Categories
ತೀರ್ಥಹಳ್ಳಿ

ಸಾಲಕ್ಕೆ ಹೆದರಿ ಯುವ ರೈತ ಆತ್ಮಹತ್ಯೆ!

ಸಾಲಕ್ಕೆ ಹೆದರಿ ಯುವ ರೈತ ಆತ್ಮಹತ್ಯೆ!
– ತೀರ್ಥಹಳ್ಳಿ ತಾಲೂಕಿನ ಕೈಮರ ಸಮೀಪ ಘಟನೆ
– ಸಾಲಗಾರರ ಕಿರಿಕಿರಿಗೆ ಹೆದರಿ ಜೀವ ಬಿಟ್ಟನೇ…?

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಮರ ಸಮೀಪ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹಾಗಲಮನೆ ವಾಸಿ ರೈತ ಕೌಶಿಕ್ 30 ವರ್ಷ ಎಂಬ ಯುವಕ ಸಾಲಬಾಧೆಗೆ ವಾರಾಹಿ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಶವ ಪತ್ತೆಯಾಗಿದೆ.
ಮಾಗರವಳ್ಳಿ ಸೊಸೈಟಿ, ಧರ್ಮಸ್ಥಳ ಸಂಘ., ಮೈಕ್ರೋ ಫೈನಾನ್ಸ್ ಸೇರಿದಂತೆ ಹಲವು ಕಡೆ ಬಡ್ಡಿಗೆ ಸಾಲ ಪಡೆದಿರುವ ಯುವಕ ಸಾಲದ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಾರಿ ಅಡಿಕೆ ಬಂದಿರುವ ಎಲೆ ಚುಕ್ಕಿ ರೋಗದಿಂದ ಕಂಗೆಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ತಾಯಿ ಮತ್ತು ಮಗ ಇಬ್ಬರೇ ಇದ್ದು, ತಂಗಿಗೆ 6 ವರ್ಷಗಳ ಹಿಂದೆಯೇ ವಿವಾಹ ಆಗಿತ್ತು. ಸಾಲದ ಸಮಸ್ಯೆ ಕಾರಣ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.