Categories
ತೀರ್ಥಹಳ್ಳಿ

ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಇಂದಾವರದಲ್ಲಿ ವರಮಹಾಲಕ್ಷ್ಮೀ ವ್ರತಾಚರಣೆ

ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಇಂದಾವರದಲ್ಲಿ ವರಮಹಾಲಕ್ಷ್ಮೀ ವ್ರತಾಚರಣೆ 
– ಆಗಸ್ಟ್ 8 ರಂದು ಬೆಳಗ್ಗೆ 9 ರಿಂದ ರಾತ್ರಿ 7 ಗಂಟೆಯವರೆಗೆ ನಿರಂತರ ಪೂಜೆ
– ಸರ್ವರಿಗೂ ಆದರದ ಸ್ವಾಗತವನ್ನು ಮಹಾಲಕ್ಷ್ಮೀ ದೇವಸ್ಥಾನದ ಸಮಿತಿ ಕೋರಿದೆ

NAMMUR EXPRESS NEWS
ಇಂದಾವರದಲ್ಲಿ ನೆಲೆಸಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ದಿನಾಂಕ: 08-08-2025 ಶುಕ್ರವಾರ ಬೆಳಗ್ಗೆ 9-00 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ನಿರಂತರ ಪೂಜೆ ಇರುತ್ತದೆ. ವಿಶೇಷವಾಗಿ ದೇವಿಗೆ ಅಭಿಷೇಕ ದೇವಿಯ ಸ್ತುತಿ ಅರ್ಚನೆ ಹಾಗೂ ಬೆಳಗ್ಗೆ 10 ಗಂಟೆಗೆ ‘ಶ್ರೀ ಸೂಕ್ತ ಹೋಮ ಮತ್ತು ಬಾಗಿನ ಪೂಜೆ’ ಮಧ್ಯಾಹ್ನ ಮಹಾ ಪೂಜೆಯ ನಂತರ ಅನ್ನಸಂತರ್ಪಣೆ ಸಂಜೆ 5 ಗಂಟೆಯಿಂದ ಸಾಮೂಹಿಕ ಲಕ್ಷ್ಮೀಹೃದಯ ಪಾರಾಯಣ ಇರುತ್ತದೆ. ಈ ಪ್ರಯುಕ್ತ ಹಮ್ಮಿಕೊಂಡಿರುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ. ಸರ್ವರಿಗೂ ಆದರದ ಸ್ವಾಗತವನ್ನು ಅಧ್ಯಕ್ಷರು ಮತ್ತು ಸದಸ್ಯರು ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಇಂದಾವರ ಇವರು ಕೋರಿದ್ದಾರೆ.

ಅನ್ನಸಂತರ್ಪಣೆ ಧನ ಸಹಾಯ ಮಾಡಲು ಇಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – 9980314060

ಸೇವಾ ವಿವರ :-

ಶ್ರೀ ಸೂಕ್ತ ಹೋಮ – 500-00

ಬಾಗಿನ ಪೂಜೆ 300-00

ಪಾರಾಯಣ ಸೇವೆ 300-00

GPay

Phone pay or Google pay

ಶ್ರೇಯಸ್ ಶೆಟ್ಟಿ 9740695938   

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.