Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಡಿ.ಬಿ.ಸಿಗೆ ನುಡಿ ನಮನ

ತೀರ್ಥಹಳ್ಳಿಯಲ್ಲಿ ಡಿ.ಬಿ.ಸಿಗೆ ನುಡಿ ನಮನ
– ಗಣ್ಯರಿಂದ ಮಾಜಿ ಶಾಸಕನ ವ್ಯಕ್ತಿತ್ವ ಬಣ್ಣನೆ
– ಮಲೆನಾಡ ನಾಯಕನಿಗೆ ಗೌರವ ಅರ್ಪಣೆ

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯ ಗಾಯತ್ರಿ ಮಂದಿರದಲ್ಲಿ ಶುಕ್ರವಾರ ರಾಷ್ಟ್ರದ ಧೀಮಂತ ರಾಜಕಾರಣಿ ಡಿ ಬಿ ಚಂದ್ರೇಗೌಡ ಅವರಿಗೆ ಅಭಿಮಾನಿ ಬಳಗದ ವತಿಯಿಂದ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮವನ್ನು ನಡೆಸಲಾಯಿತು.
ದ್ವೇಷ ರಹಿತ ನಡವಳಿಕೆಗಳಿಂದ ಜನರ ಮನಸ್ಸನ್ನು ಗೆದ್ದಿರುವ, ತೀರ್ಥಹಳ್ಳಿ ಕ್ಷೇತ್ರದ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಆದರ್ಶ ಜನಪ್ರತಿನಿಧಿ ಚಂದ್ರೇಗೌಡರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಅರ್ಪಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನತಾ ಪರಿವಾರದ ಪ್ರಮುಖರಾದ ಕೆ ಪ್ರಕಾಶ್ ಶೆಟ್ಟಿ ವಹಿಸಿಲಿದ್ದು, ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಜನತಾ ಪರಿವಾರದ ಪ್ರಮುಖರಾದ ಕೆ ಪ್ರಕಾಶ್ ಶೆಟ್ಟಿ ಅಧ್ಯಕ್ಷರು ವಹಿಸಿದ್ದರು.

ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಅಪೇಕ್ಸ್ ಬ್ಯಾಂಕ ಅಧ್ಯಕ್ಷರಾದ ಡಾ. ಆರ್ ಎಂ ಮಂಜುನಾಥ್ ಗೌಡ, ಶಿಕ್ಷಣ ತಜ್ಞರಾದ ಎ ಜಿ ರಾಮಪ್ಪ, ಖ್ಯಾತ ವಾಗ್ಮಿ ಸುಧೀರ್ ಕುಮಾರ್ ಮುರೊಳ್ಳಿ, ಪುರಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್, ಕನ್ನಡ ಸಾಹಿತ್ಯ ಘಟಕದ ಅಧ್ಯಕ್ಷರು, ರೈತ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಬಂದಿರುವಂತಹ ವೆಂಕಟೇಶ್, ವಿಶ್ವನಾಥ್, ರಾಮಕೃಷ್ಣ, ಹಾಗೂ ಚಂದ್ರೇಗೌಡರ ಜೊತೆ ಒಡನಾಟ ಹೊಂದಿರುವಂತಹ ನಾರಾಯಣ್ ರಾವ್, ಮೂರ್ತಿ, ಭಾಸ್ಕರ್ ಜೋಯಿಸ್, ರಂಗಪ್ಪ ಹೆಗಡೆ, ಬಸವರಾಜ್, ಮಹಾಬಲೇಶ್, ಮನೋಹರ್ ರಾಯರು, ಕಡಿದಾಳ್ ದಯಾನಂದ್, ಡಿಎಸ್ ವಿಶ್ವನಾಥ್ ಶೆಟ್ಟಿ, ಕೆತ್ತೂರು ಮಂಜುನಾಥ್, ಮುಡುಬ ರಾಘವೇಂದ್ರ ಸೇರಿದಂತೆ ಅನೇಕ ಸಂಘ ಸಂಸ್ಥೆಯ ಸದಸ್ಯರು, ಕಾರ್ಯದರ್ಶಿಗಳು ಸೇರಿದಂತೆ ಡಿಬಿಸಿ ಅಭಿಮಾನಿ ಬಳಗದ ಎಲ್ಲರೂ ಇದ್ದರು

