ತೀರ್ಥಹಳ್ಳಿಯಲ್ಲಿ ಇಂದು ವಿಶ್ವ ಮಾತೃ ಭಾಷಾ ದಿನ
– ಸರ್ಕಾರಿ ಪ್ರೌಢಶಾಲೆ ರಾಮಕೃಷ್ಣಪುರದಲ್ಲಿ ಕಾರ್ಯಕ್ರಮ
– ತೀರ್ಥಹಳ್ಳಿ ಕಸಾಪ ಆಯೋಜನೆ: ಸರ್ವರಿಗೂ ಸ್ವಾಗತ
NAMMUR EXPRESS NEWS
ತೀರ್ಥಹಳ್ಳಿ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ತೀರ್ಥಹಳ್ಳಿ ಹಾಗೂ ಸರ್ಕಾರಿ ಪ್ರೌಢಶಾಲೆ ರಾಮಕೃಷ್ಣಪುರ ತೀರ್ಥಹಳ್ಳಿ ಸಹಯೋಗದಲ್ಲಿ ವಿಶ್ವ ಮಾತೃ ಭಾಷಾ ದಿನಾಚರಣೆಯನ್ನು ತೀರ್ಥಹಳ್ಳಿಯ ಸರ್ಕಾರಿ ಪ್ರೌಢಶಾಲೆ ರಾಮಕೃಷ್ಣಪುರದಲ್ಲಿ ದಿನಾಂಕ: 21-02-2024 ನೇ ಬುಧುವಾರ ಮಧ್ಯಾಹ್ನ 2:30ಕ್ಕೆ ನಡೆಸಲಾಗುವುದು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಟಿ ಕೆ ರಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರಾದ ಬಿ ಎಂ ನಾಗರಾಜ ಪರ್ವತಪುರ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.
ಹೊಸನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಪತಿ ಹಳಗುಂದ ಅವರು ಉಪನ್ಯಾಸ ನೀಡಲಿದ್ದಾರೆ. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಗಿರೀಶ್ ಬಿ ಎಂ ಹಾಗೂ ಸದಸ್ಯರಾದ ನಾಗಭೂಷಣ ಕಾಸರವಳ್ಳಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ ಆಗುಂಬೆ ಹೋಬಳಿ ಘಟಕದ ಅಧ್ಯಕ್ಷರಾದ ಏನ್ ಜಿ ವೆಂಕಟೇಶ್, ಸರ್ಕಾರಿ ಪ್ರೌಢಶಾಲೆ ರಾಮಕೃಷ್ಣಪುರ ಮುಖ್ಯ ಶಿಕ್ಷಕರಾದ ಎಚ್ ಪಿ ರವೀಂದ್ರ, ಹಿರಿಯ ಶಿಕ್ಷಕರಾದ ಎನ್ ಎಲ್ ರಾಮಕೃಷ್ಣ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಕೊಡಿಗೆಬೈಲ್ ಪೂರ್ಣೇಶ್ ಇದರ ಉಪಸ್ಥಿತಿಯಲ್ಲಿ ನಡೆಯಲಿದೆ.
ತಮಗೆಲ್ಲರಿಗೂ ಆದರದ ಸ್ವಾಗತ
– ಶ್ರೀ ಹಾಲಿಗೆ ನಾಗರಾಜ್, ಕೋಶಾಧ್ಯಕ್ಷರು ತಾಕಸಾಪ ತೀರ್ಥಹಳ್ಳಿ
– ಶ್ರೀ ಗಾಯಿತ್ರಿ ಶೇಷಗಿರಿ ಮತ್ತು ಸೌಳಿ ನಾಗರಾಜ್ ಗೌರವ ಕಾರ್ಯದರ್ಶಿಗಳು
– ಕಾರ್ಯಕಾರಿ ಸಮಿತಿ ಸದಸ್ಯರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ ಮತ್ತು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಸಹ ಶಿಕ್ಷಕರು, ಸಿಬ್ಬಂದಿ ವರ್ಗ ಮತ್ತು ಹಿರಿಯ ವಿದ್ಯಾರ್ಥಿಗಳು, ಸರ್ಕಾರಿ ಪ್ರೌಢಶಾಲೆ ರಾಮಕೃಷ್ಣಪುರ
