Categories
ತೀರ್ಥಹಳ್ಳಿ

ತುಂಗಾ ವಿರ್ದ್ಯಾವರ್ಧಕ ಸಂಘ(ರಿ.)

ತುಂಗಾ ವಿರ್ದ್ಯಾವರ್ಧಕ ಸಂಘ(ರಿ.)
– ತುಂಗಾ ಕಾಲೇಜಲ್ಲಿ ವಿದ್ಯಾರ್ಥಿ ವೇದಿಕೆ, ಪಠ್ಯ ಪೂರಕ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭ
– ಪಡೆದ ಶಿಕ್ಷಣ ತಮಗೆ, ಕುಂಟುಂಬಕ್ಕೆ ಹಾಗೂ ಸಮಾಜಕ್ಕೆ ನೆರವಾಗುವಂತಿರಬೇಕು : ಕಿಮ್ಮನೆ ರತ್ನಾಕರ್

NAMMUR EXPRESS NEWS
ದಿನಾಂಕ: 9.8.2025 ರಂದು ಪಿಯುಸಿ ವಿಭಾಗದ ವಿದ್ಯಾರ್ಥಿ ವೇದಿಕೆ. ಪಠ್ಯ ಪೂರಕ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಯಿತು. ಇದರ ಅಧ್ಯಕ್ಷತೆಯನ್ನು ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಎಂ. ಎನ್. ರಮೇಶ್, ಅಧ್ಯಕ್ಷರು, ತುಂಗಾ ವಿದ್ಯಾವರ್ಧಕ ಸಂಘ ಇವರು ವಹಿಸಿದ್ದರು. ಕಾರ್ಯಕ್ರಮವು ಕು. ಮನವಿ ಮತ್ತು ಸಂಗಡಿಗರ ಆರಂಭ ಗೀತೆಯೊಂದಿಗೆ ಪ್ರಾರಂಭವಾಯಿತು. ಸ್ವಾಗತ ಹಾಗೂ ಪ್ರಸ್ತಾವಿಕ ನುಡಿಯನ್ನು ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ಶ್ರೀ ಪ್ರಸನ್ನ ಕೆ. ಎಲ್. ಕೋರಿದರು. ಅತಿಥಿಗಳಿಂದ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿತು.

ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಶ್ರೀ ಕಿಮ್ಮನೆ ರತ್ನಾಕರ್, ಮಾಜಿ ಶಿಕ್ಷಣ ಸಚಿವರು ಆಗಮಿಸಿದ್ದರು. ಇವರು ಮಾತನಾಡುತ್ತಾ ವಿದ್ಯಾರ್ಥಿ ಜೀವನದಲ್ಲಿ ಯಾವ ಪ್ರಲೋಭನೆಗೂ ಒಳಗಾಗದೇ, ತಪಸ್ಸಿನಂತೆ ವಿದ್ಯಾರ್ಜನೆಯನ್ನು ಪಡೆಯಬೇಕು. ತಾವು ಪಡೆದ ಶಿಕ್ಷಣ ತಮಗೇ, ಕುಟುಂಬಕ್ಕೆ ಮತ್ತು ಸಮಾಜಕ್ಕೆ ನೆರವಾಗುವಂತಿರಬೇಕು. ತಮ್ಮ ಶೈಕ್ಷಣಿಕ ಅವಧಿಯಲ್ಲಿ ಅತ್ಯುತ್ತಮ ಆದರ್ಶಗಳನ್ನು ಆಯ್ಕೆ ಮಾಡಿಕೊಂಡು ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು. ಮನುಷ್ಯ ಸಂಬಂಧಗಳಿಗೆ ಬೆಲೆಕೊಡಬೇಕು. ಒಳ್ಳೆಯ ವಿಚಾರಗಳನ್ನು ಪ್ರತಿಪಾದಿಸುತ್ತಾ ಸಮಾಜದಲ್ಲಿ ಒಳ್ಳೆಯ ತನವನ್ನು ಪಸರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಆದರ್ಶ ಹುಂಚದಕಟ್ಟೆಯವರು ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆ ಸಮಯದಲ್ಲಿ ಧನಾತ್ಮಕ ದೃಷ್ಟಿಕೋನ, ಕಾರ್ಯತತ್ಪರತೆ, ಸಾಧನೆ, ಭಾಂಧವ್ಯತೆ, ಅರ್ಥೈಸುವಿಕೆ ಈ ಐದು ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಕಳೆದ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಾದ ಕು. ಸನ್ನಿಧಿ ಟಿ. ಕು. ಅನುಷ, ಕು. ಸಂಜನಾ ಇವರಿಗೆ ಪುರಸ್ಕರಿಸಲಾಯಿತು. ಪ್ರಥಮ ಪಿಯುಸಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು, ತುಂಗಾ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಶ್ರೀ ಕನ್ನಂಗಿ ಶೇಷಾದ್ರಿಯವರು ಮಾತನಾಡುತ್ತಾ ವಿದ್ಯಾರ್ಥಿಗಳು ನಮ್ಮ ಕಾಲೇಜಿನ ಗ್ರಂಥಾಲಯಕ್ಕೆ ಪ್ರತಿದಿನ ಭೇಟಿನೀಡಿ ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ತುಂಗಾ ವಿದ್ಯಾವರ್ಧಕ ಸಂಘದ ನಿರ್ದೇಶಕರಾದಂತಹ ಶ್ರೀ ಪಟಮಕ್ಕಿ ಮಹಾಬಲೇಶ್‌ರವರು ಮಾತನಾಡುತ್ತಾ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಹಾಗೂ ಶಿಸ್ತುಬದ್ಧವಾಗಿ ವಿದ್ಯಾರ್ಜನೆಯನ್ನು ಪಡೆದು ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗಬೇಕು ಎಂಬ ಹಿತನುಡಿಗಳನ್ನಾಡಿದರು. ಸಮಾರಂಭದ ಅಧ್ಯಕ್ಷರಾದ ಶ್ರೀ ಎಂ. ಎನ್ ರಮೇಶ್‌ರವರು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ಮುಂದಿನ ಪ್ರಜೆಗಳಾದ ನೀವು ನಿಮ್ಮ ಶೈಕ್ಷಣಿಕ ಜೀವನದಲ್ಲಿ ಅತ್ಯುತ್ತಮವಾದ ಶಿಕ್ಷಣವನ್ನು ಪಡೆಯುವುದರ ಜೊತೆಗೆ ಶಿಸ್ತು, ಸಂಯಮ, ಕಲಿಕೆ ಹಾಗೂ ನಡತೆಯನ್ನು ರೂಡಿಸಿಕೊಳ್ಳಬೇಕೆನ್ನುವ ಹಿತನುಡಿಗಳನ್ನಾಡಿದರು. ತುಂಗಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಆರ್ ಕುಮಾರಸ್ವಾಮಿರವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಕು. ಅಮೂಲ್ಯ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮಾಡಿದರು. ಕುಮಾರಿ ಅಮೂಲ್ಯ ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಹಾಗೂ ಕು. ಭೂಮಿಕಾ ಗೌಡ ದ್ವಿತೀಯ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಇವರು ಕಾರ್ಯಕ್ರಮದ ಸಫಲತೆಗೆ ಕಾರಣರಾದ ಸರ್ವರನ್ನು ವಂದಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.