Categories
ತೀರ್ಥಹಳ್ಳಿ

ಟಾಪ್ ನ್ಯೂಸ್ ತೀರ್ಥಹಳ್ಳಿ

ಟಾಪ್ ನ್ಯೂಸ್ ತೀರ್ಥಹಳ್ಳಿ

ಜಿಪಂ, ತಾಪಂ ಚುನಾವಣೆಗೆ ಕಾಂಗ್ರೆಸ್ ಸಜ್ಜು! 
– ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನಾ ಕಾರ್ಯಕರ್ತರ ಸಭೆ
– ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಲು ತೀರ್ಮಾನ

ತೀರ್ಥಹಳ್ಳಿ: ಮಠದ ವಿರುದ್ದ ರೈತ ಸಂಘದ ಹೋರಾಟ
– ರೈತರ ಕೃಷಿ ಭೂಮಿಯನ್ನು ಕಬಳಿಸಲು ಸಂಚು ಆರೋಪ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷ ಇದೀಗ ಮತ್ತೆ ಪಕ್ಷ ಸಂಘಟನೆ ಕಡೆ ಮುಖ ಮಾಡಿದೆ. ಜಿಪಂ, ತಾಪಂ ಚುನಾವಣೆಗೆ ಈಗಲೇ ಸಿದ್ಧತೆ ನಡೆಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದೆ.
ಒಕ್ಕಲಿಗರ ಭವನದ( ಕೆ,ಟಿ ಕೆ,) ಸಭಾಂಗಣದಲ್ಲಿ ಮಾರ್ಚ್ 23, ಭಾನುವಾರದಂದು ಕಾಂಗ್ರೆಸ್ ಪಕ್ಷದ ಸಂಘಟನೆಯ ಕಾರ್ಯಕರ್ತರ ಸಭೆ ನಡೆದಿದ್ದು, ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಮತ್ತು ಪಕ್ಷದ ಸಂಘಟಕರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಸಂಘಟನೆ ಬಗ್ಗೆ ಚರ್ಚೆ ಮಾಡಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಎಲ್ಲಾ ನಾಯಕರು, ಮುಖಂಡರು ಸಭೆ ನಡೆಸಿದ್ದಾರೆ.
ಸಲಹೆ ಸೂಚನೆ ನೀಡಿದ ಪಕ್ಷದ ಮುಖಂಡರು ಮುಂದಿನ ದಿನದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಲು ತೀರ್ಮಾನಿಸಲಾಯಿತು.
ಪಕ್ಷದ ಪ್ರಮುಖ ಮುಖಂಡರಾದ ಪ್ರಸನ್ನ ಕುಮಾರ್, ಬಲ್ಕಿಷ್ ಬಾನು,
ಕೆಸ್ತೂರು ಮಂಜುನಾಥ್, ಮುಡಬ ರಾಘವೇಂದ್ರ,ಕಡ್ತೂರು ದಿನೇಶ್, ಸುಂದರೇಶ್, ನಾರಾಯಣ್ ರಾವ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ತೀರ್ಥಹಳ್ಳಿಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಸಚಿಂದ್ರ ಹೆಗಡೆ, ಹುಂಚದಕಟ್ಟೆ ಆದರ್ಶ್, ಒಕ್ಕಲಿಗರ ಸಂಘದ ಅಧ್ಯಕ್ಷ ಬಾಳೆಹಳ್ಳಿ ಪ್ರಭಾಕರ್, ಪೂರ್ಣೇಶ್ ಕೆಳಕೆರೆ, ಶ್ರೇಯಸ್ ರಾವ್, ಅಮರನಾಥ್ ಶೆಟ್ಟಿ, ಮತ್ತು ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತಿರಿದ್ದರು.

