ಯುವ ಮುಖಂಡ ಶ್ರೀದೀಪ್ ಬಸವಾನಿ ಬಿಜೆಪಿಗೆ
– ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪಕ್ಷ ಸೇರ್ಪಡೆ
– ಮುತ್ತೂರು ಹೋಬಳಿಯ ಪ್ರಮುಖರು ಹಾಜರ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಬಸವಾನಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಯುವ ಮುಖಂಡರೂ ಆದ ಶ್ರೀದೀಪ್ ಬಸವಾನಿ ಅವರು ಬಿಜೆಪಿ ಸಿದ್ದಾಂತ ಹಾಗೂ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಅವರ ಅಭಿವೃದ್ಧಿ ಕಾರ್ಯ ಹಾಗೂ ಅವರ ನಾಯಕತ್ವಕ್ಕೆ ಬೆಂಬಲ ನೀಡುವ ಸಲುವಾಗಿ ಸ್ಥಳೀಯ ಎಲ್ಲಾ ನಾಯಕರ ಸಹಕಾರದೊಂದಿಗೆ ಬಿಜೆಪಿ ಸೇರ್ಪಡೆ ಆಗಿದ್ದಾರೆ. ಪಕ್ಷ ಸೇರ್ಪಡೆ ವೇಳೆ ತೀರ್ಥಹಳ್ಳಿ ಬಿಜೆಪಿ ನಾಯಕರಾದ ಹೆದ್ದೂರು ನವೀನ್, ಕುಕ್ಕೆ ಪ್ರಶಾಂತ್, ಶಶಿಕಾಂತ್ ಅತ್ತೀಕೋಡಿಗೆ, ಶ್ರೀಕಾಂತ್, ಅಶೋಕ್ ದೇವಂಗಿ, ಶಿವಕುಮಾರ್, ಅರುಣ್ ತೋರಳಿ, ವಾಸು ಹಾರೋಗೋಳಿಗೆ, ಅಣ್ಣಪ್ಪ ಸೇರಿದಂತೆ ಹಲವರು ಇದ್ದರು.
…….
ಶ್ರೀದೀಪ್ ಬಸವಾನಿ ಅವರಿಗೆ ಶುಭಾಶಯಗಳು
ಶ್ರೀದೀಪ್ ಬಸವಾನಿ ಅವರು ಬಿಜೆಪಿ ತತ್ವ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಬಂದಿರುವುದು ಸಂತೋಷವಾಗಿದೆ. ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಲಿ.
ಶುಭಾಶಯ ಕೋರುವವರು
ಶಿವುಕುಮಾರ್ (ಲಕ್ಷ್ಮೀಪುರ) ಶುಂಠಿಕಟ್ಟೆ
