Categories
ತೀರ್ಥಹಳ್ಳಿ

ಟಾಪ್ ನ್ಯೂಸ್ ತೀರ್ಥಹಳ್ಳಿ

ಟಾಪ್ ನ್ಯೂಸ್ ತೀರ್ಥಹಳ್ಳಿ
– ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಶಿಕ್ಷಕಿ ಜ್ಯೋತಿ ಅದ್ಭುತ ಸಾಧನೆ!
– ತೀರ್ಥಹಳ್ಳಿ : ಹೈವೇ ರಸ್ತೆ ಅಗಲೀಕರಣ ಇಂದು ಸಭೆ
– ತೀರ್ಥಹಳ್ಳಿ : ಪಿಕಾರ್ಡ್ ಬ್ಯಾಂಕ್‌ ಅಧ್ಯಕ್ಷರಾಗಿ ‘ಸಹಕಾರಿ ರತ್ನ’ ವಿಜಯ್‌ದೇವ್
– ತೀರ್ಥಹಳ್ಳಿ: ಬಂಡೆ ಲೀಸ್ ಕಾರ್ಮಿಕರಿಂದ ಅರ್ಜಿ ಆಹ್ವಾನ!

NAMMUR EXPRESS NEWS
ತೀರ್ಥಹಳ್ಳಿ:
ತಾಲೂಕಿನ ಆಗುಂಬೆ ಸಮೀಪದ ಬಾಳೆಹಳ್ಳಿ -ತಲ್ಲೂರು ಅಂಗಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜ್ಯೋತಿ ಹೆಚ್.ಎಂ. ಜನವರಿ 10 ರಿಂದ 12 ರವರೆಗೆ ಮಂಗಳೂರಿನಲ್ಲಿ ಜರುಗಿದ -ಮೊದಲ ದಕ್ಷಿಣ ಏಷ್ಯಾ ರಾಷ್ಟ್ರಗಳ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ -2025ರಲ್ಲಿ ಭಾರತ ವನ್ನು ಪ್ರತಿನಿಧಿಸಿ ಅದ್ಭುತ ಸಾಧನೆ ಮಾಡಿದ್ದಾರೆ. ಇವರು 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, 800 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, 4×400 ಮೀಟರ್ ರಿಲೇನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಇವರ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್, ತಾಲೂಕಿನ ಶಿಕ್ಷಕ ವೃಂದ ಾೂ ಕ್ರೀಡಾ ಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ.

– ತೀರ್ಥಹಳ್ಳಿ : ಹೈವೇ ರಸ್ತೆ ಅಗಲೀಕರಣ ಇಂದು ಸಭೆ

ತೀರ್ಥಹಳ್ಳಿ: ಪಟ್ಟಣದ ಕೊಪ್ಪಸರ್ಕಲ್‌ನಿಂದ ಮಂಡಗದ್ದೆ ನೆಲ್ಲಿಸರ ಕ್ಯಾಂಪ್ ವರೆಗಿನ ರಸ್ತೆ ಅಭಿವೃದ್ಧಿ ಅಗಲೀಕರಣ, ಚತುಷ್ಪಥ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಭೂಮಿ ಕಳೆದುಕೊಳ್ಳುತ್ತಿರುವ ತೀರ್ಥಹಳ್ಳಿ ಪಟ್ಟಣದ ಕೊಪ್ಪ ಸರ್ಕಲ್‌ನಿಂದ ಕುಶಾವತಿವರೆಗಿನ ಸ್ವತ್ತಿನ ಮಾಲೀಕರ ಸಭೆಯನ್ನು ಜನವರಿ 17ರ ಇಂದು ಸಂಜೆ 6 ಗಂಟೆಗೆ ತೀರ್ಥಹಳ್ಳಿ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದೆ. ಶಾಸಕ ಆರಗ ಜ್ಞಾನೇಂದ್ರ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ಅಹವಾಲು ಸ್ವೀಕರಿಸಿ ರಸ್ತೆ ಅಗಲೀಕರಣದ ಕುರಿತು ಮಾಹಿತಿ ಒದಗಿಸಲಿದ್ದಾರೆ. ಈಗಾಗಲೇ ಬೇಗುವಳ್ಳಿ ಹಾಗೂ ಬೆಜ್ಜವಳ್ಳಿಯಲ್ಲಿ ಆ ಭಾಗದ ಭೂಮಿ ಕಳೆದುಕೊಳ್ಳುವ ಸ್ವತ್ತಿನ ಮಾಲೀಕರ ಸಭೆ ನಡೆದಿದ್ದು, ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯ ಸ್ವತ್ತಿನ ಮಾಲೀಕರ ಸಭೆ ಇಂದು ಕರೆಯಲಾಗಿದೆ.

ಪಿಕಾರ್ಡ್ ಬ್ಯಾಂಕ್‌ ಅಧ್ಯಕ್ಷರಾಗಿ ‘ಸಹಕಾರಿ ರತ್ನ’ ಬಸವಾನಿ ವಿಜಯ್‌ದೇವ್

ತೀರ್ಥಹಳ್ಳಿ: ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ಆಡಳಿತ ಮಂಡಳಿ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಸಹಕಾರಿ ರತ್ನ ಹೆಚ್.ಎನ್. ವಿಜಯದೇವ್ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಈರೇಗೋಡು ಶ್ರೀಧರ ಮೂರ್ತಿ ಆಯ್ಕೆಯಾಗಿದ್ದಾರೆ. ಜನವರಿ 16ರಂದು ನಡೆದ ನಿರ್ದೇಶಕರ ಮಂಡಳಿ ಸಭೆಯಲ್ಲಿ ನೂತನ ಅಧ್ಯಕ್ಷರು -ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

– ತೀರ್ಥಹಳ್ಳಿ: ಬಂಡೆ ಲೀಸ್ ಕಾರ್ಮಿಕರಿಂದ ಅರ್ಜಿ ಆಹ್ವಾನ

ತೀರ್ಥಹಳ್ಳಿ: ಕುರುವಳ್ಳಿಯ ಸರ್ವೆ ನಂ 75ರಲ್ಲಿರುವ 6ಎಕರೆ ಕಲ್ಲುಕ್ವಾರೆಯನ್ನು ಮುಂದಿನ 30 ವರ್ಷಗಳ ಅವಧಿಗೆ ಲೀಸ್‌ಗೆ ನೀಡಲಾಗುತ್ತಿದೆ. ಲೀಸ್ ಪಡೆಯಲು ಬಂಡೆ ಕಾರ್ಮಿಕರು ಅರ್ಹರಾಗಿರುತ್ತಾರೆ. ಅರ್ಜಿ ಫಾರಂಗಳು ಶಿವೊ್ಗದ ಗಣಿ ಭೂ ವಿಜ್ಞಾನ ಇಲಾಖೆ ಕಛೇರಿಯಲ್ಲಿ ವಿತರಿಸಲಾಗುತ್ತಿದೆ. ಅರ್ಜಿ ಶುಲ್ಕ 1 ಸಾವಿರ ರೂಪಾಯಿ ಆಗಿರುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.