Categories
ಉಡುಪಿ

ಬರೋಬ್ಬರಿ 71 ಕೋಟಿ ರೂ. ಸಂಗ್ರಹಿಸಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರ!

ಬರೋಬ್ಬರಿ 71 ಕೋಟಿ ರೂ. ಸಂಗ್ರಹಿಸಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರ!

– ಈ ಭಾರಿ ಸಂಗ್ರಹದಲ್ಲಿಮೂರು ಕೋಟಿ ರೂ. ಹೆಚ್ಚಳ!
– ರಾಜ್ಯದಲ್ಲೇ ಅತೀ ಹೆಚ್ಚು ಆದಾಯ ಗಳಿಸುವ ದೇವಸ್ಥಾನ ಎಂಬ ಹೆಗ್ಗಳಿಕೆ!

NAMMUR EXPRESS NEWS
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ಅನೇಕ ರಾಜ್ಯಗಳಿಂದ, ಬೇರೆ ಬೇರೆ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಇದೀಗ ಕ್ಷೇತ್ರದ ವಾರ್ಷಿಕ ಆದಾಯವು ವರ್ಷದಿಂದ ವರ್ಷಕ್ಕೆ ಏರಿಕೆ ಕಂಡಿದ್ದು ಈ ಬಾರಿ ಆದಾಯ ಎಪ್ಪತ್ತೊಂದು ಕೋಟಿ ರೂ. ದಾಟಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಬರೋಬ್ಬರಿ ಮೂರು ಕೋಟಿ ರೂ. ಹೆಚ್ಚಳ ಕಂಡಿದೆ.
ಸುಬ್ರಹ್ಮಣ್ಯ ದೇವಸ್ಥಾನ ಹೊರತುಪಡಿಸಿ ರಾಜ್ಯದಲ್ಲೇ ಅತೀ ಹೆಚ್ಚು ಆದಾಯ ಗಳಿಸುವ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಈ ಮೂಕಾಂಬಿಕಾ ಕ್ಷೇತ್ರ ಪಾತ್ರವಾಗಿದೆ.
ಇಲ್ಲಿ ಪ್ರತೀದಿನ ಹನ್ನೆರಡು ಚಂಡಿಕಾ ಹೋಮಗಳು ನಡೆಯುತ್ತದೆ. ಇದರ ವಾರ್ಷಿಕ ಆದಾಯವೇ ಒಂದು ಕೋಟಿಗೂ ಅಧಿಕ ಬರುತ್ತದೆ. ಈಗೀಗ ಲಡ್ಡು ಪ್ರಸಾದಕ್ಕೆ ಕೂಡಾ ಭಾರೀ ಬೇಡಿಕೆ ಇದ್ದು ಪ್ರತಿದಿನ ಪ್ರಸಾದದ ರೂಪದಲ್ಲಿ ಆರು ಸಾವಿರಕ್ಕೂ ಅಧಿಕ ಲಡ್ಡು ವಿತರಣೆಯಾಗುತ್ತಿದೆ.
ಭಕ್ತರ ಹಣವನ್ನು ಸಾಮಾಜಿಕ ಸೇವೆಗೂ ಕೂಡಾ ದೇಗುಲ ವಿನಿಯೋಗಿಸುತ್ತಿದೆ. ಕಾಣಿಕೆ ರೂಪದಲ್ಲಿ ಚಿನ್ನಾಭರಣ, ಚಂಡಿಕಾ ಹೋಮ, ನಿತ್ಯ ಪೂಜೆ, ಆನ್ಲೈನ್ ಬುಕ್ಕಿಂಗ್ ಕೂಡಾ ಆದಾಯದ ಭಾಗವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.