ತೀರ್ಥಹಳ್ಳಿಗೆ ಬಂತು ವಿಕಸಿತ ಭಾರತ ರಥಯಾತ್ರೆ..!
– ಕೇಂದ್ರ ಸರ್ಕಾರದ ಯೋಜನೆ ಜನರ ಬಳಿಗೆ
– ವಿಶ್ವದಲ್ಲಿ ಭಾರತ 3ನೇ ಸ್ಥಾನದಲ್ಲಿ ನಿಲ್ಲಲಿದೆ: ಆರಗ
NAMMUR EXPRESS NEWS
ತೀರ್ಥಹಳ್ಳಿ: ಪ್ರತಿಯೊಬ್ಬರ ಬದುಕನ್ನು ಹೇಗೆ ರೂಪಿಸಬಹುದು ಎಂದು ಕೇಂದ್ರ ಸರ್ಕಾರ ತನ್ನ ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಸಲುವಾಗಿ ವಿಕಸಿತ ಭಾರತ ಎಂಬ ರಥಯಾತ್ರೆ ನಡೆಸಿ ಪ್ರಚಾರ ಮಾಡುತ್ತಿದೆ. ಈ ಕೇಂದ್ರ ಸರ್ಕಾರದ ಯೋಜನೆಯನ್ನು ಈಗಾಗಲೇ ಹಲವರು ಬಳಕೆ ಮಾಡಿಕೊಂಡಿದ್ದಾರೆ. ಸರ್ಕಾರ ಹಲವಾರು ರೀತಿ ಹೊಸ ರೀತಿಯ ಯೋಜನೆ ರೂಪಿಸಿದರು ಕೆಲವರಿಗೆ ತಿಳಿಯುವುದಿಲ್ಲ ಅದನ್ನು ತಿಳಿಸುವ ಕಾರಣದಿಂದ ಈ ರಥಯಾತ್ರೆ ನಡೆಸಲಾಗುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಶನಿವಾರ ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ವಿಕಸಿತ ಭಾರತ ರಥಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿ ಮೊದಲೆಲ್ಲ ಬ್ಯಾಂಕ್ ಮ್ಯಾನೇಜರ್ ತಮ್ಮ ಕೊಠಡಿ ಬಿಟ್ಟು ಹೊರಗಡೆ ಹೋಗುತ್ತಾ ಇರಲಿಲ್ಲ. ಆದರೆ ಈಗ ಹಳ್ಳಿ ಹಳ್ಳಿಯ ಬಡವರ ಮನೆಗೆ ಹೋಗುತ್ತಾರೆ ಎಂದರೆ ಅದಕ್ಕೆ ಕಾರಣ ಕೇಂದ್ರ ಸರ್ಕಾರದ ಯೋಜನೆಗಳು. ಮೋದಿ ಬಂದ ನಂತರ ಇದೆಲ್ಲವೂ ಆಗಿದೆ. ಜೀರೋ ಬ್ಯಾಲೆನ್ಸ್ ಅಕೌಂಟ್ ಮಾಡಿ ಜನರಿಗೆ ಅನುಕೂಲ ಮಾಡಲಾಗಿದೆ ಎಂದರು.
