Categories
ಕೊಪ್ಪ ತೀರ್ಥಹಳ್ಳಿ

ತೀರ್ಥಹಳ್ಳಿ – ಕೊಪ್ಪ ಮಾರ್ಗದಲ್ಲಿ ಮರ ಮಾರಣಹೋಮ!

ತೀರ್ಥಹಳ್ಳಿ – ಕೊಪ್ಪ ಮಾರ್ಗದಲ್ಲಿ ಮರ ಮಾರಣಹೋಮ!
– ಮರ ಕಡಿತಲೆ ಓಕೆ, ಅಲ್ಲೇ ಬಿಟ್ಟಿದ್ದು ಯಾಕೆ..?
– ಸಂಬಂಧಪಟ್ಟ ಅಧಿಕಾರಿಗಳು ನಿದ್ದೆಯಲ್ಲಿ ಇದ್ದೀರಾ…?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ದೇವಂಗಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ವಿದ್ಯುತ್ ತಂತಿ ಅಳವಡಿಕೆ ಕಾಮಗಾರಿ ಯೋಜನೆಯಲ್ಲಿದ್ದು ರಸ್ತೆ ಪಕ್ಕದ ನೂರಾರು ಮರಗಳನ್ನ ಕಡೆದು ರಸ್ತೆ ಬದಿಗೆ ಹಾಕಿದ್ದಾರೆ. ಅಭಿವೃದ್ಧಿ ಕೆಲಸಕ್ಕೆ ಓಕೆ ಎಂದರೂ ಕಡಿದು ಅಲ್ಲೇ ಬಿಟ್ಟಿರುವುದು ಇದೀಗ ಊರಿನ ಅಂದ ಕೆಡಿಸಿದೆ. ಪ್ರಮೋಸೊಧ್ಯಮದಲ್ಲಿ ಒಂದು ಕೈ ಮುಂದಿರುವ ಈ ಊರು ಮರಗಳ ರಾಶಿಯಿಂದ ಸುಂದರ ಪ್ರಕೃತಿ ನಾಶವಾದಂತೆ ಕಾಣುತ್ತದೆ. ಅನೇಕ ಕಡೆ ರಸ್ತೆ ಪಕ್ಕದಲ್ಲಿ ರಾಶಿ ರಾಶಿ ಮರ ಒಣಗಿ ಬಿದ್ದಿವೆ. ತಳುವೆ ಇಂದ ಕೊಪ್ಪ ರಸ್ತೆಯ ದೇವಂಗಿವರೆಗೆ ಅಕ್ಕ-ಪಕ್ಕವೆಲ್ಲ ಮರಗಳ ತುಂಡು ರಾಶಿ ರಾಶಿ ಬಿದ್ದಿದೆ.

ಇದಕ್ಕೆ ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಗಮನಹರಿಸದೆ ಬೇಜವಾಬ್ದಾರಿತನ ತೋರಿದ್ದಾರೆ. ಅಲ್ಲಲ್ಲಿ ಬಿದ್ದ ಮರದ ತುಂಡುಗಳನ್ನು ದಿನನಿತ್ಯ ಉಪಯೋಗಕಾದರೂ ಕೊಡಲಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಈ ಹಿನ್ನಲೆ ಯಾವುದಕ್ಕೂ ಕಿವಿಕೊಡದ ಸಿಬ್ಬಂದಿಗಳು ತಮ್ಮಷ್ಟಕ್ಕೆ ತಾವು ಸುಮ್ಮನಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.