Categories
ತೀರ್ಥಹಳ್ಳಿ

ಎಸ್‌ಎಸ್‌ಎಲ್‌ಸಿಯಲ್ಲಿ ಮಿಂಚಿದ ವಾಗ್ದೇವಿ ವಿದ್ಯಾರ್ಥಿಗಳು!

ಎಸ್‌ಎಸ್‌ಎಲ್‌ಸಿಯಲ್ಲಿ ಮಿಂಚಿದ ವಾಗ್ದೇವಿ ವಿದ್ಯಾರ್ಥಿಗಳು!

– ನಿರೀಕ್ಷಾ. ಪಿ. ಆಚಾರ್ಯ ರಾಜ್ಯಕ್ಕೆ 5ನೇ ರ‍್ಯಾಂಕ್‌!
– ಶ್ರೇಯಾ. ಜೆ. ಗೌಡ 592 ಅಂಕ ಪಡೆದು ಸಾಧನೆ

NAMMUR EXPRESS NEWS
ತೀರ್ಥಹಳ್ಳಿ: 2024- 25ನೇ ಯ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ತೀರ್ಥಹಳ್ಳಿ ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

* ನಿರೀಕ್ಷಾ. ಪಿ. ಆಚಾರ್ಯ ರಾಜ್ಯಕ್ಕೆ 5ನೇ ರ‍್ಯಾಂಕ್‌!

ಹೌದು ವಿದ್ಯಾರ್ಥಿಗಳಲ್ಲಿ ನಿರೀಕ್ಷಾ. ಪಿ. ಆಚಾರ್ಯ ಅವರು 621/625 ಅಂಕ ಪಡೆದು ರಾಜ್ಯಕ್ಕೆ 5ನೇ ರ‍್ಯಾಂಕ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ದಬ್ಬಣಗದ್ದೆ ಗ್ರಾಮ, ಹಾರೆಕೊಪ್ಪದವರಾಗಿದ್ದು, ನವ್ಯ ಮತ್ತು ಪೂರ್ಣೇಶ್ ಆಚಾರ್ಯ ಇವರ ಪುತ್ರಿಯಾಗಿರುತ್ತಾರೆ.

– ಶ್ರೇಯಾ. ಜೆ. ಗೌಡ 592 ಅಂಕ ಪಡೆದು ಸಾಧನೆ!

ಶ್ರೇಯಾ. ಜೆ. ಗೌಡ 592/625 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಇವರು ಕೂಡ ದಬ್ಬಣಗದ್ದೆ ಗ್ರಾಮ, ಹಾರೆಕೊಪ್ಪದವರಾಗಿದ್ದು, ರಂಜಿತ ಮತ್ತು ಜಗದೀಶ್ ಗೌಡ ಇವರ ಮಗಳಾಗಿರುತ್ತಾರೆ.
ಈ ವಿದ್ಯಾರ್ಥಿಗಳು ರಾಜ್ಯದಲ್ಲೇ ಮಿಂಚಿದ್ದು, ಶಾಲೆ ಹಾಗೂ ಊರಿಗೆ ಗೌರವ ತಂದು ಕೊಟ್ಟಿದ್ದಾರೆ. ಇವರಿಗೆ ಶಿಕ್ಷಕರು ಹಾಗೂ ಪೋಷಕರು ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.