ಮೊದಲೆಲ್ಲ ಸರ್ಕಾರದ ಯೋಜನೆಯ ಹಣ ಪಡೆಯಬೇಕು ಎಂದರೆ ತಾಲೂಕು ಕಚೇರಿ, ಪಟ್ಟಣ ಪಂಚಾಯತ್ ಗೆ ತಿರುಗಾಟ ನಡೆಸಬೇಕಿತ್ತು ಅಥವಾ ಮುಖಂಡರ ಮೂಲಕ ಹಣ ಪಡೆಯಬೇಕಾಗಿತ್ತು. ಆದರೆ ಈಗ ನಿಮ್ಮ ನಿಮ್ಮ ಅಕೌಂಟ್ ಗೆ ಹಣ ಜಮಾ ಆಗುತ್ತಿದೆ. ಇದರಿಂದ ಯಾವುದೇ ಮದ್ಯವರ್ತಿಗಳ ಕಾಟ ಇರದಂತೆ ಆಗಿದೆ.ಬಡವರ ಕುಟುಂಬಕ್ಕೆ 5 ಲಕ್ಷ ಇನ್ಸೂರೆನ್ಸ್ ಮಾಡಿಸಿ ಆಯುಷ್ಮನ್ ಭಾರತ್ ಯೋಜನೆ ತಂದಿದ್ದಾರೆ. 12 ರೂ ಗೆ ಇನ್ಸೂರೆನ್ಸ್ ಮಾಡಿಸಿದ್ದಾರೆ, ಆಸ್ಪತ್ರೆಗಳಲ್ಲಿ ಮಾತ್ರೆ ಬರೆದು ಕೊಟ್ಟಾಗಲೂ ಸಮಸ್ಯೆ ಆಗುತ್ತಿತ್ತು ಆದರೆ ಕಡಿಮೆ ಹಣದಲ್ಲಿ ಜನೌಷಧಿಕೇಂದ್ರದಲ್ಲಿ ಮೆಡಿಸಿನ್ ಸಿಗುತ್ತದೆ ಎಂದರು.

ಹಳ್ಳಿ ಹಳ್ಳಿಯಲ್ಲೂ ಅಭಿವೃದ್ಧಿ: ಆರಗ
ತೀರ್ಥಹಳ್ಳಿ ತಾಲೂಕಿನ ಪ್ರತಿಯೊಂದು ಹಳ್ಳಿ ಹಳ್ಳಿಗೂ ರಸ್ತೆ ಕಾಮಗಾರಿಗಳು ಆಗಿದೆ. ನೀರಿನ ಯೋಜನೆ ತರುವ ಮೂಲಕ ಶುದ್ಧ ಕುಡಿಯುವ ನೀರನ್ನು ಮನೆ ಮನೆಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಈ ಎಲ್ಲಾ ಯೋಜನೆಗಳಿಗೆ ಕೇಂದ್ರ ಸರ್ಕಾರವೇ ಕಾರಣ ಇನ್ನೇನು ಕೆಲವೇ ದಿನಗಳಲ್ಲಿ ಭಾರತ ವಿಶ್ವದ 3 ನೇ ಸ್ಥಾನದಲ್ಲಿ ನಿಲ್ಲಲಿದೆ. ಅದಕ್ಕೆಲ್ಲ ನಾವೆಲ್ಲರೂ ಶ್ರಮಿಸಬೇಕಿದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಎಲ್. ಇ. ಡಿಯಲ್ಲಿ ಮೋದಿ ಕಾರ್ಯಕ್ರಮ ಪ್ರಸಾರ
ತೀರ್ಥಹಳ್ಳಿ ಪಟ್ಟಣಕ್ಕೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸುವ ವಿಕಸಿತ ಭಾರತ ರಥಯಾತ್ರೆ ಆಗಮಿಸಿ ತೆರೆದ ವಾಹನದಲ್ಲಿ (ಇಚರ್ ಲಾರಿ) ಎಲ್ ಇಡಿ ಸ್ಟ್ರೀನ್ ಅಳವಡಿಸಿದ ವಾಹನದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ವಿಡಿಯೋ ಮೂಲಕ ಜನರಿಗೆ ತೋರಿಸಲಾಯಿತು. ಈ ಸಂದರ್ಭದಲ್ಲಿ ಪ. ಪಂ ಅಧ್ಯಕ್ಷೆ ಗೀತಾ ರಮೇಶ್, ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್, ಜ್ಯೋತಿ ಗಣೇಶ್, ಬಿ. ಗಣಪತಿ, ರತ್ನಾಕರ್ ಶೆಟ್ಟಿ, ಸೇರಿ ಸುಮಾರು 30 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.