Categories
ತೀರ್ಥಹಳ್ಳಿ

ಈಡಿಗರ ಸಂಘಕ್ಕೆ ಮತ್ತೆ ಸಾರಥಿ ಆಗ್ತಾರಾ ಮಟ್ಟಿನಮನೆ ರಾಮಚಂದ್ರ?

ಈಡಿಗರ ಸಂಘಕ್ಕೆ ಮತ್ತೆ ಸಾರಥಿ ಆಗ್ತಾರಾ ಮಟ್ಟಿನಮನೆ ರಾಮಚಂದ್ರ?
– ತಾಲೂಕಿನಲ್ಲೇ ಅತೀ ಹೆಚ್ಚು ಮತ ಪಡೆದ ಮುಡುಬ ರಾಘವೇಂದ್ರ
– ಉಮೇಶ್ ಹೊಸಮನೆ ಸೇರಿ ಅನೇಕರ ಆಗಮನ: ಹಿರಿ -ಕಿರಿಯರ ಸಮಾಗಮ
– ಸಂಘದ ಅಭಿವೃದ್ಧಿ, ಸರ್ವರಿಗೂ ಸದಸ್ಯತ್ವವೇ ಈಗಿನ ಅಜೆಂಡಾ!

NAMMUR EXPRESS NEWS
ತೀರ್ಥಹಳ್ಳಿ ತಾಲೂಕು ಆರ್ಯ ಈಡಿಗರ ಸಂಘದ ಆಡಳಿತ ಮಂಡಳಿಯ 21 ನಿರ್ದೇಶಕ ಸ್ಥಾನಕ್ಕೆ ಡಿಸೆಂಬರ್ 28ರಂದು ಚುನಾವಣೆ ನಡೆದಿದ್ದು ಭಾರೀ ಹಣಾಹಣಿ ನಡುವೆ 21 ಮಂದಿಯ ಆಯ್ಕೆ ನಡೆಯಿತು. ಈ ಬಾರಿ ಹಳೆಯ ನಿರ್ದೇಶಕರ ಜತೆಗೆ ಹೊಸಬರು ಕೂಡ ಗೆದ್ದಿದ್ದಾರೆ. ಬಹುತೇಕ 16ಕ್ಕೂ ಹೆಚ್ಚು ಮಂದಿ ನಿರ್ದೇಶಕರ ಬೆಂಬಲ ಇರುವ ಮಟ್ಟಿನಮನೆ ರಾಮಚಂದ್ರ ಅವರೇ ಮತ್ತೆ ಅಧ್ಯಕ್ಷರಾಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈಡಿಗ ಸಂಘದ ಜಾಗ, ಹಾಸ್ಟೆಲ್, ಕಟ್ಟಡ ಅಭಿವೃದ್ಧಿ, ಶಿಕ್ಷಣ ಸಂಸ್ಥೆ ಆರಂಭ, ಎಲ್ಲಾ ಹೋಬಳಿಯ ಸಮುದಾಯದ ಜನರಿಗೆ ಸದಸ್ಯತ್ವವೇ ಈಗಿನ ಅಜೆಂಡಾ ಆಗಲಿದೆ.

21 ಮಂದಿ ಗೆಲುವು ಸಾಧಿಸಿದವರ ಹೆಸರು

ಚಿಪ್ಪಿನಕೊಡಿಗೆ ವೆಂಕಟೇಶ್, ವಿನಯ್, ಗುರುಮೂರ್ತಿ, ಉಮೇಶ್ ಹೊಸಮನೆ, ಎಂ.ವಿ. ಚಂದ್ರಶೇಖ‌ರ್, ಷಣ್ಮುಖ ಬೀಡೆ, ಮುಡುಬ ರಾಘವೇಂದ್ರ, ಮಟ್ಟಿನಮನೆ ರಾಮಚಂದ್ರ, ಮಹೇಶ್ ನಾಯ್ಕ, ಮೋಹನ್ ಎಂ.ಸಿ., ಸಿ.ಆರ್.ಮಂಜುನಾಥ್, ಕಬಸೆ ವಿಕ್ರಮ್, ಪ್ರದೀಪ್ ಕೊರಣಕಟ್ಟೆ, ಹೆಚ್.ಪಿ.ಸುರೇಶ್, ಟಿ.ಎಲ್.ಸುಂದರೇಶ್, ಲಯನ್‌ ಪಾಂಡುರಂಗಪ್ಪ, ಶಿವಮೂರ್ತಿ ಹೊದಲ, ಡಿ.ಲಕ್ಷ್ಮಣ್, ಕುರುವಳ್ಳಿ ನಾಗರಾಜ್‌, ಜಾನಕಿ, ತ್ರಿವೇಣಿ ಬಾಲರಾಜ್.

