ತೀರ್ಥಹಳ್ಳಿಯಲ್ಲಿ ಸಿಡಿಲಿಗೆ ಟಿವಿ, ಫ್ರಿಡ್ಜ್ ಡಮಾರ್!
– ಹಲವೆಡೆ ಮರ ಬಿದ್ದು ಟ್ರಾಫಿಕ್ ಜಾಮ್!
– ತೀರ್ಥಹಳ್ಳಿ ಪಟ್ಟಣದಲ್ಲೂ ಭಾರೀ ಅವಾಂತರ
– ಮಳೆ, ಗುಡುಗು, ಸಿಡಿಲು ನೋಡಿ ಹೊರ ಬಾರದ ಜನ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಸೇರಿ ಎಲ್ಲೆಡೆ ಗುರುವಾರ ರಾತ್ರಿ ಸುರಿದ ಭಾರೀ ಸಿಡಿಲು, ಗುಡುಗು ಆರ್ಭಟದ ಮಳೆ ಎಲ್ಲೆಡೆ ಭಾರೀ ಅನಾಹುತ ಸೃಷ್ಟಿ ಮಾಡಿದೆ. ತೀರ್ಥಹಳ್ಳಿ ಪಟ್ಟಣದ ಬಳಿ ಮರ ಬಿದ್ದು ಟ್ರಾಫಿಕ್ ಜಾಮ್ ಆಗಿ 2 ಕಿಮೀವರೆಗೆ ವಾಹನ ನಿಂತು ಪರದಾಟ ಮಾಡುವಂತಾಯಿತು. ಜತೆಗೆ ತೀರ್ಥಹಳ್ಳಿ ತಾಲೂಕಿನ ಹಲವೆಡೆ ಮಳೆ ಅನಾಹುತ ನಡೆದಿದೆ.
ತೀರ್ಥಹಳ್ಳಿಯಲ್ಲಿ ಸುರಿದ ಭಾರೀ ಮಳೆಗೆ ಇಂದಾವರ ತುಡ್ಕಿ ಬಳಿ ಮರ ಬಿದ್ದು ಭಾರೀ ಟ್ರಾಫಿಕ್ ಜಾಮ್ ಆಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ವಾಹನ ಕ್ಯೂ ನಿಂತಿದ್ದವು. ಇನ್ನು ತಾಲೂಕಿನಲ್ಲಿ ಭಾರೀ ಮಳೆಗೆ ಹಲವು ಕಡೆ ಮರ ಬಿದ್ದಿದೆ. ಮೆಸ್ಕಾಂ ಸಿಬ್ಬಂದಿ, ಸ್ಥಳೀಯರು, ಅರಣ್ಯ ಇಲಾಖೆ ಮರ ಕಡಿತಲೆ ಮಾಡಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಇಲೆಕ್ಟ್ರಾನಿಕ್ಸ್ ಉಪಕರಣ ಹಾನಿ!
ಇಲೆಕ್ಟ್ರಾನಿಕ್ ಉಪಕರಣಗಳಾದ ಟಿವಿ, ಮಿಕ್ಸಿ, ಫ್ರಿಡ್ಜ್ ಹಲವು ಕಡೆ ಹಾನಿಯಾಗಿದೆ. ವಿದ್ಯುತ್ ಕಂಬ, ಟಿಸಿ ಕೂಡ ಕೆಲವು ಕಡೆ ಹಾನಿಯಾಗಿದೆ.