Categories
ತೀರ್ಥಹಳ್ಳಿ

ಜುಲೈ 14 ರಂದು ಶಕ್ತಿ ಯೋಜನೆಯ ವಿಜಯೋತ್ಸವ ಕಾರ್ಯಕ್ರಮ

ಜುಲೈ 14 ರಂದು ಶಕ್ತಿ ಯೋಜನೆಯ ವಿಜಯೋತ್ಸವ ಕಾರ್ಯಕ್ರಮ
– ಕೆ ಎಸ್ ಆರ್ ಟಿ ಸಿ ಬಸ್ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಸನ್ಮಾನ
– ಸಚ್ಚಿoದ್ರ ಹೆಗಡೆ ನೇತೃತ್ವದಲ್ಲಿ ಆಚರಣೆ: ಸರ್ವರಿಗೂ ಸ್ವಾಗತ

– ಜು.13ರಂದು ಉಮಾಶ್ರೀ ಅವರಿಗೆ ತೀರ್ಥಹಳ್ಳಿ ಪೌರ ಸನ್ಮಾನ

NAMMUR EXPRESS NEWS
ತೀರ್ಥಹಳ್ಳಿ : ಶ್ರೀಯುತ ಸಿದ್ದರಾಮಯ್ಯ ನೇತೃತ್ವ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ” ಶಕ್ತಿ ಯೋಜನೆಯ ” ವಿಜಯೋತ್ಸವ ಕಾರ್ಯಕ್ರಮವನ್ನು ದಿನಾಂಕ 14-07-2025 ರಂದು ಸೋಮವಾರ ಬೆಳಗ್ಗೆ 11.00 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ KSRTC ಬಸ್ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಸನ್ಮಾನ ಹಾಗೂ ಸಾರ್ವಜನಿಕರಿಗೆ ಸಿಹಿಯನ್ನು ವಿತರಿಸುವ ಮೂಲಕ ಮುಖ್ಯ ಬಸ್ ನಿಲ್ದಾಣ ತೀರ್ಥಹಳ್ಳಿಯಲ್ಲಿ, ತಾಲ್ಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷರಾದ ಶ್ರೀ ಶಚೀಂದ್ರ ಹೆಗಡೆ ಎನ್.ಜಿ. ನೇತೃತ್ವದಲ್ಲಿ ಆಚರಿಸಲಾಗುವುದು. ಸದರಿ ಕಾರ್ಯಕ್ರಮಕ್ಕೆ ಎಲ್ಲಾ ಹಂತದ ಗೌರವಾನ್ವಿತ ಜನಪ್ರತಿನಿಧಿಗಳು, ಪಟ್ಟಣ ಪಂಚಾಯ್ತಿಯ ಅಧ್ಯಕ್ಷರು/ಉಪಾಧ್ಯಕ್ಷರು/ಸದಸ್ಯರು, ಗ್ಯಾರಂಟಿ ಯೋಜನೆಯ ಎಲ್ಲಾ ಹಂತದ ಸದಸ್ಯರು, ನಾಮಾಂಕಿತ ಸದಸ್ಯರು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಕ್ಷದ ಮುಖಂಡರುಗಳು ಕಾರ್ಯಕರ್ತರುಗಳು, ಮಾಧ್ಯಮ ಮತ್ತು ಪತ್ರಿಕಾ ಮಿತ್ರರು, ಫಲಾನುಭವಿಗಳು ಆಗಮಿಸಿ ಯಶಸ್ವಿಗೊಳಿಸಲು ಕೋರಲಾಗಿದೆ.

ಜು.13ರಂದು ಉಮಾಶ್ರೀ ಅವರಿಗೆ ತೀರ್ಥಹಳ್ಳಿ ಪೌರ ಸನ್ಮಾನ

ತೀರ್ಥಹಳ್ಳಿ: ಭಾನುವಾರ 13.07.2025ರಂದು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮಧ್ಯಾಹ್ನ 1.30 ಗಂಟೆಗೆ ಸರಿಯಾಗಿ ರಾಜ್ಯದ ಖ್ಯಾತ ಚಿತ್ರನಟಿ, ರಂಗ ಕಲಾವಿದೆ ಉಮಾಶ್ರೀ ಅವರು ಪಟ್ಟಣ ಪಂಚಾಯಿತಿಗೆ ಆಗಮಿಸುತ್ತಿದ್ದು ಪಟ್ಟಣದ ಸಮಸ್ತ ನಾಗರಿಕರ ಪರವಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ , ಉಮಾಶ್ರೀ ಅವರನ್ನು ಪೌರ ಸನ್ಮಾನ ಆಯೋಜನೆ ಮಾಡಲಾಗಿದೆ. ಸರ್ವರಿಗೂ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ ಸರ್ವರನ್ನು ಸ್ವಾಗತಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.