ಕಾನೂನು ಬಗ್ಗೆ ಅಪಾರ ಜ್ಞಾನ ಹೊಂದಿದ್ದರು

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ನಾರಾಯಣ್ ರಾವ್ ಮಾತನಾಡಿ, ನಮ್ಮ ಹಿರಿಯರು ಹಾಗೂ ಮಾರ್ಗದರ್ಶಕರಾದ ಚಂದ್ರೇಗೌಡರ ನುಡಿ ನಮನ ಕಾರ್ಯಕ್ರಮ ಇಂದು ಸೂಕ್ತವಾದ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. ಪ್ರಕಾಶ್ ಶೆಟ್ಟರು ಅನಿವಾರ್ಯ ಕಾರಣದಿಂದ ಬೇರೆ ಊರಿಗೆ ಹೋಗಿದ್ದರು, ಆದರೆ ನಾವು ಈ ಕಾರ್ಯಕ್ರಮಕ್ಕೆ ಪ್ರಕಾಶ್ ಶೆಟ್ಟರ ಅಧ್ಯಕ್ಷತೆಯಲ್ಲಿಯೇ ಮಾಡಬೇಕು ಎಂದು ನಿರ್ಧರಿಸಿದ್ದೆವು.ಚಂದ್ರೇಗೌಡರ ವ್ಯಕ್ತಿತ್ವವನ್ನು ವರ್ಣಿಸುವುದು ಬಹಳ ಕಷ್ಟ. ಒಂದು ಬಾರಿ ಫೋಟೋದಲ್ಲಿ ಅವರ ಮುಖವನ್ನು ನೋಡಿದರೆ ಸಾಕು ಎಲ್ಲರಿಗೂ ತಿಳಿಯುತ್ತದೆ. ಎಷ್ಟೊಂದು ತೇಜಸ್ಸು ಹಾಗೂ ಪ್ರಭಾವ ಇದೆ ಆ ಮುಖದಲ್ಲಿ ಎಂದು ತಿಳಿಯುತ್ತದೆ. ಕಾನೂನಿನ ಬಗ್ಗೆ ಹಾಗೂ ಜನಸಾಮಾನ್ಯರ ನೋವಿನ ಬಗ್ಗೆ, ವ್ಯವಸ್ಥೆಯ ಬಗ್ಗೆ ಅಪಾರವಾದ ಅನುಭವವನ್ನು ಹೊಂದಿದ್ದರು. ವಿಧಾನ ಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದಂತವರು. ಅವರು ಹೇಳುವ ಒಂದು ಶಬ್ದವು ಕೂಡ ಅಷ್ಟೊಂದು ತೂಕವಾಗಿರುತ್ತಿತ್ತು ಎಂದು ಹೇಳಿದರು.

ರಾಜಕೀಯ ವಿರೋಧಿಗಳು ಅವರ ಮಾತು ಕೇಳುತ್ತಿದ್ದರು!

ಖ್ಯಾತ ವಾಗ್ಮಿ ಸುಧೀರ್ ಕುಮಾರ್ ಮುರೊಳ್ಳಿಯವರು ಮಾತನಾಡಿ, 1999ರಲ್ಲಿ ಅವರು ಶೃಂಗೇರಿ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಬಂದರು. ಆಗ ನನಗೆ ಚುನಾವಣೆ ಉಸ್ತುವಾರಿ ಜವಾಬ್ದಾರಿ ನೀಡಿದರು. ನಾವು ಚಂದ್ರೇಗೌಡರಿಗೆ ಬಹಳ ಟೀಕೆ ಮಾಡಿದ್ದೇವೆ. ಚಂದ್ರೇಗೌಡರಿಗೆ ಎಂತ ಬೆಲೆ ಇತ್ತು ಎಂದರೆ ನಾವು ಅವರ ವಿರೋಧಿಗಳಾಗಿದ್ದರೂ ಕೂಡ ಅವರ ಮಾತನ್ನು ಕೇಳುತ್ತಿದ್ದೆವು. ಈ ಕ್ಷೇತ್ರಕ್ಕೆ ನಾನು ಅಭಿವೃದ್ಧಿ ಮಾಡಬೇಕೆಂದು ಬಂದಿದ್ದೇನೆ ಎಂದು ಹೇಳುತ್ತಿದ್ದರು. ರಾಜಕೀಯದಲ್ಲಿ ಉತ್ತರ ಕೊಡುವಂತಹ ಒಂದು ಚಾಣಾಕ್ಷತೆ ಇತ್ತು. ಅವರಿಗೆ ಯಾರನ್ನು ಕಂಡರೂ ದ್ವೇಷ ಇರಲಿಲ್ಲ ಎಂದರು.

