Categories
ತೀರ್ಥಹಳ್ಳಿ

ತೀರ್ಥಹಳ್ಳಿ : ಕಮ್ಮರಡಿಯ ಬಳಿ ಕಾಡುಕೋಣ ಪ್ರತ್ಯಕ್ಷ..!!

ತೀರ್ಥಹಳ್ಳಿ : ಕಮ್ಮರಡಿಯ ಬಳಿ ಕಾಡುಕೋಣ ಪ್ರತ್ಯಕ್ಷ..!!
– ಭತ್ತದ ಗದ್ದೆಯ ಸಸಿಗಳನ್ನು ನಾಶ ಮಾಡಿದ ಕಾಡುಕೋಣ
– ಅರಣ್ಯ ಅಧಿಕಾರಿಗಳು ಗಮನಿಸಬೇಕು ಎಂದು ರೈತರ ಆಕ್ರೋಶ

NAMMUR EXPRESS NEWS
ತೀರ್ಥಹಳ್ಳಿ :ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಮ್ಮರಡಿ ಹತ್ತಿರ ಕೆಸಲೂರು ಗ್ರಾಮ ಹಡ್ಸೆಯ ಕೃಷ್ಣಪ್ಪ ಹೆಚ್ ಸಿ ಮತ್ತು ಸುಂದ್ರೇಶ್ ಹೆಚ್ ಡಿ ಎಂಬುವವರ ಗದ್ದೆಯ ಭತ್ತದ ಸಸಿಗಳನ್ನು ಕಾಡು ಕೋಣಗಳು ನಾಶ ಮಾಡಿದೆ. ಇದರಿಂದ ರೈತರಿಗೆ ದಿಕ್ಕು ತೋಚದಂತಹ ಪರಿಸ್ಥಿತಿ ಎದುರಾಗಿದೆ. ರೈತರು ಅರಣ್ಯ ಇಲಾಖೆಯ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೇಗರವಳ್ಳಿ ವಲಯ ಅರಣ್ಯ ಅಧಿಕಾರಿಗಳಿಗೆ ಮನವಿ ನೀಡಿದ್ದು ಸೂಕ್ತ ಪರಿಹಾರಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.