲ. ಇಂಥ ಡೇಂಜರಸ್ ಡ್ರೈವಿಂಗ್ ಗೆ ಅವಕಾಶ ಮಾಡಿಕೊಡಬಾರದು. ಇಂತಹ ನಿಯಮಬಾಹಿರವಾಗಿ ಚಾಲನೆ ಮಾಡುವರ ಮೇಲೆ ಕೇಸ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಕ್ರೀದ್ ಹಬ್ಬ ಎಲ್ಲೆಡೆ ಶಾಂತಿಯುತ ಆಚರಣೆಗೆ ಕರೆ
ಬಕ್ರೀದ್ ಹಬ್ಬ ಬರುತ್ತಿದ್ದು ಎಲ್ಲೆಡೆ ಶಾಂತಿ ಸುವ್ಯವಸ್ಥೆಗೆ ಕ್ರಮ ಅನುಸರಿಸುತ್ತಿದ್ದು, ಈ ಒಂದು ಹಬ್ಬವನ್ನು ಶಾಂತಿಯುತವಾಗಿ ಸಹಬಾಳ್ವೆಯಿಂದ ಎಲ್ಲರೂ ಆಚರಿಸುವಂತೆ ಮನವಿ ಮಾಡಿದರು.
ಸೈಬರ್ ವಂಚನೆ ಬಗ್ಗೆ ಹುಷಾರ್..!
ಸೈಬರ್ ಸೆಕ್ಯೂರಿಟಿ ಹಾಗೂ ಆನ್ಲೈನ್ ವಂಚನೆ ಸಂಬಂಧಪಟ್ಟಂತೆ, ಇತ್ತೀಚಿನ ದಿನಗಳಲ್ಲಿ ಇಂಟರ್ ನೆಟ್ ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಸುಮಾರು ಪ್ರಕರಣಗಳನ್ನು ನಾವು ದಾಖಲು ಮಾಡುತ್ತಿದ್ದೇವೆ. ಯಾವುದೇ ಒಂದು ಸೂಕ್ಷ್ಮ ಮಾಹಿತಿಯನ್ನು ನಾವು ಶೇರ್ ಮಾಡಬೇಕಾದರೆ ಅದಕ್ಕೆ ನಾವು ರಜವಾಬ್ದಾರಿ ಆಗಿರುತ್ತೇವೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ. ಡಿಜಿಟಲ್ ಲಾಗ್ ಎಲ್ಲಾ ಕಡೆ ಇದ್ದು,ಯಾವುದರಿಂದಲೂ ನಾವು ತಪ್ಪಿಸಿಕೊಳ್ಳಲು ಆಗುವುದಿಲ್ಲ. ಹಾಗೂ ಯಾವುದೇ ಬಲ್ಲ ಮೂಲಗಳು ಇಲ್ಲದ ಆಪ್ ಗಳನ್ನು ಇನ್ಸ್ಟಾಲ್ ಮಾಡಬಾರದು, ಇದರಿಂದ ವಂಚನೆಗಳಾಗುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ, ತುಂಬಾ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಜಾಗರೂಕರಾಗಿರಿ ಎಂದು ಎಚ್ಚರಿಕೆ ನೀಡಿದರು. ಈ ನಿಟ್ಟಿನಲ್ಲಿ ಸ್ವಲ್ಪ ಅರಿವು ನಮ್ಮ ಜನರಿಗೆ ಅಗತ್ಯವಿದೆ ಎಂದು ತಿಳಿಸಿದರು.
ಗಾಂಜಾ ಮುಕ್ತ ತೀರ್ಥಹಳ್ಳಿ ಆಗ್ಬೇಕು!
ಗಾಂಜಾಗೆ ಸಂಬಂಧಪಟ್ಟಂತೆ ತೀರ್ಥಹಳ್ಳಿಯಲ್ಲಿ ಸುಮಾರು ಪ್ರಕರಣಗಳು ಕಂಡುಬರುತ್ತಿದ್ದು, ನಾವು ಗಾಂಜಾ ಮುಕ್ತ ಶಿವಮೊಗ್ಗ, ಗಾಂಜಾ ಮುಕ್ತ ತೀರ್ಥಹಳ್ಳಿ ಎನ್ನುವ ವಿಶೇಷ ಯೋಜನೆ ಮಾಡುತ್ತಿದ್ದೇವೆ. ತೀರ್ಥಹಳ್ಳಿ ತಾಲೂಕಿನಲ್ಲಿ ಗಾಂಜಾ ಬೆಳೆದ ಒಬ್ಬರನ್ನು ಕಳೆದೆರಡು ದಿನಗಳ ಹಿಂದೆ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದೇವೆ ಎಂದರು.
