ಸರ್ಕಾರಿ ಕಚೇರಿ, ವಾಹನಗಳ ಪೂಜೆ!
– ತೀರ್ಥಹಳ್ಳಿ ಮೆಸ್ಕಾಂ ಅಲ್ಲಿ ಯಂತ್ರ, ವಾಹನ ಪೂಜೆ
– ಪಟ್ಟಣ ಪಂಚಾಯತ್ ವಾಟರ್ ಘಟಕ ಪೂಜೆ
– ಅಬಕಾರಿ, ತಹಸೀಲ್ದಾರ್ ವಾಹನಗಳಿಗೆ ಅದ್ದೂರಿ ಪೂಜೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಆಯುಧ ಪೂಜೆ ಅಂಗವಾಗಿ ಸರ್ಕಾರಿ ಕಚೇರಿ, ವಾಹನಗಳ ಪೂಜೆ ನಡೆಯಿತು.
ಇನ್ನು ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಮೆಸ್ಕಾಂ ಕಚೇರಿಯಲ್ಲಿ ಯಂತ್ರಗಳು, ಟಿಸಿ, ವಾಹನಗಳಿಗೆ ಪೂಜೆ ಮಾಡಲಾಯಿತು. ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.
ನೀರು ಎತ್ತುವ ಘಟಕಕ್ಕೆ ಪೂಜೆ
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ವತಿಯಿಂದ ಇಡಿ ಪಟ್ಟಣಕ್ಕೆ ನೀರು ಎತ್ತುವ ಬಾಲೆಬೈಲು ಬಳಿ ತುಂಗಾ ನದಿಯ ಪಕ್ಕದ ವಾಟರ್ ಘಟಕ ಪೂಜೆ ಮಾಡಲಾಯಿತು. ಈ ವೇಳೆ ಅಧ್ಯಕ್ಷರಾದ ಗೀತಾ ರಮೇಶ್, ಸೇರಿದಂತೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.
ಅಬಕಾರಿ, ತಹಸೀಲ್ದಾರ್ ವಾಹನಗಳಿಗೆ ಅದ್ದೂರಿ ಪೂಜೆ
ತೀರ್ಥಹಳ್ಳಿ ತಹಸೀಲ್ದಾರ್ ಕಚೇರಿಯಲ್ಲಿ ಪೂಜೆ ಮಾಡಿದ್ದು, ತಹಸೀಲ್ದಾರ್, ಅಬಕಾರಿ, ಸಿಡಿಪಿಓ ವಾಹನಗಳಿಗೆ ಪೂಜೆ ಮಾಡಲಾಯಿತು. ಚಾಲಕರು ಹಾಜರಿದ್ದರು.