ತೀರ್ಥಹಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಕಬಡ್ಡಿ ಲೀಗ್!
– ಮಾ.9ಕ್ಕೆ ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ಕಬಡ್ಡಿ ಪಂದ್ಯಾವಳಿ!
– ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ: ನಯನಾ ಶೆಟ್ಟಿ ಸಾರಥ್ಯ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದಲ್ಲಿ ಕಬಡ್ಡಿ ಪಂದ್ಯಾವಳಿ ನಡೆಯುತ್ತಿದ್ದು ಇದರ ಸಾರಥ್ಯವನ್ನು ನಯನಾ ಶೆಟ್ಟಿ ವಹಿಸಲಿದ್ದಾರೆ. ಮಲೆನಾಡ ಮಹಿಳಾ ಟ್ರಸ್ಟ್ ಈ ಹಿಂದಿನಿಂದಲೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದಿದೆ. ಇದೀಗ ಮಲೆನಾಡ ಮಹಿಳಾ ಟ್ರಸ್ಟ್ (ರಿ) ತೀರ್ಥಹಳ್ಳಿ ಇವರ ವತಿಯಿಂದ, ನಯನಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಅಹ್ವಾನಿತ ತಂಡಗಳ ಹೊನಲು ಬೆಳಕಿನ ಲೀಗ್ ಮಾದರಿಯ ಮಹಿಳೆಯರ ಕಬಡ್ಡಿ ಪಂದ್ಯಾವಳಿಯನ್ನು ದಿನಾಂಕ: 09-03-2024 ರ ಶನಿವಾರ ತೀರ್ಥಹಳ್ಳಿಯ ಸಾಂಸ್ಕೃತಿಕ ಮಂದಿರದ ಆವರಣದಲ್ಲಿ ನಡೆಸಲಾಗುವುದು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ. ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತ ತಂಡಗಳು ಪ್ರಥಮ ಬಹುಮಾನ 35,000, ದ್ವಿತೀಯ ಬಹುಮಾನ 25,000, ತೃತೀಯ ಬಹುಮಾನ 15,000 ಹಾಗೂ ಚತುರ್ಥ ಬಹುಮಾನ 10,000 ಪಡೆದುಕೊಳ್ಳಲಿವೆ.
ಹೆಚ್ಚಿನ ಮಾಹಿತಿ ಬೇಕಾದಲ್ಲಿ
8073170053, 9110438570, 7411476020, 8618496122 ಈ ನಂಬರ್ ಗಳಿಗೆ ಸಂಪರ್ಕಿಸಬಹುದು.
