Categories
ತೀರ್ಥಹಳ್ಳಿ

ತುಳುನಾಡ ಸಿರಿ ಸೌಹಾರ್ದ ಸಹಕಾರಿ ಮಾದರಿ ಸಹಕಾರಿ ಹೆಜ್ಜೆ

ತುಳುನಾಡ ಸಿರಿ ಸೌಹಾರ್ದ ಸಹಕಾರಿ ಮಾದರಿ ಸಹಕಾರಿ ಹೆಜ್ಜೆ
– ಸಂಘದ 7ನೇ ವರ್ಷದ ಮಹಾಸಭೆ ಜತೆಗೆ ಸಮಾಜ ಮುಖಿ ಕೆಲಸ
– ಉಚಿತ ಆರೋಗ್ಯ ತಪಾಸಣಾ ಶಿಬಿರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ

NAMMUR EXPRESS NEWS
ತೀರ್ಥಹಳ್ಳಿ: ತುಳುನಾಡ ಸಿರಿ ಸೌಹಾರ್ದ ಸಹಕಾರಿ ಸಂಘದ ಏಳನೇ ವರ್ಷದ ಮಹಾಸಭೆಯು ಅನೇಕ ಸಾಮಾಜಿಕ ಕೆಲಸಗಳ ನಡೆಯುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಮಾನವೀಯತೆ ಹೆಜ್ಜೆ ಇಟ್ಟಿತು. ಸೆಪ್ಟೆಂಬರ್ 12ರ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು 15ಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಗುರುತಿಸಿಕೊಂಡವರಿಗೆ ಹಾಗೂ ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಹಾಗೂ ಶ್ರಮಿಕರನ್ನು ಗುರುತಿಸಿ ತುಳುನಾಡಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸಹಕಾರಿ ನಾಯಕ ಡಾ. ಮಂಜುನಾಥ ಗೌಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರಿ ದಿಗ್ಗಜ ವಿಜಯದೇವ ಸೇರಿ ಅನೇಕ ಗಣ್ಯರು ಹಾಜರಿದ್ದರು. ಕಿಮ್ಮನೆ ರತ್ನಕಾರ್ ಅವರು ಮಾತನಾಡಿ ಸಹಕಾರಿ ಸಂಘಗಳಿಂದ ಬಹಳಷ್ಟು ಜನ ಬಡವರಿಗೆ ಅನುಕೂಲವಾಗುತ್ತಿದೆ, ಸಹಕಾರಿ ಸಂಘ ಇಲ್ಲದಿದ್ದರೆ ಬಹುಶ ಬಹಳಷ್ಟು ಜನರಿಗೆ ಮನೆ ಕಟ್ಟಲು ಆಗುತ್ತಿರಲಿಲ್ಲ, ತಮ್ಮ ಸ್ವಂತದ್ದು ಏನಾದರೂ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಈ ಸಂಘವು 20 ಕೋಟಿಯಷ್ಟು ಸಾಲ ಜನರಿಗೆ ನೀಡಿದೆ, ಇದು ಅದ್ಭುತವಾದಂತಹ ಸಾಧನೆ ಎಂದು ಹೇಳಿದರು.

ತುಳುನಾಡ ಸಿರಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸುಂದರೇಶ್, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಅಸಾದಿ, ಪುರಪಂಚಾಯತ್ ಮಾಜಿ ಅಧ್ಯಕ್ಷರಾದ ಸುಂದರೇಶ್, ಸಹಕಾರಿ ಧುರೀಣ ನಾಗರಾಜ್ ಶೆಟ್ಟಿ,ಪುರಪಂಚಾಯತ್ ಸದಸ್ಯರಾದ ರತ್ನಾಕರ್ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಕಟ್ಟೆಹಕ್ಕಲು ಕಿರಣ್, ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಶೀಲ ಶೆಟ್ಟಿ, ತುಳುನಾಡ ಸಿರಿ ಸೌಹಾರ್ದದ ಉಪಾಧ್ಯಕ್ಷರಾದ ಗಣಪತಿ ಹಾಗೂ ಎಲ್ಲಾ ನಿರ್ದೇಶಕ ಮಿತ್ರರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ನೂರಾರು ಮಂದಿ ಉಚಿತ ಅರೋಗ್ಯ ಶಿಬಿರದ ಲಾಭ ಪಡೆದರು.

ವೇದಿಕೆಯಲ್ಲಿ ಸಾಧಕರಿಗೆ ಗೌರವ

ಹಿರಿಯ ಸಹಕಾರಿ ಎಚ್.ಎನ್. ವಿಜಯದೇವ್, ಸಾಹಿತಿ ಶಿವಾನಂದ ಕರ್ಕಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮುನ್ನೂರು ಮೋಹನ್ ಶೆಟ್ಟಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಲೇಖಕ ಟಿ.ವಿ.ಸತೀಶ್ ಶೆಟ್ಟಿ, ಪತ್ರಕರ್ತ, ತ್ರಿಯಂಬಕಪುರ ಗ್ರಾ.ಪಂ.ಅಧ್ಯಕ್ಷ , ತಾಲೂಕು ಗ್ರಾ.ಪಂ.ಅಧ್ಯಕ್ಷರ ಒಕ್ಕೂಟದ ಅಧ್ಯಕ್ಷ ವಿಧಾತ ಅನಿಲ್, ಹಿರಿಯ ರಾಜಕಾರಣಿ ಟಿ.ಎಸ್.ರೇಮಯ್ಯ ಗೌಡ, ಹೋಟೆಲ್ ಉದ್ಯಮಿ ಸಮಾಜ ಸೇವಕ ಕೆ.ಬಿ.ಪದ್ಮನಾಭ, ಶ್ರಮ ಜೀವಿ ಸರ್ಫರಾಜ್,  ರಿಕ್ಷಾ ಮಾಲೀಕ, ಚಾಲಕರಾದ ಪ್ರಕಾಶ್ ಆಚಾರ್, ಸಮಾಜ ಸೇವಕ ಗೋಪಾಲ ಪೂಜಾರಿ, ಕಟ್ಟಡ ನಿರ್ಮಾಣ ಮೇಸ್ತ್ರಿ ಸುಂದರ ಮೇಸ್ತ್ರಿ, ರಾಷ್ಟ್ರೀಯ ಖೋ ಖೋ ತರಬೇತುದಾರ ಬೆಲೋರಿನ್ ಡಯಾಸ್, ಸಿಹಿ ತಿನಿಸು ಉದ್ಯಮಿ ಬಾಳೇಬೈಲು ಪದ್ಮನಾಭ ನಾಯಕ್, ಸಾರಿಗೆ ಕ್ಷೇತ್ರದ ಇನಾಸ್ ಡಿಸೋಜ, ಕೈಗಾರಿಕೋದ್ಯಮಿ ಮತ್ತು ಕೈಗಾರಿಕಾ ತರಬೇತು ಸಂಸ್ಥೆಯ ಮಹಮ್ಮದ್ ಶಫಿ , ಪೌರ ಕಾರ್ಮಿಕರಾದ ಲಕ್ಷ್ಮಮ್ಮ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಸಾಹಿತಿ ಶಿವಾನಂದ ಕರ್ಕಿ ಮಾತನಾಡಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.