ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಮ್ಮರಡಿ ಘಟಕದ 2ನೇ ವರ್ಷದ ವಾರ್ಷಿಕೋತ್ಸವ..!
– ಭಾನುವಾರ ಕಮ್ಮರಡಿಯಲ್ಲಿ ಸ್ವಚ್ಛ ಕಮ್ಮರಡಿ ಆಂದೋಲನ..!
– ಮಾ.20 ರಂದು ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಪೌರಾಣಿಕ ಯಕ್ಷಗಾನ
NAMMUR EXPRESS NEWS
ತೀರ್ಥಹಳ್ಳಿ: ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಮ್ಮರಡಿ ಘಟಕದ 2 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಮ್ಮರಡಿ ಘಟಕ ಹಾಗೂ ಭಾರತೀಯ ಯೋಗ ಶಿಕ್ಷಣ ಪುರುಷ ಮತ್ತು ಮಹಿಳಾ ಘಟಕ ಕಮ್ಮರಡಿ ವತಿಯಿಂದ ಮಾ.17 ರ ಭಾನುವಾರ ಕಮ್ಮರಡಿಯ ಸುತ್ತಮುತ್ತಲಿನ ಎಲ್ಲಾ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಮ್ಮರಡಿಯನ್ನು ಸ್ವಚ್ಛ ಹಾಗೂ ಸುಂದರವಾಗಿ ಮಾಡುವುದಕ್ಕಾಗಿ ನಮ್ಮ ಕಮ್ಮರಡಿ ನಮ್ಮ ಹೆಮ್ಮೆ ಎಂಬ ವಿಶೇಷ ಸ್ವಚ್ಛತಾ ಆಂದೋಲನವನ್ನು ಕಮ್ಮರಡಿಯ ಸಜ್ಜನ ನಾಗರಿಕ ಬಂಧುಗಳ ಸಹಕಾರದೊಂದಿಗೆ ನಡೆಸಲಾಗುವುದು.
ನಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿಡುವುದು ನಮ್ಮ ಆದ್ಯ ಕರ್ತವ್ಯ. ಈ ಸ್ವಚ್ಛತಾ ಆಂದೋಲನದಲ್ಲಿ ಕಮ್ಮರಡಿಯ ಸುತ್ತಮುತ್ತಲಿನ ಎಲ್ಲರೂ ಪಾಲ್ಗೊಂಡು ಸ್ವಚ್ಛ ಹಾಗೂ ಸುಂದರ ಮಾದರಿ ಕಮ್ಮರಡಿಯನ್ನಾಗಿ ಮಾಡುವ ಶಪಥ ಮಾಡೋಣ ಎಂದು ತಂಡ ವಿನಂತಿಸಿದೆ. ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು, ಶ್ರೀಮಠ ಹರಿಹರಪುರ ಇವರ ಕೃಪಾಶೀರ್ವಾದದೊಂದಿಗೆ ಮಾ.20 ರ ಬುಧವಾರ ಸಂಜೆ 6:30ಕ್ಕೆ ಕಮ್ಮರಡಿಯ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಎಂಬ ಪೌರಾಣಿಕ ಯಕ್ಷಗಾನ ನಡೆಯಲಿದೆ. ಸರ್ವರಿಗೂ ಆದರದ ಸ್ವಾಗತ.
