ಮುಳುಗಿತ್ತು ತೀರ್ಥಹಳ್ಳಿ ರಾಮ ಮಂಟಪ!
– ಶೃಂಗೇರಿ ಭಾಗದಲ್ಲಿ ಭೀಕರ ಮಳೆ: ಭೋರ್ಗರೆವ ತುಂಗಾ ನದಿ
– ಬೆಳಿಗ್ಗೆ ಕೊಂಚ ಮಳೆ ಕಡಿಮೆ: ಪ್ರವಾಹ ಭೀತಿ
– ಸೋಮೇಶ್ವರ ಬಳಿ ರಸ್ತೆ ಕಡಿತ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಸೋಮವಾರ ರಾತ್ರಿ ತುಂಗಾ ನದಿ ರಾಮ ಮಂಟಪ ಮುಳುಗಿದೆ. ಬೆಳಗ್ಗೆ ವೇಳೆಗೆ ಕೊಂಚ ಮಳೆ ಕಡಿಮೆ ಆದ ಕಾರಣ ಅರ್ಧ ಅಡಿ ಕಾಣುತ್ತಿದೆ. ಈಗಾಗಲೇ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ ಭಾಗದಲ್ಲಿ ಭಾರೀ ಮಳೆಯಾಗಿದೆ. ಶೃಂಗೇರಿ ಭಾಗದಲ್ಲಿ ಪ್ರವಾಹ ಉಂಟಾಗಿದೆ. ಹೊರನಾಡು ಜಯಪುರ ಸೇರಿ ಅನೇಕ ಭಾಗದ ರಸ್ತೆ ಸಂಪರ್ಕ ಕಡಿತಗೊಂಡಿದೆ.ತೀರ್ಥಹಳ್ಳಿ ತಾಲ್ಲೂಕಿನಲ್ಲಿ ತುಂಗಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ತೀರ್ಥಹಳ್ಳಿ ತುಂಗಾ ನದಿ ಅಪಾಯದತ್ತ ಹರಿಯುತ್ತಿದ್ದು, ಜನತೆ ಎಚ್ಚರ ವಹಿಸುವುದು ಅಗತ್ಯವಾಗಿದೆ.
ಭೋರ್ಗರೆವ ತುಂಗಾ ನದಿ ನೋಡಲು ಜನ ನದಿ ತೀರಕ್ಕೆ ಬರುತ್ತಿದ್ದಾರೆ. ಪೊಲೀಸರು ಅಗತ್ಯ ಎಚ್ಚರಿಕೆ ವಹಿಸಬೇಕಿದೆ.
ಹೆಬ್ರಿ ಆಗುಂಬೆ ಮಾರ್ಗದ ಸೀತಾನದಿ ನೀರು ಉಕ್ಕಿದ್ದು ಸಂಪರ್ಕ ಕಡಿತವಾಗಿದೆ. ಈ ಬಗ್ಗೆ ಗಮನ ವಹಿಸಬೇಕಿದೆ.
ಎಲ್ಲಾ ಸುದ್ದಿಗಳಿಗೆ nammurexpress.in ವೀಕ್ಷಿಸಿ.
