ತೀರ್ಥಹಳ್ಳಿಯಲ್ಲಿ ವೆರಿಕೋಸ್ ಜನ ಜಾಗೃತಿ, ತಪಾಸಣಾ ಶಿಬಿರ
– ಮೇ 1ರಂದು ರೋಟರಿ ಭವನದಲ್ಲಿ ಶಿಬಿರ
– ಪ್ರಖ್ಯಾತ ವೆರಿಕೋಸ್ ವೇನ್ಸ್ ತಜ್ಞರಾದ ಡಾ. ಎಂ. ವಿ ಉರಾಳ್ ಇವರಿಂದ ತಪಾಸಣಾ ಶಿಬಿರ
NAMMUR EXPRESS NEWS
ರೋಟರಿ ಕ್ಲಬ್ ತೀರ್ಥಹಳ್ಳಿ ಇವರ ವತಿಯಿಂದ ದಿನಾಂಕ : 01-05-2025 ನೇ ಗುರುವಾರದಂದು ಪ್ರಖ್ಯಾತ ವೆರಿಕೋಸ್ ವೇನ್ಸ್ ತಜ್ಞರಾದ ಡಾ. ಎಂ. ವಿ ಉರಾಳ್ ಇವರಿಂದ ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿದೆ.
ವೆರಿಕೋಸ್ ವೇನ್ಸ್ ಮುಕ್ತ ಸಮಾಜದ ಸಲುವಾಗಿ ವೆರಿಕೋಸ್ ವೇನ್ಸ್ ಜನ ಜಾಗೃತಿ ಹಾಗೂ ತಪಾಸಣಾ ಶಿಬಿರ “ವನ್ನು ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ರೋಟರಿ ಅಧ್ಯಕ್ಷರಾದ ಅನಿಲ್ ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಸುಮಾರು 10,000 ಮಂದಿಗೆ ಚಿಕಿತ್ಸೆ
ಡಾ|| ಎಂ. ವಿ. ಉರಾಳ್ ಇವರು ಸುಮಾರು 10.000ಕ್ಕೂ ಹೆಚ್ಚು ತಾವೇ ಆವಿಷ್ಕರಿಸಿದ ಆಯುರ್ವೇದ ಔಷಧಿಯಿಂದ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಇಲ್ಲದೆ ಶಾಶ್ವತ ಪರಿಹಾರ ನೀಡಿರುತ್ತಾರೆ. ವೆರಿಕೋಸ್ ವೇನ್ಸ್ ಹಾಗೂ ಕಾಲುಗಂಟು ನೋವಿಗೆ ಆಪರೇಷನ್ ರಹಿತ ಆಯುರ್ವೇದ ಪರಿಹಾರ ನೀಡಿರುತ್ತಾರೆ.
ಯಾವಾಗ? ಎಲ್ಲಿ?
ರೋಟರಿ ಭವನ ಸೊಪ್ಪುಗುಡ್ಡೆ, ತೀರ್ಥಹಳ್ಳಿಯಲ್ಲಿ ಬೆಳಗ್ಗೆ 9:30 ರಿಂದ 1:30 ರವರೆಗೆ ಸರ್ವರೂ ಇದರ ಸದುಪಯೋಗ ಪಡೆಯಬೇಕು ಎಂದು ಅಧ್ಯಕ್ಷರು ಮತ್ತು ಸದಸ್ಯರು, ರೋಟರಿ ಕ್ಲಬ್, ತೀರ್ಥಹಳ್ಳಿ ಇವರು ಕೋರಿದ್ದಾರೆ.