ಆಗುಂಬೆ ಹೋಬಳಿಯಲ್ಲಿ ಫೈಟ್ ಇಲ್ಲ!

ಆಗುಂಬೆ ಹೋಬಳಿಯಲ್ಲಿ ಚುನಾವಣೆ ನಡೆದಿಲ್ಲ. ಹಿಂದಿನ ಅವಧಿಯಲ್ಲಿ ಕಾರ್ಯದರ್ಶಿ ಆಗಿದ್ದ ಚಿಪ್ಪಿನಕೊಡಿಗೆ ವೆಂಕಟೇಶ್, ಗುರು ಮೂರ್ತಿ, ವಿನಯ್ ಅವಿರೋಧ ಆಯ್ಕೆಗೊಂಡಿದ್ದಾರೆ. ಇಲ್ಲಿ ನಾಮಪತ್ರ ಸಲ್ಲಿಸಿದ್ದ ದಿಂಡ ಮಂಜುನಾಥ್ ವಾಪಾಸ್ ತೆಗೆದು ಬೆಂಬಲ ಘೋಷಣೆ ಮಾಡಿದ್ದರು.

ಅಗ್ರಹಾರ ಹೋಬಳಿಯಲ್ಲಿ ಅತೀ ಹೆಚ್ಚು ಮತ ಪಡೆದ ಉಮೇಶ್ ಹೊಸಮನೆ

ಪಡೆದ ಮತ:
ಅಗ್ರಹಾರ ಹೋಬಳಿಯಲ್ಲಿ ಬಿ.ಟಿ ಈಶ್ವರಪ್ಪ-85,
ಹೊಸಮನೆ ಉಮೇಶ್ – 186,
ಎಮ್.ವಿ ಚಂದ್ರಶೇಖರ್-146,
ಚೂಡಾಮಣಿ ಹಾಲೇಸರ-86,
ಷಣ್ಮುಖ ಬೀಡೆ-141,
ಹೊಸಮನೆ ಸೋಮಪ್ಪ-90

ಮತ ಪಡೆದಿದ್ದಾರೆ. ಇಲ್ಲಿ ಮರಹಳ್ಳಿ ಚಂದ್ರ ಶೇಖರ್ ಮರು ಆಯ್ಕೆ ಆಗಿದ್ದಾರೆ. ಹಿಂದಿನ ಅವಧಿಯಲ್ಲಿದ್ದ ಗಂಗಾಧರ ತಲವಡಗ ಈ ಬಾರಿ ಸ್ಪರ್ಧೆ ಮಾಡಿರಲಿಲ್ಲ. ಚೂಡಾಮಣಿ ಸೋಲು ಕಂಡಿದ್ದಾರೆ. ಯುವ ಮುಖಂಡ ಷಣ್ಮುಖ ಬೀಡೆ ಮೊದಲ ಬಾರಿಗೆ ಆಯ್ಕೆ ಆಗಿದ್ದಾರೆ. ಇನ್ನು ಬಿಜೆಪಿ ಮುಖಂಡ ಹೊಸಮನೆ ಉಮೇಶ್ ಅತೀ ಹೆಚ್ಚು ಮತ ಪಡೆದು ಮೊದಲ ಬಾರಿಗೆ ಪ್ರವೇಶ ಮಾಡಿದ್ದಾರೆ.

ಮಹಿಳಾ ಮೀಸಲು ಕ್ಷೇತ್ರದಲ್ಲಿ ಇಬ್ಬರು ಹೊಸಬರು!

