Categories
ಉಡುಪಿ

ಬ್ರಹ್ಮಾವರ: ಪತ್ನಿಯನ್ನೇ ಕತ್ತಿಯಿಂದ ಕೊಲೆಗೈದ ಪತಿ!!

ಬ್ರಹ್ಮಾವರ: ಪತ್ನಿಯನ್ನೇ ಕತ್ತಿಯಿಂದ ಕೊಲೆಗೈದ ಪತಿ!!

NAMMUR EXPRESS NEWS
ಕುಂದಾಪುರ: ಇತ್ತೀಚೆಗೆ ಕೊಲೆ ಪ್ರಕರಣಗಳು ಹೆಚ್ಚಾಗಿದ್ದು, ಪತಿ ಪತ್ನಿಯನ್ನು, ಪತ್ನಿ ಪತಿಯನ್ನು ಕೊಲೆಗೈಯುವ ವರದಿಗಳು ಸಾಮಾನ್ಯವಾಗಿ ಬಿಟ್ಟಿವೆ. ಬ್ರಹ್ಮಾವರದಲ್ಲೊಂದು ಪ್ರಕರಣ ಇದೇ ರೀತಿ ದಾಖಲಾಗಿದೆ.
ಮೊಬೈಲ್ ಹೆಚ್ಚಾಗಿ ನೋಡುತ್ತಾಳೆ ಎಂಬ ಕಾರಣಕ್ಕೆ ಇಲ್ಲೊಬ್ಬ ತನ್ನ ಪತ್ನಿಯನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಿದ್ದಾನೆ. ಈ ಘಟನೆ ನಡೆದಿರೋದು ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ. ಗಣೇಶ್ ಪೂಜಾರಿ ಬಂಧಿತ ಆರೋಪಿ. ಪತ್ನಿ ರೇಖಾ ಮೃತ ದುರ್ದೈವಿ.
ಆರೋಪಿ ಗಣೇಶ್ ಪೂಜಾರಿ ವಿಪರೀತ ಮದ್ಯ ವ್ಯಸನ ಚಟವುಳ್ಳವನಾಗಿದ್ದ ಎಂದು ತಿಳಿದು ಬಂದಿದೆ. ಅವನಿಗೆ ಪತ್ನಿ ರೇಖಾ ವಿಪರೀತವಾಗಿ ಮೊಬೈಲ್ ಬಳಸುತ್ತಾಳೆ ಎಂಬ ಸಿಟ್ಟಿತ್ತಂತೆ. ನಿನ್ನೆ ಕೂಡ ಮದ್ಯ ಸೇವನೆ ಮಾಡಿ ಬಂದಿದ್ದ ಆತ ಪತ್ನಿಯೊಂದಿಗೆ ಜಗಳವಾಡಿ ರಾತ್ರಿ 11:30 ರ ಸುಮಾರಿಗೆ ಆಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಿ ಗಣೇಶ್ ಪೂಜಾರಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.