Categories
ತೀರ್ಥಹಳ್ಳಿ

ತೀರ್ಥಹಳ್ಳಿ: ಹಲವೆಡೆ ಹಳ್ಳ ಹಿಡಿದ ಬಹು ಗ್ರಾಮ ಕುಡಿಯುವ ನೀರು ಯೋಜನೆ

ತೀರ್ಥಹಳ್ಳಿ: ಹಲವೆಡೆ ಹಳ್ಳ ಹಿಡಿದ ಬಹು ಗ್ರಾಮ ಕುಡಿಯುವ ನೀರು ಯೋಜನೆ

– ಕಾಮಗಾರಿ ಅರ್ಧಬರ್ಧ, ಜತೆಗೆ ರಸ್ತೆಗಳನ್ನು ಅಗೆತ
– ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲು ಆರೋಪ?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅನೇಕ ಕಡೆ ಹಳ್ಳ ಹಿಡಿಯುವ ಸೂಚನೆಗಳು ಕಾಣುತ್ತಿವೆ. ಏಕೆಂದರೆ ಅನೇಕ ಕಡೆ ಈ ಯೋಜನೆ ಕಾಮಗಾರಿ ಅರ್ಧಬರ್ಧ ಆಗಿದೆ. ಜತೆಗೆ ರಸ್ತೆಗಳನ್ನು ಅಗೆಯಲಾಗಿದ್ದು, ಕಾಮಗಾರಿ ಅಲ್ಲೇ ನಿಲ್ಲಿಸಿರುವ ಕಾರಣ, ಜನತೆಗೆ ತೊಂದರೆಯಾಗುತ್ತಿದೆ.
ಇದಕ್ಕೆ ನಿದರ್ಶನ ಎಂಬಂತೆ ಹಾರೋಗೋಳಿಗೆ ಗ್ರಾಮ ಪಂಚಾಯಿತಿ ಹುಲಿಗುದ್ದು ಊರಿನಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜ ಪೈಪ್ ಲೈನ್ ಗಳನ್ನು ತೆಗೆದಿದ್ದು ಮಳೆ ಬಂತು ಅಂತ ಅರ್ಧಕ್ಕೆ ಕಾಮಗಾರಿಗಳನ್ನು ನಿಲ್ಲಿಸಲಾಗಿದೆ. ಅಲ್ಲದೇ ಪೈಪ್ ಲೈನ್ ತೆಗೆದ ಗುಂಡಿಗಳನ್ನು ಮುಚ್ಚದೆ ಅರ್ಧಂಬರ್ಧ ಕೆಲಸ ಮಾಡಿ ಜನರಿಗೆ ಓಡಾಡಲು ಸಮಸ್ಯೆ ಮಾಡಲಾಗಿದೆ. ದಯವಿಟ್ಟು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿ ಜನರು ಮನವಿ ಮಾಡಿಕೊಂಡಿದ್ದಾರೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.