Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪ್ರಮುಖ ಸುದ್ದಿಗಳು

ತೀರ್ಥಹಳ್ಳಿ ಪ್ರಮುಖ ಸುದ್ದಿಗಳು
– ಕೋಣಂದೂರು ರೋಟರಿ ಕ್ಲಬ್ ಕುಟುಂಬ ಸಮ್ಮಿಲನ!
– ತೀರ್ಥಹಳ್ಳಿ: ಇರುವೆ ಪುರಾಣ ನಾಟಕ ಪ್ರದರ್ಶನ
– ಹಾರೋಗೋಳಿಗೆ: ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ದೀಪೋತ್ಸವ

ಕೋಣಂದೂರು ರೋಟರಿ ಕ್ಲಬ್ ಕುಟುಂಬ ಸಮ್ಮಿಲನ!

ಕೋಣಂದೂರು: ಆರಗ ಸಮೀಪದ ನಾಡ್ತಿ ರಿವರ್ ಹೋಮ್ ಸ್ಟೇ
ಆಡುಗೋಡಿನಲ್ಲಿ ಮಂಗಳವಾರ ಕೋಣಂದೂರು ರೋಟರಿ ಕ್ಲಬ್ ಕುಟುಂಬ ಸಮ್ಮಿಲನ ಮತ್ತು ಸಹಾಯಕ ಗವರ್ನರ್ ರಿವ್ಯೂ ಸಭೆ ನಡೆಯಿತು. ಸಹಾಯಕ ಗವರ್ನರ್ ಎಚ್.ಎಂ.ಸುರೇಶ್ ಕ್ಲಬ್ ನ ಇದುವರೆಗಿನ ಕಾರ್ಯ ಚಟುವಟಿಕೆಗಳ ಮಾಹಿತಿ ಪಡೆದರು. ಹಿರಿಯ ರೋಟರಿ ಕ್ಲಬ್ ಸದಸ್ಯ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಹೆಸರು ಮಾಡಿದ ಗುಡ್ಡೆಕೊಪ್ಪ ಗಿರಿಯಪ್ಪ ಗೌಡ ಅವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್ಅಧ್ಯಕ್ಷ ಡಿ.ಆರ್.ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ
ಎಂ.ಟಿ.ಪುಟ್ಟಪ್ಪ ಇದ್ದರು. ಡಿ.ಪಿ.ಶ್ರೀಕಾಂತ್ ವಂದಿಸಿದರು. ಹೊಸಕೊಪ್ಪ ಶಿವು ಕಾರ್ಯಕ್ರಮ ನಿರ್ವಹಿಸಿದರು.

ತೀರ್ಥಹಳ್ಳಿ: ಇರುವೆ ಪುರಾಣ ನಾಟಕ ಪ್ರದರ್ಶನ

ತೀರ್ಥಹಳ್ಳಿ: ನಟ ಮಿತ್ರರು ತೀರ್ಥಹಳ್ಳಿ ಅರ್ಪಣೆ ಯ ,ಕೆ.ಜಿ.ಕೃಷ್ಣಪ್ಪ ನಿರ್ದೇಶನದ ಕಿನ್ನರ ಮೇಳ ತುಮರಿ ತಂಡ ಪ್ರಸ್ತುತಪಡಿಸಿದ “ಇರುವೆ ಪುರಾಣ” ನಾಟಕ ಸ.ಪ.ಪೂ.ಕಾಲೇಜ್ ಪ್ರೌಢಶಾಲಾ ವಿಭಾಗ ತೀರ್ಥಹಳ್ಳಿಯಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಸಂದೇಶ್ ಜವಳಿ,ಉಪ ಪ್ರಾಚಾರ್ಯರಾದ ಮಂಜಪ್ಪ.ಎನ್,ಚೇತನ್ ಸಹ್ಯಾದ್ರಿ ,ಶಿಕ್ಷಕರು ಉಪಸ್ಥಿತರಿದ್ದರು. ನೀತಿಯೊಂದಿಗೆ ಮನೋರಂಜನೆ ನೀಡಿ ನಾಟಕ ಉತ್ತಮ ಪ್ರದರ್ಶನ ಕಂಡಿತು.

ಹಾರೋಗೋಳಿಗೆ: ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ದೀಪೋತ್ಸವ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾರೋಗೋಳಿಗೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು, ತಾಲ್ಲೂಕು ಯೋಜನಾಧಿಕಾರಿಗಳಾದ ಮಾಲತಿ ದಿನೇಶ್ ಇವರ ಮಾರ್ಗದರ್ಶನದಲ್ಲಿ, ಹಾರೋಗೋಳಿಗೆ ಗ್ರಾಮಸ್ಥರ ಸಹಕಾರದಲ್ಲಿ ಹಾರೋಗೋಳಿಗೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರಭಿಷೇಕ ಹಾಗೂ 2ನೇ ವರ್ಷದ ಭಜನೋತ್ಸವ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಲ್ಲಿ ನೆರವೇರಿಸಿ,ಭಕ್ತಾದಿಗಳಿಗೆ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಿ ಗ್ರಾಮಸ್ಥರ ಮೆಚ್ಚುಗೆ ಪಡೆದರು,

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.