ಮೇ.20ಕ್ಕೆ ತೀರ್ಥಹಳ್ಳಿಯಲ್ಲಿ ವಿಜಯ ಸಿಂದೂರ ಶೋಭಾಯಾತ್ರೆ!
– ದೇಶಪ್ರೇಮ ಮೆರೆಯೋಣ ಎಂದು ಶಾಸಕ ಆರಗ ಜ್ಞಾನೇಂದ್ರ ಕರೆ
– ವಿಜಯ ಸಿಂಧೂರ್ ವಿಜಯೋತ್ಸವವನ್ನು ತ್ರಿವರ್ಣ ಧ್ವಜ ಹಿಡಿದು ಯಾತ್ರೆಯಲ್ಲಿ ಭಾಗವಹಿಸುವಂತೆ ಸೂಚನೆ
NAMMUR EXPRESS NEWS
ಶಾಸಕ ಆರಗ ಜ್ಞಾನೇಂದ್ರ, ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿ,
ತೀರ್ಥಹಳ್ಳಿ: ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದಿಂದ ಕುಶಾವತಿ ಪಾರ್ಕ್ವರೆಗೆ ಮೇ. 20 ಮಂಗಳವಾರದಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ನಾಗರಿಕ ವೇದಿಕೆ, ತೀರ್ಥಹಳ್ಳಿ ವಿಜಯ ಸಿಂದೂರ ಶೋಭಾಯಾತ್ರೆಯನ್ನು ಆಯೋಜಿಸಲಾಗಿದೆ.
ಕುಶಾವತಿ ಪಾರ್ಕ್ ಆವರಣದಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ ನಡೆಯಲಿದ್ದು, ನಮ್ಮ ಜಮ್ಮು ಕಾಶ್ಮೀರದ ಪಹಲ್ಗಾಮಿನಲ್ಲಿ ಪಾಕಿಸ್ತಾನ ಪ್ರೇರಿತ ಜಿಹಾದಿ ಭಯೋತ್ಪಾದಕರಿಂದ ಅಮಾಯಕ ಹಿಂದೂಗಳ ಹತ್ಯಾಕಾಂಡದ ನಂತರ ನಡೆದ ಭಾರತದ ಸೇನೆಯ ಅಪರೇಷನ್ ಸಿಂದೂರ ಕಾರ್ಯಾಚರಣೆಯು ಉಗ್ರಗಾಮಿಗಳ ಹೆಡೆಮುರಿ ಕಟ್ಟಿದ್ದಲ್ಲದೇ, ದುಷ್ಟ ಪಾಕಿಸ್ತಾನದ ಜಂಘಾಬಲವನ್ನೇ ಕುಸಿಯುವಂತೆ ಮಾಡಿದೆ.
ಭಾರತದ ಸೈನ್ಯವು ಕಳೆದ ಕೆಲವೇ ದಿನಗಳಲ್ಲಿ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ನಂತಹ ಸಂಘಟನೆಗಳ 100ಕ್ಕೂ ಹೆಚ್ಚು ಜಾಗತಿಕವಾಗಿ ಬೇಕಾಗಿದ್ದ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿತು. ಪಾಕಿಸ್ಥಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭೂಪ್ರದೇಶದೊಳಗಿನ 9 ಪ್ರಮುಖ ಭಯೋತ್ಪಾದಕ ಶಿಬಿರಗಳು ಮತ್ತು ಮುಖ್ಯ ಕಚೇರಿಗಳನ್ನು ಸಂಪೂರ್ಣವಾಗಿ ನಾಶಮಾಡಿತು. ನೂರ್ ಖಾನ್ (ಇಸ್ಲಾಮಾಬಾದ್), ರಫೀಕಿ, ಸರ್ಗೊಧಾ, ಸ್ಕಾರ್ಡು (ಎತ್ತರದ ಉಡಾವಣಾ ತಾಣ), ರಾವಲ್ಪಿಂಡಿ, ಸಿಯಾಲ್ನೋಟ್, ಜಾಕೋಬಾಬಾದ್ ಮತ್ತು ಚುನಿಯಾನ್ ನಂತಹ ಕಾರ್ಯತಂತ್ರ ರೂಪಿಸುವ ಸೈನಿಕ ನೆಲೆಗಳನ್ನು ಭಾರತ ಬೆಂಕಿಗೆ ಆಹುತಿ ನೀಡಿದೆ.
ನಮ್ಮ ಭಾರತೀಯ ಸದೃಢ ನಾಯಕತ್ವ ಮತ್ತು ಸೈನಿಕರ ದಿಟ್ಟ ಉತ್ತರದ ಪರಿಣಾಮ ಭಾರತದ ಶತ್ರುಗಳಿಗೆ ನಡುಕ, ಭಯೋತ್ಪಾದಕರಿಗೇ ಭಯ ಉಂಟಾಗಿದ್ದು, ಜಾಗತಿಕ ಮಟ್ಟದಲ್ಲಿಯೂ ಭಾರತದ ಸ್ಥಾನಮಾನ ಹೆಚ್ಚಿದೆ. ಭಾರತವು ವಿಶ್ವಕ್ಕೆ ಉಗ್ರತ್ವದ ನಿರ್ಮೂಲನೆಯ ಸ್ಪಷ್ಟ ಸಂದೇಶ ನೀಡಿದೆ. ಪ್ರತಿಕೂಲ ಸಮಯದಲ್ಲಿ ಧೃಡ ನಿರ್ಧಾರ ಕೈಗೊಂಡು ನಾಗರೀಕರ ರಕ್ಷಣೆಗೆ ಬದ್ಧವಾಗಿರುವ ಸೈನ್ಯವನ್ನು, ಕೇಂದ್ರ ಸರ್ಕಾರವನ್ನು ಸಮಾಜ ಗೌರವಿಸುತ್ತಿದೆ.