ಪಡೆದ ಮತ:
ಕುಸುಮಾ ಕುಮಾರ್-472,
ಜಾನಕಿ-727,
ತ್ರಿವೇಣಿ ಬಾಲರಾಜ್-587,
ಕೆ.ಸಿ ರೂಪಾ-435,
ವಿನಂತಿ ಶಿವಾನಂದ-401.
ಈ ಗೆದ್ದವರ ಪೈಕಿ ಇಬ್ಬರೂ ಜಾನಕಿ ಮತ್ತು ತ್ರಿವೇಣಿ ಹೊಸಬರು. ವಿನಂತಿ ಹಿಂದಿನ ಅವಧಿಯಲ್ಲಿ ಇದ್ದು ಈಗ ಸೋಲು ಕಂಡಿದ್ದಾರೆ.
ಕಸಬಾ ಹೋಬಳಿಯಲ್ಲಿ ಹಿರಿಯರು -ಕಿರಿಯರ ಎಂಟ್ರಿ!

ಕಸಬಾ ಹೋಬಳಿಯಲ್ಲಿ ಈಡಿಗ ಸಮುದಾಯದ ಹಿರಿಯರಾದ ಲಕ್ಷ್ಮಣ್, ಲಯನ್ಸ್ ಪಾಂಡುರಂಗಪ್ಪ, ಸುಂದರೇಶ್ ಗೆದ್ದಿದ್ದು, ಯುವ ಮುಖಂಡರಾದ ಕುರುವಳ್ಳಿ ನಾಗರಾಜ್ ಮತ್ತು ಹೊದಲ ಶಿವು ಮರು ಆಯ್ಕೆ ಆಗಿದ್ದಾರೆ. ಇಲ್ಲಿ ಸುಂದರೇಶ್ ಅತೀ ಹೆಚ್ಚು ಮತ ಪಡೆದಿದ್ದಾರೆ.

ಪಡೆದ ಮತ:
ಮರಹಳ್ಳಿ ನಾಗಭೂಷಣ-75,
ಕುರುವಳ್ಳಿ ನಾಗರಾಜ್-154,
ಕೆ.ಬಿ ಪದ್ಮನಾಭ-134,
ಹೆಚ್ ಪಾಂಡು ರಂಗಪ್ಪ- 177,
ಡಿ.ಬಂಗಾರಪ್ಪ-98,
ಎಮ್.ಆರ್ ಮಂಜಪ್ಪ-144,
ರಾಜೇಂದ್ರತಲವಡಗ-83,
ಡಿ.ಲಕ್ಷ್ಮಣ್-157,
ಶಿವಮೂರ್ತಿ ಹೊದಲ-172,
ಟಿ.ಎಲ್ ಸುಂದರೇಶ್-205.

ಮುತ್ತೂರು ಹೋಬಳಿಯಲ್ಲಿ ಗಮನ ಸೆಳೆದ ಹೊಸಬರ ಪೈಪೋಟಿ

ಮುತ್ತೂರು ಹೋಬಳಿಯಲ್ಲಿ ವಿಕ್ರಮ್ ಹಾಗೂ ಪ್ರದೀಪ್ ಈ ಹಿಂದಿನ ಅವಧಿಯಲ್ಲಿದ್ದರು. ಸುರೇಶ ಹೆದ್ದೂರು ಮೊದಲ ಬಾರಿಗೆ ಆಗಮಿಸಿದ್ದಾರೆ. ಇಲ್ಲಿ ಹೊಸಬರಾದ ಸುಧಾಕರ್ ತಟ್ಟಾಪುರ, ಪ್ರಶಾಂತ್ ಕುಮಾರ್, ಗೋಪಾಲ ಕೃಷ್ಣ ಕಬಸೆ ಪ್ರಬಲ ಪೈಪೋಟಿ ನೀಡಿದ್ದರು.

ಪಡೆದ ಮತ:
ಗೋಪಾಲಕೃಷ್ಣಕೆ.ಜಿ-50,
ಕೂರಣಕಟ್ಟೆ – ಪ್ರದೀಪ್-84,
ಪ್ರಶಾಂತ್ ಕುಮಾರ್-58,
ಕಬಸ್, ವಿಕ್ರಮ್-93,
ಕುಪ್ಪಳಿ ಸುಧಾಕರ್ ಟಿ ಎಸ್ -58,
ಹೆಚ್ ಡಿ ಸುರೇಶ -69.

ಮಂಡಗದ್ದೆ ಹೋಬಳಿಯಲ್ಲಿ ರಾಮಚಂದ್ರ ಪ್ರಾಬಲ್ಯ!

