Categories
ಉಡುಪಿ

ಕೆಂಡ ಸೇವೆ ವೇಳೆ ಎಡಗಿ ಬಿದ್ದ ಅಯ್ಯಪ್ಪ ಮಾಲಾಧಾರಿ!

ಕೆಂಡ ಸೇವೆ ವೇಳೆ ಎಡಗಿ ಬಿದ್ದ ಅಯ್ಯಪ್ಪ ಮಾಲಾಧಾರಿ!
– ಉಡುಪಿಯ ಮಲ್ಪೆಯಲ್ಲಿ ನಡೆದ ಘಟನೆ!

NAMMUR EXPRESS NEWS
ಉಡುಪಿ: ಅಯ್ಯಪ್ಪ ಮಂದಿರದ ವಾರ್ಷಿಕೋತ್ಸವದ ಕೆಂಡ ಸೇವೆ ವೇಳೆ ಅಯ್ಯಪ್ಪ ಮಾಲಾಧಾರಿಯೊಬ್ಬರು ಬೆಂಕಿಗೆ ಬಿದ್ದ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ. ಅಯ್ಯಪ್ಪ ಮಂದಿರದ ವಾರ್ಷಿಕೋತ್ಸವದ ಕೆಂಡ ಸೇವೆಯು ಪ್ರತೀ ವರ್ಷದಂತೆ ಈ ವರ್ಷವೂ ನಡೆದಿದೆ. ಸಾಂಪ್ರದಾಯಿಕವಾಗಿ ಮಾಲಾಧಾರಿಗಳು ಕೆಂಡದ ಮೇಲೆ ಹೋಗಲು ಪ್ರಾರಂಭ ಮಾಡಿದ್ದರು. ಮಾಲಾಧಾರಿ ಓಡಿ ಬರುತ್ತಿದ್ದಂತೆ ನೆಲಕ್ಕೆ ಎಡವಿ ನೇರವಾಗಿ ಬಂದು ಕೆಂಡದ ಮೇಲೆ ಬಿದ್ದಿದ್ದಾರೆ. ಮಾಲಾಧಾರಿ ಆಯತಪ್ಪಿ ಕೆಂಡದ ಮೇಲೆ ಬೀಳುತ್ತಿದ್ದಂತೆ ಉಳಿದ ಮಾಲಾಧಾರಿಗಳೆಲ್ಲ ಓಡಿ ಬಂದು ಅವರನ್ನು ಮೇಲೆತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ದೃಶ್ಯವನ್ನು ಕೆಂಡ ಹಾಯುವುದನ್ನು ನೋಡಲು ಬಂದಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.