ತೀರ್ಥಹಳ್ಳಿಯ ಪಟ್ಟಣದಲ್ಲಿ ಇಂದು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ
– ಪಟ್ಟಣ ಪಂಚಾಯತ್ ಹೊಸ ಕಟ್ಟಡ, ರಸ್ತೆ ಉದ್ಘಾಟನೆ
– ಮನೆ ಮನೆಗೂ ಡಸ್ಟ್ ಬಿನ್ ಭಾಗ್ಯ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಮಾ.4ರಂದು ಚಾಲನೆ ಸಿಗಲಿದೆ. ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವತಿಯಿಂದ ಕಾರ್ಪರೇಷನ್ ಬ್ಯಾಂಕ್ ಪಕ್ಕದ ವಾಣಿಜ್ಯ ಸಂಕೀರ್ಣದ ಮೊದಲನೇ ಮಹಡಿ ನೂತನ ಕಟ್ಟಡ ಉದ್ಘಾಟನೆ ನಡೆಯಲಿದೆ. ಸಮಾರಂಭಕ್ಕೆ ಅಧ್ಯಕ್ಷರಾದ ಗೀತಾ ರಮೇಶ್, ಉಪ ಅಧ್ಯಕ್ಷರಾದ ರೈಹಮಾತ್ ಉಲ್ಲಾ ಅಸಾದಿ ಮತ್ತು ಮುಖ್ಯ ಅಧಿಕಾರಿ ಕುರಿಯಕೋಸ್ ಸರ್ವರನ್ನು ಸ್ವಾಗತಿಸಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಅಜಾದ ರಸ್ತೆಯ ಕಾರ್ಪೊರೇಷನ್ ಬ್ಯಾಂಕ್ ಪಕ್ಕದಲ್ಲಿ ಹೊಸದಾಗಿ ನಿರ್ಮಿಸಿದ ವಾಣಿಜ್ಯ ಕಾಂಪ್ಲೆಕ್ಸ್ ಮೊದಲನೇ ಮಹಡಿ ನೂತನ ಕಟ್ಟಡ, ಗಾಂಧಿನಗರದಲ್ಲಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಗಳು ಮತ್ತು ಕಸ ವಿಲೇವಾರಿ ಯೋಜನೆ ಅಡಿಯಲ್ಲಿ ಮಲ್ಟಿ ಮಿಲಿನಿಯಂ ಪ್ಲಸ್ ಸಿಟಿ ಯೋಜನೆ ಅಡಿ ಮನೆ, ಮನೆಗೆ ಡಸ್ಟ್ ಬಿನ್ ವಿತರಣಾ ಸಮಾರಂಭ ನಡೆಯಲಿದ್ದು
ಈ ಕಾರ್ಯಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ, ಪೌರಾಡಳಿತ ಸಚಿವರಾದ ರಹೀಮ್ ಖಾನ್, ಶಾಸಕರಾದ ಆರಗ ಜ್ಞಾನೇಂದ್ರ ,ಲೋಕಸಭಾ ಸದಸ್ಯರಾದ ಬಿ. ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎಸ್. ಎಲ್ .ಬೋಜೇಗೌಡ , ಎಸ್. ರುದ್ರೇಗೌಡ, ಭಾರತೀ ಶೆಟ್ಟಿ, ಬಿ.ಎಸ್. ಅರುಣ್, ಮಲ್ನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಆರ್. ಎಂ. ಮಂಜುನಾಥಗೌಡ ಮತ್ತು ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಸಿದ್ದಲಿಂಗ ರೆಡ್ಡಿ ಭಾಗವಹಿಸಲಿದ್ದಾರೆ. ಈ ಎಲ್ಲಾ ಶುಭ ಕಾರ್ಯಕ್ರಮಕ್ಕೆ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಗೀತಾ ರಮೇಶ್, ಉಪಾಧ್ಯಕ್ಷರಾದ ರಹಮಾತುಲಾ ಅಸಾದಿ ಮತ್ತು ಮುಖ್ಯ ಅಧಿಕಾರಿಗಳಾದ ಕುರಿಯ ಕೋಸ್ ಹಾಗೂ ಪಟ್ಟಣ ಪಂಚಾಯಿತಿಯ ಎಲ್ಲ ಸದಸ್ಯರು ಸಾರ್ವಜನಿಕರನ್ನು ಪಟ್ಟಣ ಪಂಚಾಯಿತಿ ತೆರಿಗೆದಾರರನ್ನು ಆಹ್ವಾನಿಸಿದ್ದಾರೆ.
