Categories
ತೀರ್ಥಹಳ್ಳಿ

ಗಣೇಶೋತ್ಸವದ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ

ಗಣೇಶೋತ್ಸವದ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ
– ಛತ್ರಕೇರಿ ಯುವಕರ ಸಾಮಾಜಿಕ ಸೇವೆ
– ಬಸ್ ನಿಲ್ದಾಣ ಗಣಪತಿ ಅನ್ನ ಸಂತರ್ಪಣೆ: 2500ಕ್ಕೂ ಹೆಚ್ಚು ಮಂದಿ ಹಾಜರ್

NAMMUR EXPRESS NEWS
ತೀರ್ಥಹಳ್ಳಿ ತಾಲೂಕಿನ ಪ್ರಸಿದ್ಧ ಗಣೇಶೋತ್ಸವಗಳಲ್ಲಿ ಒಂದಾಗಿರುವ ಛತ್ರಕೇರಿಯಲ್ಲಿ 40 ನೇ ವರ್ಷದ ಪ್ರಯುಕ್ತ ಸಮಿತಿ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಪ್ರತಿವರ್ಷವೂ ಕೂಡ ಒಳ್ಳೆ ಕೆಲಸ ಮಾಡಿಕೊಂಡು ಬರುತ್ತಿರುವ ಸಿದ್ದಿವಿನಾಯಕ ಯುವಕ ಸಂಘದ ಸದಸ್ಯರು ಸ್ವಚ್ಛ ಭಾರತ್, ಗಿಡ ನೆಡುವ ಕಾರ್ಯಕ್ರಮ ಸೇರಿದಂತೆ ಹಲವಾರು ಕಾರ್ಯಕ್ರಮ ನೆಡೆಸಿಕೊಂಡು ಬರುತ್ತಿದ್ದಾರೆ. ಸಂಘದ ಸದಸ್ಯರು, ಪದಾಧಿಕಾರಿಗಳು ಇದ್ದರು.

ಬಸ್ ನಿಲ್ದಾಣ ಗಣಪತಿ ಅನ್ನ ಸಂತರ್ಪಣೆ: 2500ಕ್ಕೂ ಹೆಚ್ಚು ಮಂದಿ ಹಾಜರ್

ತೀರ್ಥಹಳ್ಳಿ ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ಪ್ರತಿಷ್ಠಾಪನೆ ಮಾಡಿರುವ ಸಾರ್ವಜನಿಕ ಗಣಪತಿ ಉತ್ಸವದ ಅಂಗವಾಗಿ ಮಂಗಳವಾರ ನಡೆದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ 2500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.