ಮಂಡಗದ್ದೆ ಅತೀ ಹೆಚ್ಚು ಮತಗಳಿದ್ದ ಹೋಬಳಿ. ಇಲ್ಲಿಯೇ ಸುಮಾರು 900 ಮತಗಳಿದ್ದವು. ಇಲ್ಲಿ ಮುಡುಬ ರಾಘವೇಂದ್ರ ಅತೀ ಹೆಚ್ಚು 447 ಮತ ಪಡೆದಿದ್ದಾರೆ. ಬಳಿಕ ಮಾಜಿ ಅಧ್ಯಕ್ಷರಾದ ಮಟ್ಟಿನಮನೆ ರಾಮಚಂದ್ರ ಪಡೆದಿದ್ದಾರೆ. ರಾಮಚಂದ್ರ ಸಿಂಡಿಕೇಟ್ ಗೆಲುವು ಸಾಧಿಸಿದೆ. ಹಿರಿಯ ಸಹಕಾರಿ ಚಿಡುವ ಮಂಜುನಾಥ್ ಗೆಲುವು ಸಾಧಿಸಿದ್ದಾರೆ.

ಪಡೆದ ಮತ:
ಟಿ.ಅಣ್ಣಪ್ಪ-179,
ಎಸ್.ವಿ ದೀಪಕ್-243,
ಮಹೇಶ್ ನಾಯ್ಕ-355,
ಮೋಹನ್ ಎಂ.ಸಿ-336,
ಚಿಡುವ ಮಂಜುನಾಥ್-295,
ಮುಡುಬ ರಾಘವೇಂದ್ರ-449,
ಮಟ್ಟಿನಮನೆ ರಾಮಚಂದ್ರ- 447,
ಈ.ಎಸ್ ಶ್ರೀಧರಮೂರ್ತಿ-278,
ಕಲ್ಲುಕೊಪ್ಪ ಸುರೇಶ್-265,
ಈ ಎನ್ ಹರಿಯಪ್ಪ -171,
ಎಂ ಎಸ್ ಹರೀಶ್ -281.

ಮುಡುಬ ರಾಘವೇಂದ್ರಗೆ ತಾಲೂಕಿನಲ್ಲೇ ಅತೀ ಹೆಚ್ಚು ಮತ.!

ತೀರ್ಥಹಳ್ಳಿ ಆರ್ಯ ಈಡಿಗರ ಚುನಾವಣೆಯಲ್ಲಿ ಯುವ ಮುಖಂಡ ಹಾಗೂ ಎಲ್ಲರ ಕಷ್ಟ ಸುಖದಲ್ಲಿ ಜೊತೆಯಾಗಿರುವ ಮುಡುಬ ರಾಘವೇಂದ್ರ ಅವರು ಅತಿ ಹೆಚ್ಚು ಮತ ಗಳಿಸುವ ಮೂಲಕ ತಾಲೂಕಿನಲ್ಲಿಯೇ ಅತಿ ಹೆಚ್ಚು ಮತ ಗಳಿಸಿ ಗೆಲುವನ್ನು ಸಾಧಿಸಿದ್ದಾರೆ. ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಮುಡುಬ ರಾಘವೇಂದ್ರ ಅವರು ಪಕ್ಷಾತೀತವಾಗಿ ಕೂಡ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯ ಕಾರ್ಯಧ್ಯಕ್ಷರಾಗಿಯು ಕೆಲಸ ಮಾಡುತ್ತಿರುವ ರಾಘವೇಂದ್ರ ಅವರು ಮಂಡಗದ್ದೆ ಹೋಬಳಿಯಿಂದ ಸ್ಪರ್ಧೆ ಮಾಡಿದ್ದರು. ಮಂಡಗದ್ದೆ ಹೋಬಳಿಯಿಂದ ಸುಮಾರು 447 ಮತಗಳನ್ನು ಗಳಿಸುವ ಮೂಲಕ ಅತಿ ಹೆಚ್ಚು ಮತವನ್ನು ತೀರ್ಥಹಳ್ಳಿ ತಾಲೂಕಿನಿಂದಗಳಿಸಿ ಜಯಭೇರಿ ಭಾರಿಸಿದ್ದಾರೆ. ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.