Categories
ಉಡುಪಿ

ಚಕ್ರವರ್ತಿ ಸೂಲಿಬೆಲೆ ಮಾತಿಗೆ ಹೇರಿದ ನಿರ್ಬಂಧಕ್ಕೆ ವಿರೋಧ: ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ ಆಕ್ಷೇಪ

ಚಕ್ರವರ್ತಿ ಸೂಲಿಬೆಲೆ ಮಾತಿಗೆ ಹೇರಿದ ನಿರ್ಬಂಧಕ್ಕೆ ವಿರೋಧ: ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ ಆಕ್ಷೇಪ

ಉಡುಪಿ, ಜೂನ್ 20: ರಾಷ್ಟ್ರೀಯ ಚಿಂತನೆಯ ಕುರಿತು ಅವಿರತವಾಗಿ ಶ್ರದ್ಧಾ ಪೂರ್ವಕವಾಗಿ ಕೆಲಸಮಾಡುತ್ತಿರುವ ಚಕ್ರವರ್ತಿ ಸೂಲಿಬೆಲೆ ಅವರ ಮಾತುಗಳಿಗೆ ನಿರ್ಬಂಧ ಹೇರಿರುವ ಕುರಿತು ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅವರು ಮಾತನಾಡುತ್ತಾ, “ವೇದ, ಪುರಾಣ, ಮಹಾಭಾರತ ಮುಂತಾದ ಭಾರತೀಯ ಶಾಸ್ತ್ರೀಯ ಗ್ರಂಥಗಳ ಮಹತ್ವವನ್ನು ಜನರಿಗೆ ತಿಳಿಸಲು ಭಗೀರಥ ಪ್ರಯತ್ನ ನಡೆಸುತ್ತಿರುವ ಚಕ್ರವರ್ತಿ ಸೂಲಿಬೆಲೆ ಅವರ ಮಾತಿಗೆ ನಿರ್ಬಂಧ ಹೇರುವ ಕ್ರಮ ನಿಜಕ್ಕೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಅಜ್ಞಾನಕ್ಕೆ ನಿದರ್ಶನವಾಗಿದೆ” ಎಂದು ಕಟು ವಿಮರ್ಶೆ ನಡೆಸಿದರು.

“ಅವರು ತಮ್ಮ ಭಾಷಣಗಳಲ್ಲಿ ದೇಶದ ವೈಭವ, ಸಂಸ್ಕೃತಿ ಹಾಗೂ ನೆಲಜಲದ ಬಗ್ಗೆ ಗೌರವದಿಂದ ಮಾತನಾಡುತ್ತಾರೆ. ಯಾರನ್ನೂ ವೈಯಕ್ತಿಕವಾಗಿ ನಿಂದಿಸಿದ ದಾಖಲೆಗಳು ಇಲ್ಲ. ಅಖಂಡ ಭಾರತದ ಪರಿಕಲ್ಪನೆಗಾಗಿ ಕಾರ್ಯನಿರ್ವಹಿಸುತ್ತಿರುವ ದೇಶಭಕ್ತನ ಮೇಲಿನ ಈ ನಿರ್ಬಂಧ ಹಾಸ್ಯಾಸ್ಪದವಾಗಿದೆ,” ಎಂದು ಶೈಲೇಂದ್ರ ಅವರು ಅಭಿಪ್ರಾಯಪಟ್ಟರು.

ಇಂತಹ ಸಂದರ್ಭಗಳಲ್ಲಿ ಎಲ್ಲ ಹಿಂದೂ ಬಾಂಧವರು ಎಚ್ಚೆತ್ತುಕೊಂಡು, ರಾಷ್ಟ್ರಪ್ರೇಮಿಗಳ ನೆರವಿಗೆ ನಿಲ್ಲಬೇಕು, ರಾಷ್ಟ್ರೀಯ ಚಿಂತನೆಗೆ ಬೆಂಬಲ ನೀಡಬೇಕು ಎಂಬ ಮನವನ್ನೂ ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.