ವಿದ್ಯಾರ್ಥಿ ನಾಯಕತ್ವ ಉತ್ತೇಜಿಸುವ ಕಾರ್ಯಕ್ರಮ: ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ
ಹೆಬ್ರಿ, ಜುಲೈ 2: ಹೆಬ್ರಿಯ ಎಸ್.ಆರ್. ಪಬ್ಲಿಕ್ ಸ್ಕೂಲ್ ಹಾಗೂ ಎಸ್.ಆರ್. ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2025–26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಭಾವಗತವಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಎಸ್.ಆರ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಭಗವತಿ, ಉಪಪ್ರಾಂಶುಪಾಲರಾದ ದೀಪಕ್ ಎನ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗೋಪಾಲ್ ಆಚಾರ್ಯ, ಕೋಆರ್ಡಿನೇಟರ್ ಅಕ್ಷಿತಾ, ದೈಹಿಕ ಶಿಕ್ಷಣ ಶಿಕ್ಷಕರಾದ ಪುಂಡಲೀಕ ಹಾಗೂ ಇತರರು ಉಪಸ್ಥಿತರಿದ್ದು ವಿದ್ಯಾರ್ಥಿಗಳಲ್ಲಿ ನೇತೃತ್ವ ಗುಣಗಳನ್ನು ಬೆಳೆಸುವ ಬಗ್ಗೆ ಮಾತನಾಡಿದರು.
ವಿದ್ಯಾರ್ಥಿ ನಾಯಕನಾಗಿ ನಿತೀನ್ ಗೌಡ ಆರ್, ವಿದ್ಯಾರ್ಥಿ ನಾಯಕಿಯಾಗಿ ಸಿಂಚನಾ ಎಸ್ ಶೆಟ್ಟಿ ಆಯ್ಕೆಯಾಗಿದ್ದು, ದೀಪಕ್ ಬಿ.ಎಸ್ ಸಹ ನಾಯಕನಾಗಿ, ಎಸ್.ಜಿ. ತೇಜಸ್ ಆರೋಗ್ಯ ಮಂತ್ರಿಯಾಗಿ, ಯಶವಂತ್ ಎಲ್.ನಾಯ್ಕ್ ಮತ್ತು ಪಂಚಮಿ ಆರ್ ಶೆಟ್ಟಿ ಶಿಸ್ತಿನ ಮಂತ್ರಿಗಳಾಗಿ, ಸುಮಂತ್ ವಿ.ಎಚ್ ಮತ್ತು ಸಮೃದ್ಧಿ ಶೆಟ್ಟಿ ಸಾಂಸ್ಕೃತಿಕ ಮಂತ್ರಿಗಳಾಗಿ, ವರ್ಷಾ ಎಂ ಪೂಜಾರಿ ಮತ್ತು ಐಶ್ವರ್ಯ ಎಸ್ ನಾಯ್ಕ್ ಕ್ರೀಡಾ ಮಂತ್ರಿಗಳಾಗಿ ಪದಗ್ರಹಣ ಮಾಡಿದರು.
ಕಾರ್ಯಕ್ರಮ ನಿರೂಪಣೆಯನ್ನು ಜಾಹ್ನವಿ, ಸ್ವಾಗತವನ್ನು ನಿರೀಕ್ಷಾ ಮತ್ತು ವಂದನೆಯನ್ನು ಋತ್ವಿ ಶೆಟ್ಟಿ ನಿರ್ವಹಿಸಿದರು.
ಈ ಕಾರ್ಯವು ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ, ನೇತೃತ್ವ ಮತ್ತು ಸಂಘಟನಾ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಉತ್ತಮ ವೇದಿಕೆಯಾಗಿ ರೂಪುಗೊಂಡಿತು.