Categories
ಉಡುಪಿ

ಉಡುಪಿ ನಗರದಲ್ಲಿ ನಾಯಿಗಳ ಹಾವಳಿ.. ಕೇಳೋರಿಲ್ಲ!

ಉಡುಪಿ ನಗರದಲ್ಲಿ ನಾಯಿಗಳ ಹಾವಳಿ.. ಕೇಳೋರಿಲ್ಲ!
– ಜನರಿಗೆ ಓಡಾಡಲು ನಾಯಿ ಭಯ: ನಿಯಂತ್ರಣ ಏಕಿಲ್ಲ..?
– ಶಾಲೆಗೆ ಹೋಗುವ ಮಕ್ಕಳ ಮೇಲೂ ನಾಯಿಗಳ ಅಟ್ಯಾಕ್

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಕರಾವಳಿಯ ಪ್ರಮುಖ ನಗರ ಉಡುಪಿಯಲ್ಲಿ ಇದೀಗ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ.
ಪ್ರತಿ ಗಲ್ಲಿ ಗಲ್ಲಿಯಲ್ಲೂ ನಾಯಿಗಳು ಗುಂಪು ಗುಂಪಾಗಿ ಓಡಾಡುತ್ತಿವೆ.
ಅನೇಕರ ಮೇಲೆ ದಾಳಿ ಕೂಡ ಮಾಡಿವೆ. ಆದ್ರೂ ನಗರ ಸಭೆ ಅದಕ್ಕೆ ಸಂಬಂಧಿಸಿದಂತೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರ ಸಭೆ ಬೀದಿ ನಾಯಿಗಳ ಕಾಟ ಹೆಚ್ಚಾದರೆ ನಮಗೆ ದೂರು ನೀಡಿ ಎಂದು ಹೇಳುತ್ತಾರೆ. ಆದರೆ ವಿಷಯವನ್ನು ಪ್ರಸ್ತಾಪಿಸಿದಾಗ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಜನರು ವಿರೋಧ ವ್ಯಕ್ತಪಡಿಸಿದ್ದಾರೆ.
ಉಡುಪಿ ನಗರದ ಕೆಲವು ಕಡೆ ರಾತ್ರಿಯ ವೇಳೆ ಜನರನ್ನು ಅಟ್ಟಿಸಿಕೊಂಡು ಬರುವುದು, ವಾಹನಗಳನ್ನು ಬೆನ್ನಟ್ಟಿ ಬರುವುದು ಸಾಮಾನ್ಯವಾಗಿದೆ. ಆದರೆ ಕೆಲವು ಕಡೆಗಳಲ್ಲಿ ಈ ತೊಂದರೆ ಬೆಳಗಿನ ಜಾವವೇ ಪ್ರಾರಂಭಗೊಂಡಿರುತ್ತದೆ. ಪಾದಾಚಾರಿಗಳು, ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು, ಉದ್ಯೋಗಕ್ಕೆ ತೆರಳುವವರು, ವಾಕಿಂಗ್ ಮಾಡುವವರು ಇದರಿಂದ ಕಿರಿಕಿರಿ ಅನುಭವಿಸುವಂತಾಗಿದೆ. ನಾಯಿಗಳ ಸಂತಾನಶಕ್ತಿ ನಿಯಂತ್ರಣ ಶಸ್ತ್ರಚಿಕಿತ್ಸೆ ಮತ್ತು ರೇಬಿಸ್ ಚಿಕಿತ್ಸೆಯನ್ನು ಹೊರತುಪಡಿಸಿದರೆ, ನಗರಸಭೆಯು ಪ್ರತಿದಿನದ ಸಮಸ್ಯೆಯನ್ನು ಪರಿಹರಿಸುವಲ್ಲಿ ಉದಾಸಿನ ಮಾಡುತ್ತಿದೆ ಎನ್ನುತ್ತಿದ್ದಾರೆ ಇಲ್ಲಿನ ನಿವಾಸಿಗಳು.

ಉಡುಪಿ ನಗರ ಆಡಳಿತ ಹೇಳಿದ್ದೇನು?

ಪೌರಾಯುಕ್ತರಾದ ಮಹಾಂತೇಶ್ ಹಂಗರಗಿ ಅವರು ನಾಯಿಗಳನ್ನು ಸ್ಥಳಾಂತರಿಸುವಂತಿಲ್ಲ, ಬದಲಿಗೆ ಎಬಿಸಿ ನೀಡಲು ಕ್ರಮವನ್ನು ತೆಗೆದುಕೊಳ್ಳಲಾಗುವುದು ಮತ್ತು ಅವುಗಳಿಗೆ ಪ್ರತ್ಯೇಕ ಬೈಲಾ ಮಾಡುವ ಕುರಿತು ಚರ್ಚಿಸಲು ತಿಂಗಳೊಳಗಾಗಿ ಸಭೆಯನ್ನು ನಡೆಸಿ, ಯೋಜನೆ ರೂಪಿಸುತ್ತೇವೆ, ಹಾಗೆಯೇ ಬೀದಿನಾಯಿಗಳಿಗೆ ಆಹಾರ ನೀಡುವವರಿಗೆ ಪ್ರತ್ಯೇಕ ಜಾಗದಲ್ಲಿ ನೀಡುವಂತೆ ಆದೇಶ ಹೊರಡಿಸುತ್ತೇವೆ ಎಂಬ ಭರವಸೆಯನ್ನು ನೀಡಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.