ತೀರ್ಥಹಳ್ಳಿ ಪಟ್ಟಣದಲ್ಲಿ ಮೆಸ್ಕಾಂ ಸಿಬ್ಬಂದಿ ಸ್ವಚ್ಛತೆ
– ಮಂಜುನಾಥ ಗೌಡರಿಗೆ ಬೆಳ್ಳಿ ಪ್ರಕಾಶ್ ಗೌರವ!
– ಅನಂತಮೂರ್ತಿ ಶಾಲೆಯಲ್ಲಿ ಗಾಂಧಿಗೆ ನಮನ
– ವಿದ್ಯುತ್ ಲೈನ್ಸ್ ಸ್ವಚ್ಛತೆ ಮಾಡುತ್ತಿರುವ ಮೆಸ್ಕಾಂ ಸಿಬ್ಬಂದಿ
– ತೀರ್ಥಹಳ್ಳಿಯಲ್ಲಿ ವಿದ್ಯುತ್ ಸೇವೆಗೆ 24/7 ಸ್ಪಂದನೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಹಾಗೂ ತಾಲೂಕಿನೆಲ್ಲೆಡೆ ವಿದ್ಯುತ್ ಇಲಾಖೆಯ ಲೈನ್ ಮೆನ್ ಹಾಗೂ ಸಿಬ್ಬಂದಿಗಳು 24 ಗಂಟೆ ಸೇವೆ ನೀಡುತ್ತಿದ್ದು ಗ್ರಾಹಕರ ಶ್ಲಾಘನೆಗೆ ಒಳಗಾಗಿದ್ದಾರೆ. ಇದೀಗ ಮಳೆ ಕೊಂಚ ಕಡಿಮೆಯಾಗುತ್ತಿದ್ದಂತೆ ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿ ಲೈನ್ಸ್ ಸ್ವಚ್ಛತಾ ಕಾರ್ಯ ಶುರು ಮಾಡಲಾಗಿದೆ. ತೀರ್ಥಹಳ್ಳಿ ಪಟ್ಟಣದ ಸುತ್ತಮುತ್ತ ಲೈನ್ಸ್ ಸ್ವಚ್ಛತೆಯನ್ನು ವಿದ್ಯುತ್ ಲೈನ್ ಅಡಿ ಗಿಡಗಳನ್ನು ಕಡಿಯಲಾಗುತ್ತಿದ್ದು ಕೆಲವೆಡೆ ಗ್ರಾಮಸ್ಥರು ಕೂಡ ಸಾಥ್ ನೀಡಿದ್ದಾರೆ. ವಿದ್ಯುತ್ ಇಲಾಖೆಯ ಲೈನ್ ಮೆನ್ ಗಳು, ಸಿಬ್ಬಂದಿಗಳು ಈ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದರು.
ಡಾ.ಅರ್. ಎಂ. ಮಂಜುನಾಥ ಗೌಡ ಅವರಿಗೆ ಬೆಳ್ಳಿ ಪ್ರಕಾಶ್ ಅಭಿನಂದನೆ
ರಾಜ್ಯದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಬೆಳ್ಳಿ ಪ್ರಕಾಶ್ ಹಾಗೂ ಎಂ. ಡಿ.ದೇವರಾಜ್ ಅವರು ನೂತನವಾಗಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಅರ್. ಎಂ. ಮಂಜುನಾಥ ಗೌಡ ಅವರಿಗೆ ಅಭಿನಂದನೆ ಸಲ್ಲಿಸಿದರು ಈ ಸಂಧರ್ಭದಲ್ಲಿ ಜಗದೀಶ್ ಕರಕುಚ್ಚಿ ಲೋಕೇಶ್ ಜೊತೆಯಲ್ಲಿ ಇದ್ದರು.
ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗಾಂಧಿಗೆ ನಮನ
ತೀರ್ಥಹಳ್ಳಿ ಪಟ್ಟಣದ ಡಾ.ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಶಾಲಾ ವತಿಯಿಂದ ಆಚರಿಸಲಾಯಿತು.
ಮಹಾಪುರುಷರಿಬ್ಬರ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಪುಷ್ಪನಮನ ಸಲ್ಲಿಸಿ ಮಾತನಾಡಿದ ಶಾಲಾ ಉಪ ಪ್ರಾಂಶುಪಾಲರಾದ ದೇವೆಂದ್ರ ನಾಯಕ್ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರ್ರಿಯವರ ತತ್ವ,ಸಿದ್ಧಾಂತ, ಅಹಿಂಸಾ ಮಾರ್ಗದ ಬಗ್ಗೆ ಮಾತನಾಡಿದರು.
ಶಾಲಾ ಮುಖ್ಯ ಶಿಕ್ಷಕಿ ಸಾಯಿರಾ ಭಾನು ಮಹಾತ್ಮ ಗಾಂಧಿ ಮತ್ತು ಲಾ.ಬ.ಶಾಸ್ತ್ರಿಯವರ ಜೀವನ ಶೈಲಿ ಮತ್ತು ಹೋರಾಟದ ಬಗ್ಗೆ ವಿವರ ನೀಡಿದರು. ಅಧ್ಯಕ್ಷತೆ ವಹಿಸಿದ ಶಾಲಾ ಎಸ್.ಡಿ.ಎಮ್.ಸಿ.ಅಧ್ಯಕ್ಷ ರಾಂಚಂದ್ರಕೊಪ್ಪಲು ಮಾತನಾಡಿ, ಗಾಂಧಿ ಮತ್ತು ಶಾಸ್ತ್ರೀಯವರ ಸಾಧನೆಯ ಬದುಕಿನ ಬಗ್ಗೆ ಇರುವ ಪುಸ್ತಕಗಳನ್ನು ಮಕ್ಕಳು ಓದಬೇಕು. ನಮ್ಮೆಲ್ಲರ ಪಾಲಿಗೆ ವಿಶ್ವಗುರು ಆಗಿರುವ ಮಹಾತ್ಮಗಾಂಧಿ ಯವರ ಆದರ್ಶ ಮತ್ತು ಚಿಂತನೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು.
ಶಾಲಾ ಮಕ್ಕಳು ಭಗವದ್ಗೀತೆ,ಕುರಾನ್,ಬೈಬಲ್ ನಲ್ಲಿನ ಶಾಂತಿ ಮಂತ್ರವನ್ನು ಪಠಿಸಿದರು. ಶಾಲಾ ಶಿಕ್ಷಕರು,ಶಿಕ್ಷಕಿಯರು ಉಪಸ್ಥಿತರಿದ್ದರು.