ತೀರ್ಥಹಳ್ಳಿಯಲ್ಲಿ ವರುಣನ ಅಬ್ಬರ ಜೋರು!
– ತೀರ್ಥಹಳ್ಳಿ ಸುತ್ತಮುತ್ತ ಜೋರಾಗಿ ಸುರಿದ ಮೊದಲ ಮಳೆ
– ಮಳೆಯಿಂದ ರೈತರ ಮುಖದಲ್ಲಿ ಸಂತಸ
– ಅಲ್ಲಲ್ಲಿ ಮರ ಧರೆಗೆ: ವಾಹನಗಳ ಅಪಘಾತ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಭಾರಿ ಗುಡುಗು, ಗಾಳಿ ಸಹಿತ ಭಾರಿ ಮಳೆಯಾಗಿದ್ದು ಬಿಸಿಲಿನ ಬೇಗೆಯಿಂದ ಕೆಂಗೆಟ್ಟ ಜನರಿಗೆ ಮಳೆರಾಯ ತಂಪನ್ನು ಎರೆದಿದ್ದಾನೆ.
ಸಂಜೆ 4:30 ಗಂಟೆಗೆ ಮಳೆ ಪ್ರಾರಂಭವಾಗಿದ್ದು ತೀರ್ಥಹಳ್ಳಿ ಪಟ್ಟಣದಲ್ಲಿ ಮೊದಲ ಮಳೆಯಾಗಿದೆ ತೀರ್ಥಹಳ್ಳಿ ತಾಲೂಕಿನ ಸುತ್ತಮುತ್ತಲು ಈಗಾಗಲೇ ಒಂದೆರಡು ಮಳೆಯಾಗಿದ್ದು ರೈತರ ಮುಖದಲ್ಲಿ ಸಂತಸ ತಂದಿದೆ. ಅಡಿಕೆ ತೋಟಕ್ಕೆ ತುಂಬಾ ಮಳೆಯಿಂದ ಅನುಕೂಲಕರವಾಗಿದ್ದು ರೈತರಲ್ಲಿ ಸಂತಸ ಹೆಚ್ಚಿಸಿದೆ.
ಮೊನ್ನೆ ಸುರಿದ ಮಳೆಗೆ ಹಲವೆಡೆ ಮರ ಬಿದ್ದಿದ್ದವು. ಇದೀಗ ಮಳೆ ಅಬ್ಬರಕ್ಕೆ ವಿದ್ಯುತ್ ಇಲ್ಲವಾಗಿದೆ.