ತೀರ್ಥಹಳ್ಳಿ: ಮಠದ ವಿರುದ್ದ ರೈತ ಸಂಘದ ಹೋರಾಟ
– ರೈತರ ಕೃಷಿ ಭೂಮಿಯನ್ನು ಕಬಳಿಸಲು ಸಂಚು ಆರೋಪ

ತೀರ್ಥಹಳ್ಳಿ: ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ಕೆಲವು ಮಠಗಳು, ವಕ್ಫ್ ಬೋರ್ಡ್ ಇತ್ಯಾದಿ ಧಾರ್ಮಿಕ ಸಂಸ್ಥೆಗಳು ಜನಸಾಮಾನ್ಯರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿವೆ. ತಲ ತಲಾಂತರದಿಂದ ರೂಢಿಸಿಕೊಂಡು ಬಂದ ಸಾಮಾನ್ಯ ಜನರ ವಾಸದ ಜಾಗಗಳನ್ನು, ರೈತರ ಕೃಷಿ ಭೂಮಿಯನ್ನು ಕಬಳಿಸಲು ಸಂಚು ನಡೆಸಿವೆ. ಅಸಂಬದ್ಧ ಮತ್ತು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಜನ ಸಾಮಾನ್ಯರನ್ನು ನ್ಯಾಯಾಲಯಗಳಿಗೆ, ಸರ್ಕಾರಿ ಕಚೇರಿಗಳಿಗೆ ಅಲೆಯುವಂತೆ ಮಾಡುತ್ತಿವೆ. ಇದಕ್ಕೀಗ ಇಂದು ಒಂದು ಹೊಸ ಸೇರ್ಪಡೆ ನೋಡಿದೆವು. ಈ ದಿನ ದಿನಾಂಕ 24-03-2025 ರಂದು ತೀರ್ಥಹಳ್ಳಿ ತಾಲ್ಲೂಕಿನ ದಿಂಡ ಮತ್ತು ಕೊಳಿಗೆಬೈಲು ಗ್ರಾಮಗಳ ಬಹುತೇಕ ದಲಿತರ ಕುಟುಂಬಗಳ ಸಾಗುವಳಿ ಭೂಮಿ, ಮನೆ, ಕಣ, ಕೊಟ್ಟಿಗೆ, ಹಿತ್ತಲುಗಳನ್ನು ಮೋಜಣಿಗೆ ಒಳಪಡಿಸಲಾಯಿತು. ಈ ಮೂಲಕ ಅಲ್ಲಿಯ ಸುಮಾರು ಮೂವತ್ತು ಕುಟುಂಬಗಳು ಭಯಭೀತರಾಗಿದ್ದಾರೆ. ಈ ಭಾಗದ ಮಠವೊಂದು ಈ ಜನರ ಬದುಕು ಕಿತ್ತುಕೊಳ್ಳಲು ಸಂಚು ರೂಪಿಸಿದೆ. ಕರ್ನಾಟಕ ರಾಜ್ಯ ಸರ್ಕಾರವಂತೂ ಈ ಮಠ, ಮಸೀದಿಗಳು ಓಟು ತರುವ ಮೆಷಿನ್ಗಳೆಂದು ಇವುಗಳ ಮುಂದೆ ದೊಗ್ಗು ಸಲಾಮು ಹೊಡೆದು ಮಂಡಿಯೂರಿದೆ. ಇತ್ತೀಚೆಗೆ ತೀರ್ಥಹಳ್ಳಿ ತಾಲ್ಲೂಕಿನ ಮಠವೊಂದರ ವಿರುದ್ಧ ದಾಖಲೆ ಸಮೇತ ಸರ್ಕಾರಕ್ಕೆ ದೂರು ಸಲ್ಲಿಸಿದ್ದರೂ ಸರ್ಕಾರರದ ಅನೇಕ ಅಂಗಗಳ ಹತ್ತಿರದವರೆಲ್ಲ ಆ ಮಠದ ಸ್ವಾಮಿಯ ಕಾಲಿಗೆ ಡೈವ್ ಹೊಡೆದೂ ಹೊಡೆದು ಗಿನ್ನಿಸ್ ದಾಖಲೆಗೆ ಸೇರಲು ತೀವ್ರ ಸ್ಪರ್ಧೆ ನೀಡುತ್ತಿದ್ದಾರೆ. ಅಂಧಶ್ರದ್ಧೆಯ ವಿರೋಧಿಯಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರೈತ ನಾಯಕ ಪ್ರೊ ನಂಜುಂಡಸ್ವಾಮಿಯವರು ನನ್ನ ಗುರುಗಳು ಎಂದು ಹೇಳಿಕೊಳ್ಳುತ್ತಾರೆ. ಆದರೆ ಮಠ, ಮಸೀದಿ, ಇಗರ್ಜಿಗಳಿಂದ ಜನಸಾಮಾನ್ಯರಿಗೆ – ರೈತರಿಗೆ ತೊಂದರೆಯಾದರೆ ಮಂಕು ಬಡಿದವರಂತೆ ಕುಳಿತು ಬಿಡುತ್ತಾರೆ. ಮಡೆ ಸ್ನಾನ, ಕುಂಬುಸ್ನಾನ, ಕರಾಳ ಆರತಿ, ಇಫ್ತಿಹಾರ ಕೂಟಗಳಂತಹ ಅಲೌಕಿಗಳನ್ನು ಬದಿಗಿಟ್ಟು ಆಡಳಿತ ನಡೆಸಬೇಕು. ಸರ್ಕಾರಗಳನ್ನು ನಡೆಸುವವರಿಗೆ ಕಿಂಚಿತ್ತಾದರೂ ಮಾನ ಮರ್ಯಾದೆ ಇದೆ ಎಂದು ಸಾಬೀತುಪಡಿಸಲಾದರೂ ಈ ಮಠಗಳ, ಮಸೀದಿಗಳ, ಮಂದಿರಗಳ, ಚರ್ಚುಗಳ ಆಸ್ತಿಗಳ ಹೆಸರಿನಲ್ಲಿ ರೈತರ ಹಕ್ಕುಗಳನ್ನು ಕಿತ್ತುಕೊಳ್ಳವ ಕರಾಳ ದಂಧೆಯನ್ನು ಬಯಲಿಗೆಳೆಯಲು ದಕ್ಷರನ್ನು ಒಳಗೊಂಡ ಒಂದು ‘ವಿಶೇಷ ತನಿಖಾ ತಂಡ’ ರಚಿಸಿಬೇಕು. ಜನಸಾಮಾನ್ಯರಿಂದ ಮಾಹಿತಿ ಪಡೆದು ತನಿಖೆಯಾದರೆ ಈಗಾಗಲೇ ಜೈಲಲ್ಲಿರಬೇಕಾದವರು ತಡವಾಗಿಯಾದರೂ ಜೈಲು ಸೇರುತ್ತಾರೆ. ಈ ಮೂಲಕ ಸಂಬಂಧಪಟ್ಟವರು ಸ್ವಲ್ಪವಾದರೂ ನಾಚಿಕೆ ಮಾನ ಮರ್ಯಾದೆ ಇದ್ದವರೆಂದು ತೋರಿಸಿಕೊಳ್ಳುವಂತೆ ಒತ್ತಾಯಿಸುತ್ತೇವೆ ಎಂದು ಅಧ್ಯಕ್ಷರಾದ ಕೋಡ್ಲು ವೆಂಕಟೇಶ್, ಪ್ರಧಾನ ಕಾರ್ಯದರ್ಶಿ
ಹೊರಬೈಲು ರಾಮಕೃಷ್ಣ ಹೇಳಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.