ಆಪರೇಷನ್ ಸಿಂದೂರ್ ಇದು ಕೇವಲ ಮಿಲಿಟರಿ ಯಶಸ್ಸಲ್ಲ. ಇದು ನಾಗರಿಕತೆಯ ಪ್ರತಿಕ್ರಿಯೆಯಾಗಿದೆ. ಅದು ಸಂಘರ್ಷವನ್ನು ಬಯಸುವುದಿಲ್ಲ, ಆದರೆ ಅದಕ್ಕೆ ಎಂದಿಗೂ ಹೆದರುವುದಿಲ್ಲ ಎಂಬ ಒಂದು ಹೊಸ ಭಾರತವು ಪುಟಿದೆದ್ದಿದೆ. ಇನ್ನು ಮುಂದೆ ಶೋಕಿಸದೆ ತನ್ನ ಪೂರ್ವಜರಂತೆ ಘರ್ಜಿಸುತ್ತಿದೆ. ಹಿಂದಿನ ನೋವುಗಳ ಕೆಂಡದಿಂದ, ದೇಶಭಕ್ತಿಯ, ದೇಶದ ಏಕಾತ್ಮತೆಯ, ಸಾರ್ವಭೌಮತೆಯ ಜ್ವಾಲೆಗಳು ಈಗ ಬೆಳಗುತ್ತಿವೆ. “ಭಾರತವು ಮತ್ತೆಂದೂ ಬಲಿಪಶುವಾಗುವುದಿಲ್ಲ” ಎಂದು ಒಂದೊಂದು ಕಿಡಿಗಳು ಹೇಳುತ್ತಿವೆ.
“ಭಾರತವು ಜಗತ್ತಿಗೆ ತನ್ನ ವಿರಾಟ್ ರೂಪವನ್ನು ತೋರಿಸಿದೆ. ಸಾಮರಸ್ಯದಿಂದ ಬದುಕಲು ಸಿದ್ಧರಿರುವ ಶಾಂತಿಯುತ ರಾಷ್ಟ್ರ, ಆದರೆ ಅದರ ಸಾರ್ವಭೌಮತ್ವವನ್ನು ಪ್ರಶ್ನಿಸಿದರೆ, ಅವರನ್ನು ಸುಟ್ಟು ಬೂದಿ ಮಾಡಲು ಸಂಪೂರ್ಣವಾಗಿ ಸಿದ್ಧವಾಗಿದೆ”.
ಭಾರತ ಮಾತೆಯ ಸಿಂದೂರ ಜಮ್ಮು ಕಾಶ್ಮೀರವನ್ನು ಮತ್ತೊಮ್ಮೆ ಅಖಂಡವಾಗಿ ಕಣ್ತುಂಬಿಕೊಳ್ಳುವ ದಿನಗಳು ನಮ್ಮ ಮುಂದಿವೆ. ಈ ಸಂದರ್ಭದಲ್ಲಿ ಸಮಾಜಕ್ಕೆ ಇನ್ನಷ್ಟು ಆತ್ಮವಿಶ್ವಾಸ ಮತ್ತು ದೇಶಭಕ್ತಿಯನ್ನು ತುಂಬುವ, ಸೈನ್ಯಕ್ಕೆ ನಮ್ಮ ಕೃತಜ್ಞತೆ, ಬೆಂಬಲವನ್ನು ನೀಡುವ ಸಂದರ್ಭ ಇದಾಗಿದ್ದು, ಧಮನಿ ಧಮನಿಗಳಲ್ಲಿ ಅಡಗಿರುವ ಭಾರತದ ಭಕ್ತಿಯನ್ನು ಪ್ರಕಟಪಡಿಸುವ ಘಳಿಗೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರಿ ಭಾರತದ ಈ ವಿಜಯ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಬೇಕು.
ಪ್ರತಿ ಮನೆ ಮನೆಯಿಂದಲೂ ತ್ರಿವರ್ಣ ಧ್ವಜಗಳನ್ನು ಹಿಡಿದು ವಿಜಯ ತಿರಂಗಾ ಯಾತ್ರೆಯಲ್ಲಿ ಮನೆ ಮಂದಿಯೆಲ್ಲರೂ ಪಾಲ್ಗೊಳ್ಳಿ ಎಂದು ಈ ಮೂಲಕ ವಿನಂತಿಕೊಳ್ಳಲಾಗಿದೆ. ಈ ಸುದ್ದಿಗೋಷ್ಠಿಯಲ್ಲಿ ದೇವಂಗಿ ಮನುದೇವ್, ನಿವೃತ್ತ ಸೈನಿಕರಾದಂತಹ ಎಂಡಿ ಉಪೇಂದ್ರ, ವೀರಪ್ಪ ಟಿ ಪಿ, ಸಂತೋಷ್ ಎ ಕೆ, ಮೂರ್ತಿ ಜಿ ಎನ್, ಚಂದ್ರಶೇಖರ್ ಇವರು ಉಪಸ್ಥಿತರಿದ್ದರು. ಮೇ 20ರಂದು ನಾಗರಿಕ ವೇದಿಕೆಯ ಹೆಸರಿನಲ್ಲಿ ವಿಜಯ ಸಿಂಧೂರ್ ವಿಜಯೋತ್ಸವವನ್ನು ಎಲ್ಲರೂ ಸೇರಿ ಆಚರಿಸೋಣ ದೇಶಪ್ರೇಮ ಮೆರೆಯೋಣ ಎಂದು ಶಾಸಕ ಆರಗ ಜ್ಞಾನೇಂದ್ರ ಕರೆ. ನೀಡಿದರು.