ಡಿಬಿಸಿ ಶಿಸ್ತು, ಅವರ ಡ್ರೆಸ್, ಮಾತು ಮಾದರಿ

ಸಹಕಾರಿ ನಾಯಕ ಡಾ. ಆರ್ ಎಂ ಮಂಜುನಾಥ್ ಗೌಡ ರವರು ಮಾತನಾಡಿ ಚಂದ್ರೇಗೌಡರ ಮೊದಲ ಚುನಾವಣೆಯಲ್ಲಿ ನಾವು ಬಾರಿ ಚಿಕ್ಕ ಹುಡುಗರಾಗಿದ್ದವು, ಅವರ ಕಡೆ ಚುನಾವಣೆಯಲ್ಲಿ ನಾವು ಭಾಗವಹಿಸಿದ್ದೆವು. ಚಂದ್ರೇಗೌಡರ ಶಿಸ್ತು ಹಾಗೂ ಅವರ ಡ್ರೆಸ್ ಸೆನ್ಸ್ ಹಾಗೂ ಅವರು ಮಾತನಾಡುವ ಶೈಲಿ ಬಹಳ ಶಿಸ್ತು ಬದ್ಧವಾದದ್ದು. ಅವತ್ತಿನ ಚಂದ್ರೇಗೌಡರ ತೀರ್ಥಹಳ್ಳಿಗೂ ಇಂದಿನ ತೀರ್ಥಹಳ್ಳಿಗೂ ಬಹಳ ವ್ಯತ್ಯಾಸವಿದೆ. ಚಂದ್ರೇಗೌಡರದ್ದು ಬಹಳ ದೊಡ್ಡ ವ್ಯಕ್ತಿತ್ವ ಎಂದು ಹೇಳಿದರು.

ಡಿಬಿಸಿ ಜಾತಿ, ಧರ್ಮದ ರಾಜಕೀಯ ಮಾಡಿದವರಲ್ಲ

ಕಿಮ್ಮನೆ ರತ್ನಾಕರ್ ಅವರು ಮಾತನಾಡಿ, ಈಗಾಗಲೇ ಅನೇಕ ಗಣ್ಯರು ಚಂದ್ರೇಗೌಡರ ಬಗ್ಗೆ ಮಾತನಾಡಿದ್ದಾರೆ, ಅರಗ ಜ್ಞಾನೇಂದ್ರ ಅವರು ಹಿಂದೆ ನುಡಿ ನಮನ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು ಆ ದಿನ ನಾನು ಕಾರಣಾಂತರಗಳಿಂದ ಆಗಮಿಸಲು ಆಗಿರಲಿಲ್ಲ. ಚಂದ್ರೇಗೌಡರು ಯಾವತ್ತೂ ಕೂಡ ಜಾತಿ ಧರ್ಮದ ಮೇಲೆ ರಾಜಕೀಯವನ್ನು ಮಾಡಿಲ್ಲ. ಅದು ನನಗೆ ಬಹಳ ಖುಷಿ ಕೊಟ್ಟಿರುವಂತಹ ವಿಷಯ. ಯಾವತ್ತೂ ಕೂಡ ಯಾರ ಮೇಲೆ ದ್ವೇಷವನ್ನು ಸಾಧಿಸುವಂತಹ ಪ್ರಯತ್ನ ಮಾಡಿರಲಿಲ್ಲ. ಅವರು ಒಂದು ರೀತಿಯಲ್ಲಿ ಅದೃಷ್ಟವಂತರೂ ಹೌದು, ಒಂದು ರೀತಿಯಲ್ಲಿ ದುರದೃಷ್ಟವಂತರು ಹೌದು. ರಾಜಕೀಯ ವಿಷಯದಲ್ಲಿ ಅವರು 1995ರಲ್ಲಿ ಏನಾದರೂ ಇದ್ದಿದ್ದರೆ, ಅವರು ಮುಖ್ಯಮಂತ್ರಿ ಆಗುತ್ತಿದ್ದರು. ಆ ರೀತಿ ವಾತಾವರಣ ನಿರ್ಮಾಣವಾಗಿತ್ತು. ಚಂದ್ರೇಗೌಡರು ಅಧಿಕಾರಿಗಳಿಗೆ ಯಾರಿಗೂ ಕೂಡ ಬಯ್ಯುತ್ತಿರಲಿಲ್ಲ ಬಹಳ ಒಳ್ಳೆಯ ವ್ಯಕ್ತಿತ್ವ ಅವರದ್ದು ಎಂದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.